ಬಸವ ಕೃಷಿ ಪ್ರಶಸ್ತಿಗೆ – ಗುಜರಾತ ಸಾವಯವ ಕೃಷಿ ವಿಜ್ಞಾನ ಡಾ. ಎಂ.ಎಚ್.ಮೆಹ್ತಾ ಆಯ್ಕೆ.

ಹುನಗುಂದ ಜನೇವರಿ.13

ತಾಲೂಕಿನ ಕೂಡಲ ಸಂಗಮ ಪ್ರತಿಷ್ಠಿತ  ಲಿಂಗಾಯತ ಪಂಚಮಸಾಲಿ ಪೀಠದಿಂದ ಪ್ರತಿ ವರ್ಷ ಕೊಡುಮಾಡುವ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಯನ್ನು ೨೦೨೩- ೨೦೨೪ ನೇ ಸಾಲಿನ ಬಸವ ಕೃಷಿ ಪ್ರಶಸ್ತಿಗೆ ಗುಜರಾತ ರಾಜ್ಯದ ಅಂತರರಾಷ್ಟ್ರೀಯ ಸಾವಯವ ಕೃಷಿ ವಿಜ್ಞಾನಿ ಡಾ.ಎಂ ಎಚ್ ಮೆಹ್ತಾ ಅವರನ್ನು ಆಯ್ಕೆಯಾಗಿದ್ದು ಜ.೧೪ ರಂದು ಶ್ರೀ ಪೀಠದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ತಿಳಿಸಿದ್ದಾರೆ.ಶನಿವಾರ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟಪತಿ ಅಬ್ದುಲ್‌ ಕಲಾಂ ಸಲಹೆ ಮೇರೆಗೆ ೨೦೧೨ರಲ್ಲಿ ಕೃಷಿ ಹಾಗೂ ಕೃಷಿಕರನ್ನು ಪ್ರೇರೇಪಿಸುವ ಹಾಗೂ ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಷ್ಟ್ರ ಮಟ್ಟದಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯನ್ನು ಮೊದಲ ಬಾರಿಗೆ  ೨೦೧೨ ರಲ್ಲಿ ರಾಜಸ್ತಾನದ ರಾಜೇಂದ್ರ ಸಿಂಗ್,೨೦೧೩ ರಲ್ಲಿ ಗಾಂಧಿವಾದಿ ಅಣ್ಣಾ ಹಜಾರೆ,೨೦೧೪ರಲ್ಲಿ ಮೇಧಾ ಪಾಟ್ಕರ್,೨೦೧೫ ರಲ್ಲಿ ಡಾ.ಬಾಬಾ ಅಡಾವ,೨೦೧೬-೧೭ ರಲ್ಲಿ ತ್ರಿಪುರ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರವರಿಗೆ ,೨೦೧೮ ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀತಿ ರೂಪಿಸಿ ಕೃಷಿಕರ ಬಾಳಿನ ಪಿತಾಮಹ ಎಂದು ಪ್ರಸಿದ್ದಿಯಾದ ಎಂ ಎಸ್ ಸ್ವಾಮಿನಾಥನ್ ರವರಿಗೆ,೨೦೨೦ ನೀರಾವರಿ ಕ್ರಾಂತಿ ಮಾಡಿದ ತೆಲಂಗಾಣ ಪ್ರಕಾಶ್ ರಾವ್ ವೀರಮಲ್ಲ ಇವರಿಗೆ ಪ್ರಧಾನ ಮಾಡಿ ದೇಶದ ಗಮನ ಸೆಳೆದಿದೆ.

ಪ್ರತಿ ವರ್ಷದಂತೆ ವರ್ಷವೂ ನಿಮ್ಮೆಲ್ಲರ ಸಹಕಾರದಿಂದ ಬಸವಣ್ಣನವರ ಐಕ್ಯ ಸ್ಥಳ ಕೂಡಲ ಸಂಗಮದಲ್ಲಿ ಮಕರ ಸಂಕ್ರಾಂತಿ ಜನವರಿ ೧೪ರ ಮಂಗಳವಾರ ಬೆಳಗ್ಗೆ ೧೧ ಗಂಟೆಗೆ ನಡೆಯುವ ೧೨ ನೇ ಬಸವ ಕೃಷಿ ಸಂಕ್ರಾಂತಿ ಉತ್ಸವದಲ್ಲಿ , ಪಾದಯಾತ್ರೆ ತೃತೀಯ ವರ್ಷಾಚರಣೆ  ಹಾಗೂ ೨ಎ ಮೀಸಲಾತಿ ಚಳುವಳಿಗಾರರ ಸಭೆಯ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿಗಳ ನಗದು,ಸ್ಮರಣ ಫಲಕ,ಹಾಗೂ ತಾಮ್ರ ಪಟ ನೀಡಿ ಗೌರವಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಪಂಚಮಸಾಲಿ ರೈತ ಘಟಕದ ರಾಜ್ಯಾಧ್ಯಕ್ಷ ಅಮರೇಶ ನಾಗೂರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ,ಸಮಾಜದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮದರಿ,ಪಂಚಸೇನೆ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ,ಸೇರಿದ್ದಂತೆ ಅನೇಕರು ಇದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button