ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್ ಸ್ಕೌಟ್ ಆ್ಯಂಡ್ ಗೈಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ.

ಮನಗೂಳಿ ಆ.17

ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ದಿನಾಂಕ 16.08.2024 ರಂದು ಕ್ರೀಡೆ ಎನ್.ಎಸ್.ಎಸ್ ಸ್ಕೌಟ್ ಆ್ಯಂಡ್ ಗೈಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಜೊತೆಗೆ ಅಂತಿಮ ವರ್ಷದ ಬಿ.ಎ/ಬಿ.ಕಾಂ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು, ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ರವಿಕುಮಾರ್ ಅರಳಿ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಝಳಕಿ. ಇವರು ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಾಧನೆ ಎಂಬುದು ಸಾಧಕನ ಸ್ವತ್ತು ಹೊರತು ಸೋಮಾರಿಯ ಸ್ವತ್ತು ಅಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಯು ಸಂಸ್ಕಾರ ನೈತಿಕತೆ ಮಾನವೀಯ ಮೌಲ್ಯಗಳು ಬೆಳೆಸಿ ಕೊಳ್ಳಬೇಕು. ಜೊತೆಗೆ ಕೆಲಸದ ಬದಲಾವಣೆ ವಿಶ್ರಾಂತಿ ನಿರಂತರವಾಗಿ ಕೆಲಸ ಮಾಡುತ್ತಾ ದೇಶದ ಪ್ರಗತಿಗೆ ಯುವಜನರು ಕೊಡುಗೆಗಳನ್ನು ನೀಡಬೇಕು. ಮೌಲ್ಯಗಳೊಂದಿಗೆ ಬದುಕ ಬೇಕು ಸಮಾಜಕ್ಕೆ ದೊಡ್ಡ ಆಸ್ತಿ ಆಗಬೇಕು ಸ್ವಾಭಿಮಾನದ ಬದುಕನ್ನು ರೂಡಿಸಿ ಕೊಳ್ಳಬೇಕು ಎಂಬ ವಿಚಾರಗಳನ್ನ ಅನೇಕ ದೃಷ್ಟಾಂತಗಳ ಮೂಲಕ ವಿವರಿಸಿದರು. ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಚಂದ್ರಶೇಖರ್ ಗೌಡ ಪಾಟೀಲ್ ಅವರು ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಗುರುಗಳ ಪಾತ್ರ ಬಹಳ ಮಹತ್ವವಾದದ್ದು ಗ್ರಾಮದ ವಿದ್ಯಾರ್ಥಿಗಳು ಚಾರ್ಟೆಡ್ ಅಕೌಂಟೆಂಟ್ ಅಂತಹ ಪದವಿಯನ್ನು ಪಡೆದು ಕೊಳ್ಳುವ ಮೂಲಕ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಗಿಟ್ಟಿಸಿ ಕೊಳ್ಳಬೇಕು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಕಡಿಮೆ ಇದೆಯೋ ಅಂತಹ ಜ್ಞಾನ ಮತ್ತು ಕೌಶಲ್ಯವನ್ನು ಪಡೆದು ಕೊಳ್ಳುವ ಮೂಲಕ ಜೀವನವನ್ನು ರೂಪಿಸಿ ಕೊಳ್ಳಬೇಕು ಎಂದು ತಿಳಿಸಿದರು. ಶ್ರೀ ಅನಿಲ್ ಚೌಹಾನ್ ಇತಿಹಾಸ ಸಹಾಯಕ ಪ್ರಾಧ್ಯಾಪಕರು ಎಲ್ಲ ಉಪನ್ಯಾಸಕರ ಪರವಾಗಿ ವಿದ್ಯಾರ್ಥಿಗಳಿಗೆ ಆಶಯ ನುಡಿಗಳನ್ನು ತಿಳಿಸುತ್ತಾ ನಮಗೆ ಭಗವಂತ ಯಾವುದನ್ನ ಕೊಟ್ಟಿದ್ದಾನೆ ಅದರಲ್ಲಿ ಸಂತೃಪ್ತಿ ಸಂಭ್ರಮ ಪಡುವುದನ್ನ ಕಲಿಯಬೇಕು ನಮ್ಮ ಹಿಂದಿನ ಸಾಧನೆ ನಾವು ಮುರಿಯಬೇಕೆ ಹೊರತು ಇನ್ನೊಬ್ಬ ರೊಂದಿಗೆ ನಮ್ಮನ್ನು ಹೋಲಿಸಿ ಕೊಂಡು ಕೀಳರಮೆ ಪಡಬಾರದು ಎಂಬ ಚೇತುಹಾರಿ ಮಾತುಗಳನ್ನ ಬೋಧಿಸಿದರು. ಅನೇಕ ಬಿ.ಎ ಮತ್ತು ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಮೂರು ವರ್ಷದ ಪದವಿ ಜೀವನದಲ್ಲಿ ತಾವು ಕಂಡು ಉಂಡ ಅನುಭವಗಳ ಬುತ್ತಿಯನ್ನು ಸಭಿಕರ ಮುಂದೆ ಬಿಚ್ಚಿಟ್ಟು ಕಾವ್ಯಮಯವಾಗಿ ತಮ್ಮ ಗುರುಗಳಿಗೆ ನುಡಿ ನಮನಗಳನ್ನು ತಿಳಿಸಿದರು ಜೊತೆಗೆ ಕಾಲೇಜಿಗೆ ಕಿರು ಕಾಣಿಕೆಗಳನ್ನು ಸಲ್ಲಿಸಿದರು. ಶ್ರೀಮತಿ ನಂದಿನಿ ಸಿ.ಎಸ್ ಕನ್ನಡ ಸಹಾಯಕ ಪ್ರಾಧ್ಯಾಪಕರು ಇಡೀ ವರ್ಷದುದ್ದಕ್ಕೂ ಕಾಲೇಜಿನಲ್ಲಿ ಕೈಗೊಂಡ ಕಾರ್ಯ ಚಟುವಟಿಕೆಗಳ ವರದಿಯನ್ನು ವಾಚನ ಮಾಡಿದರು.. ಹಾಗೂ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಚಿನ್ ಕುಮಾರ್ ಪಾಟೀಲ್ ಅವರು ಸಚಿನ್ ತೆಂಡೂಲ್ಕರ್, ಹುಂಡೈ ಅನೇಕ ಸಾಧಕರು ತಮ್ಮ ಅಸಂಖ್ಯಾತ ಪ್ರಯತ್ನಗಳ ಫಲವಾಗಿ ಅದ್ಭುತವಾದದ್ದನ್ನು ಸಾಧಿಸಿದ್ದಾರೆ ಪ್ರಯತ್ನಗಳಲ್ಲಿ ಸೋಲಾಗಬಹುದು ಆದರೆ ಪ್ರಯತ್ನ ಮಾಡದೆ ಸೋತು ಕೈಕಟ್ಟಿ ಕುಳಿತು ಕೊಳ್ಳಬಾರದು “ಪ್ರಯತ್ನವೇ ಪುರುಷಾರ್ಥ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣದಾಯಕ ವಿಚಾರಗಳನ್ನ ತಿಳಿಸಿದರು.ಕುಮಾರಿ ಜ್ಯೋತಿ ಹಿಟ್ನಳ್ಳಿ ನಿರೂಪಣೆ ಮಾಡಿದರು, ಶ್ರೀಶೈಲ್ ಕುಂಬಾರ್ ವಿದ್ಯಾರ್ಥಿ ಸ್ವಾಗತ ಪರಿಚಯ ಕುಮಾರಿ ಪವಿತ್ರ ಪ್ರಾರ್ಥನ ಗೀತೆಯನ್ನು ಹೇಳಿದರು ದಾನಮ್ಮ ತಪಸಟ್ಟಿ ವಿದ್ಯಾರ್ಥಿನಿ ವಂದನಾರ್ಪಣೆಯನ್ನು ತಿಳಿಸಿದರು.ಈ ಕಾರ್ಯಕ್ರಮಕ್ಕೆ ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಎಲ್ಲ ವಿದ್ಯಾರ್ಥಿಗಳು ಸಿಡಿಸಿ ಸದಸ್ಯರು ಹಾಜರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button