ಅಯೋಧ್ಯೆ ಮಂತ್ರಾಕ್ಷತೆ ಮತ್ತು ಕರಪತ್ರ ಹಂಚುವ ಸೌಭಾಗ್ಯ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ – ಅಮರೇಶ್.
ಹೊಸಹಳ್ಳಿ ಜನೇವರಿ.14

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮರ್ಯಾದ ಪುರುಷ ಶ್ರೀರಾಮನ ಜನ್ಮ ಸ್ಥಳದಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪಟ್ಟಣದಲ್ಲಿ ಮನೆ ಮನೆಗೆ ಮಂತ್ರಾಕ್ಷತೆಯನ್ನು ವಿತರಿಸಿ ಜ.22 ರಂದು ಉತ್ತರ ದಿಕ್ಕಿನಲ್ಲಿ ಐದು ದೀಪಗಳನ್ನು ಹಚ್ಚಿ ಶ್ರೀರಾಮನನ್ನು ಪೂಜಿಸುವಂತೆ ಮನವಿ ಮಾಡಲಾಯಿತು.ಹಿಂದೂಗಳ ಆರಾಧ್ಯ ದೈವ ರಾಮ ಮಂದಿರ ನಿರ್ಮಾಣಕ್ಕಾಗಿ ಈ ಹಿಂದೆ ಅಯೋಧ್ಯೆಯಲ್ಲಿ ಕರ ಸೇವೆ ಸಲ್ಲಿಸಿದವರನ್ನು ಈ ಶುಭ ಸಂದರ್ಭದಲ್ಲಿ ಕಡ್ಢಾಯವಾಗಿ ಎಲ್ಲರೂ ಸ್ಮರಿಸಲೇ ಬೇಕು. ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ಆಗದಿದ್ದರೂ ಮನೆ ಮನೆಗೆ ತೆರಳಿ ಕರಪತ್ರ ಹಂಚುವ ಸೌಭಾಗ್ಯ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ಹಾಗಾಗಿ ಪ್ರಾಣ ಪ್ರತಿ ಷ್ಠಾಪನೆಯಂದು ಎಲ್ಲರೂ ಶ್ರೀರಾಮನನ್ನು ಜಪಿಸುವ ಮೂಲಕ ಭಕ್ತಿ ಸಮರ್ಪಿಸ ಬೇಕೆಂದು ಅಮರೇಶ್ ಇವರು ಗ್ರಾಮಸ್ಥರಲ್ಲಿ ವಿನಂತಿಸಿದರು.

ಜ.22 ರಂದು ಪ್ರತಿ ಮಂಡಲಗಳ ಆಯಾ ದೇವಸ್ಥಾನಗಳಲ್ಲಿ ಸ್ವಚ್ಚತೆ ಕೈಗೊಳ್ಳುವ ಮೂಲಕ ಪ್ರಧಾನಿ ಮೋದಿರವರ ಕನಸಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು ಇದೊಂದು ಅಭೂತಪೂರ್ವ ಸಂದರ್ಭ ವಾಗಿರುವುದರಿಂದ ಎಲ್ಲರೂ ಪ್ರಾಣ ಪ್ರತಿಷ್ಠಾಪನೆಯಂದು ದೀಪಗಳನ್ನು ಬೆಳಗಿ ಗೌರವಿಸ ಬೇಕೆಂದರು.ಪ್ರಧಾನಿ ನರೇಂದ್ರ ಮೋದಿಯಂತಹ ಭಕ್ತನನ್ನು ಸ್ವತಃ ರಾಮನೇ ಅಯೋಧ್ಯೆಯಲ್ಲಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಭೂಮಿಗೆ ಕಳಿಸಿದ್ದಾನೆ. ಪ್ರತಿಯೊಬ್ಬ ಭಾರತೀಯ ಪ್ರತಿ ನಿಧಿಯಾಗಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸ ಲಿದ್ದಾರೆಂದು ಕೆ ಎನ್ ಆನಂದ್ ಹೇಳಿದರು.ಮಂತ್ರಾಕ್ಷತೆ ವಿತರಣೆ ಸಂದರ್ಭದಲ್ಲಿ ಅಮರೇಶ್. ಹೆಚ್ಎಂ ಮನೋಜ್ ಕುಮಾರ್. ವೀರೇಶ್ ಕೆಎಸ್. ನಿರಂಜನಾ ಚಾರ್ ಬಿ. ತಿಪ್ಪೇಸ್ವಾಮಿ ಪಿ. ಕೊಟ್ರೇಶ್ ಸಜ್ಜೆ ರೊಟ್ಟಿ. ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ