ಹೂವನೂರ ಗ್ರಾಮದಲ್ಲಿ ಸ್ವಾಭಿಮಾನಿ ಶರಣ ಮೇಳದಲ್ಲಿ – ಡಾ. ಚನ್ನಬಸವಾನಂದ ಸ್ವಾಮೀಜಿ ಹೇಳಿಕೆ.
ಹುನಗುಂದ ಜನೇವರಿ.13

ಮಾತಾಜೀ ಮಾತೆ ಮಹಾದೇವಿಯವರು ಲಿಂಗೈಕ್ಯರಾದ ಬಳಿಕ ಬಸವ ಧರ್ಮ ಪೀಠದಿಂದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಹೋರಾಟ ನಡೆದಿಲ್ಲ.ಮಾತಾಜೀ ಅವರ ಕಟ್ಟಾ ಅನುಯಾಯಿಗಳು ನಾವು,ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಮ್ಮ ಹೋರಾಟ ನಿರಂತರ ಎಂದು ಸ್ವಾಭಿಮಾನಿ ಶರಣಮೇಳದ ಪೀಠಾಧ್ಯಕ್ಷ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ಕೂಡಲಸಂಗಮ ಕ್ರಾಸ್ ಹತ್ತಿರ ಹೂವನೂರ ಗ್ರಾಮದ ಹೊರ ವಲಯದಲ್ಲಿ ೨ ವರ್ಷದ ಸ್ವಾಭಿಮಾನಿ ಶರಣ ಮೇಳದ ಉದ್ಘಾಟನಾ ಸಮಾರಂಭದ ದಿವ್ಯ ನೇತೃತ್ವವನ್ನು ವಹಿಸಿಕೊಂಡು ಮಾತನಾಡಿದ ಅವರು ಪ್ರತಿಯೊಂದು ಧರ್ಮ್ಮಗಳಿಗೂ ಒಬ್ಬ ಧರ್ಮ ಗುರು ಮತ್ತು ಧರ್ಮ ಗ್ರಂಥ ಇರತ್ತದೆ ಅದರಂತೆ.ಲಿಂಗಾಯತ ಧರ್ಮಕ್ಕೆ ೨೨ ಸಾವಿರ ವಚನ ಸಾಹಿತ್ಯವೇ ಮೂಲ ಗ್ರಂಥವಾಗಿದೆ.ಲಿಂಗಾಯತ ಧರ್ಮ ಗ್ರಂಥ ಬಿಡುಗಡೆ ಯಾಗಬೇಕು ಮತ್ತು ಕರ್ನಾಟಕ ಸರ್ಕಾರ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ನೀಡಿದ್ದು ಆದರೇ ಕೇಂದ್ರ ಸರ್ಕಾರ ಮಾನ್ಯತೆ ನೀಡುವವರಗೂ ನಮ್ಮ ಹೋರಾಟ ಇದ್ದೇ ಇರುತ್ತೇದೆ.ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಯಾರೇ ಹೋರಾಟ ಮಾಡಿದರೂ ನನ್ನ ಬೆಂಬಲವಿದೆ.ಅವರೊಂದಿಗೆ ನಾವು ಕೈಜೋಡಿಸಲು ಸಿದ್ದ.ಸ್ವತಂತ್ರ ಲಿಂಗಾಯತ ಧರ್ಮ ಪೀಠ ಸ್ಥಾಪನೆ ಮತ್ತು ಕೇಂದ್ರ ಸರ್ಕಾರ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ನೀಡಬೇಕು ಮತ್ತು ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಂತಾ ಸರ್ಕಾರ ಘೋಷಿಸಬೇಕು ಎಂದರು.ಚಿಕ್ಕಮಂಗಳೂರನ ವಿಶ್ವಧರ್ಮ ಪೀಠ ಡಾ.ಜಯಬಸವಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಸವ ಧರ್ಮ ಪೀಠ ಯಾರ ಸ್ವೊತ್ತಲ್ಲ ಕಟ್ಟಕಡೇ ವ್ಯಕ್ತಿಯ ಸ್ವೊತ್ತದು.ಸಾವಿರಾರು ಬಸವ ಶರಣರು ಕೂಡಲ ಸಂಗಮದಲ್ಲಿ ಶರಣ ಜೇನು ಗೂಡು ಕಟ್ಟಿದ್ದು ಅದರಲ್ಲಿ ಇಂದು ಕೆಟ್ಟ ಹುಳುಗಳು ಕೂಡಿ ಅಲ್ಲಿನ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ.ಬಸವಣ್ಣನವರು ವೈಚಾರಿಕ ಮತ್ತು ಆದ್ಯಾತ್ಮೀಕ ನೆಲೆಯಲ್ಲಿ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಿದ್ದಾರೆ ಅವರ ಅನುಯಾದ ನಾವು ಸ್ವಾಭಿಮಾನಿ ಶರಣರು ಯಾರು ಅಂಜುವುದು ಬೇಡ ಎಂದರು.ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಬಸವ ಧ್ವಜಾರೋಹಣವನ್ನು ನೆರವೇರಿಸಿದರು.ಬಾಣೂರು ಚನ್ನಪ್ಪ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.ಈಶ್ವರಾಧ್ಯ ಸತ್ಯಂಪೇಟಿ ಮಾತನಾಡಿದರು.ಈ ಸಂದರ್ಭದಲ್ಲಿ ಧಾರವಾಡದ ರತಿಕಾ ನೃತ್ಯ ನಿಕೇತಕನದ ಶರಣೆ ನಾಗರತ್ನಾ ನಾಗರಾಜ ಹಡಗಲಿ ಅವರಿಗೆ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದಕ್ಕೆ ವಚನ ನಾಟ್ಯ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.ವೇದಿಕೆಯಲ್ಲಿ ಸದ್ಗುರು ಮಾತೆ ಸತ್ಯದೇವಿ,ಸದ್ಗುರು ಪ್ರಭುಲಿಂಗ ಸ್ವಾಮೀಜಿ,ಪ್ರವಚನಕಾರ್ತಿ ಸದ್ಗುರು ಅಕ್ಕನಾಗಲಾಂಬಿಕಾ ಮಾತಾಜೀ,ಅಕ್ಕಮಹಾದೇವಿ ಮಠದ ಶಾಂತಾದೇವಿ ಮಾತಾಜಿ,ಚಳ್ಳಕೇರಿಯ ಗುರುಸ್ವಾಮಿ,ಸಂಗನಬಸವ ಸ್ವಾಮೀಜಿ,ಬಾಬುರಾವ ಟಂಕಸಾಲಿ,ಅಶೋಕ ಬೆಂಡಿಗೇರಿ, ಉದ್ದಿಮೆ ಜಯರಾಮ ಸೇರಿದಂತೆ ಅನೇಕರು ಇದ್ದರು.ನಾಗೇಂದ್ರ ನಿಂಬರಿಗಿ ಸ್ವಾಗತಿಸಿದರು,ಬಸವರಾಜ ಸಂಗಮದ ನಿರೂಪಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ