ಅಯೋಧ್ಯೆ ರಾಮ ಮಂದಿರ ಮಂತ್ರಾಕ್ಷತೆ ವಿತರಣೆ.
ಕಾನಾಮಡುಗು ಜನೇವರಿ.13

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಗಡಿ ಗ್ರಾಮ ಕಾನಮಡುಗು ಗ್ರಾಮದಲ್ಲಿ ಅಯೋಧ್ಯೆಯಲ್ಲಿ ಜನವರಿ 22. ರಂದು ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಅಯೋಧ್ಯೆಯಿಂದ ತಂದಿರುವ ಮಂತ್ರಾಕ್ಷತೆಯನ್ನು ತಾಲೂಕಿನ ಗಡಿಗ್ರಾಮ ಕಾನಾಮಡುಗು ದಾ.ಮ. ಐಮಡಿ ಶರಣಾರ್ಯರು ನೇತೃತ್ವದಲ್ಲಿ ದಾಸೋಹ ಮಠ ಆವರಣದಲ್ಲಿ ಹಿಂದೂ ಕಾರ್ಯಕರ್ತರು ಶನಿವಾರ ಮನೆ ಮನೆಗೂ ವಿತರಿಸಿದರು. ಗ್ರಾಮದ ಮುಖಂಡರಾದ ಜೈರಾಜ್ ಮಾತನಾಡಿ. ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣದ ಕನಸು 500 ವರ್ಷಗಳ ನಂತರ ನನಸಾಗುತ್ತಿರುವುದು ದೇಶದ ಜನತೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ರಾಮಲಾಲ್ಲ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ ಇಡೀ ದೇಶವೇ ಎದುರು ನೋಡುತ್ತಿದೆ. ಇಂತಹ ಸಂಭ್ರಮದಲ್ಲಿ ಅಯೋಧ್ಯೆಯಿಂದ ತಂದಿರುವ ಮಂತ್ರಾಕ್ಷತೆ ಮತ್ತು ಕರಪತ್ರಗಳನ್ನು ಮನೆ ಮನೆಗೂ ತಲುಪಿಸಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಗ್ರಾಮದ ಬಾಲಪ್ಪ. ಬಿ ಜಿ ಜಗದೀಶ್. ದುರುಗಪ್ಪ. ವೀರೇಶ್.ನಾಗರಾಜ್.ಶರಣಪ್ಪ. ಮಂಜುನಾಥ್. ಮನೋಜ್ ಕುಮಾರ್. ರುದ್ರೇಶ್ ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ