ಕ್ರೀಡೆಗಳಿಂದ ಪರಸ್ಪರ ಸ್ನೇಹ ಬಾಂಧವ್ಯಗಳು ಬೆಳೆಯುತ್ತವೆ – ಸಿ.ಪಿ.ಐ ತಳವಾರ ಸುರೇಶ್.
ಕೂಡ್ಲಿಗಿ ಜನೇವರಿ.14

ಕ್ರೀಡೆಗಳಿಂದ ಮೈ, ಮನಸ್ಸುಗಳು ಉಲ್ಲಾಸದಿಂದರಲು ಸಹಕಾರಿಯಾಗುತ್ತವೆ ಎಂದು ವೃತ್ತ ಆರಕ್ಷಕ ನಿರೀಕ್ಷಕ ತಳವಾರ ಸುರೇಶ್ ಹೇಳಿದರು. ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ವಾಲಿಬಾಲ್ ಅಸೋಸಿಯೇಷನ್ ಇವರ ಆಶ್ರಯದಲ್ಲಿ ಅಲ್-ಟೆಕ್ ಇವರ ಪ್ರಾಯೋಜಿತ ರಾಜ್ಯ ಮಟ್ಟದ ವಾಲಿಬಾಲ್ ಹೊನಲು,ಬೆಳಕಿನ ಪಂದ್ಯಾವಳಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಗಳಲ್ಲಿ ಸೋಲು, ಗೆಲವು ಸಾಮಾನ್ಯ ಇದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಅಲ್ಲದೆ, ಕ್ರೀಡೆಯಿಂದ ಪ್ರತಿ ಸ್ಪರ್ಧೆಗಳ ಹೃದಯವನ್ನು ಗೆಲ್ಲವಂತಾಗಬೇಕು. ಇದರಿಂದ ಪರಸ್ಪರ ಸ್ನೇಹ, ಬಾಂಧವ್ಯಗಳು ವೃದ್ಧಿಸುತ್ತವೆ ಎಂದರು. ಕಬ್ಬಡಿ ಹಾಗೂ ವಾಲಿಬಾಲ್ ಪಂಧ್ಯಗಳಲ್ಲಿ ನಿರ್ಣಯಗಳು, ತೀರ್ಪುಗಳು ಸ್ವಲ್ಪ ಕ್ಲಿಷ್ಟಕರವೆಂದು ಹೇಳುವುದನ್ನು ಕೇಳಿದ್ದೇನೆ. ತೀರ್ಪುಗಾರರು ಸತ್ಯಾಂಶಕ್ಕೆ ಬದ್ಧರಾಗಬೇಕು. ರಾಜ್ಯಧ್ಯಾಂತ ಹಲವು ಜಿಲ್ಲೆ, ತಾಲೂಕಿನಿಂದ ಅನೇಕ ತಂಡಗಳು ಬಂದಿವೆ ನಿಮಗೆ ಶುಭವಾಗಲಿ ಎಂದು ಹಾರೈಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಾಲ್ತೂರ್ ಶಿವರಾಜ್ ಮಾತನಾಡಿ ದೇಶಿ ಕ್ರೀಡೆಗಳಲ್ಲಿ ಕೂಡ್ಲಿಗಿ ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಂಡಿದೆ. ಅಷ್ಟೇ ಸ್ನೇಹಮಯವಾಗಿ ಇತರೆ ಕ್ರೀಡೆಗಳನ್ನು ಆಯೋಜಿಸುವುದರ ಮೂಲಕ ಎಲ್ಲಾ ಕ್ರೀಡೆಗಳಿಗೂ ಆದ್ಯತೆ ನೀಡುವುದು ಈ ಮಣ್ಣಿನ ವಿಶೇಷತೆ ಎಂದರು. ಕ್ರೀಡೆಗಳಿಂದ ಮನಸ್ಸು ಏಕಾಗ್ರತೆಯನ್ನು ಹೊಂದುತ್ತದೆ. ಕ್ರೀಡಾಪಟುಗಳು ಲವಲವಿಕೆಯಿಂದ ಕೂಡಿರುತ್ತಾರೆ. ಇಂತಹ ಪಂದ್ಯಾವಳಿಗಳನ್ನು ವೀಕ್ಷಿಸುವುದರಿಂದ ಇಲ್ಲಿನ ವಾಲಿಬಾಲ್ ನೂತನ ಆಟಗಾರರು, ಹೊಸ ವಿಚಾರಗಳನ್ನು ಕಲಿಯುತ್ತಾರೆ. ಸ.ಸಂ.ಪ.ಪೂ ಕಾಲೇಜಿನ ಉಪ ಪ್ರಾಚಾರ್ಯ ಹುಲಿಕೇರಿ ಬಸವರಾಜಪ್ಪ, ಉಪನ್ಯಾಸಕ ಇಮಾಮ್ ಸಾಹೇಬ್,ಅಲ್_ಟೆಕ್‌ನ ಇಬ್ರಾಹಿಂ ಅಲಿ, ಷಣ್ಮುಖಪ್ಪ, ಹೆಚ್.ಡಿ. ಉಡುಚಪ್ಪ, ಭಾಸ್ಕರ್‌ನಾಯ್ಕ್, ಹಿರಿಯ ವಾಲಿಬಾಲ್ ಆಟಗಾರರಾದ ವೆಂಕಟೇಶ್, ಕಂಡಕ್ಟರ್ ಕುಮಾರ್, ದಾದು ಸೇರಿದಂತೆ ಇತರರಿದ್ದರು. ಸಂಡೂರು, ಕಮಲಾಪುರ,ಹೊಸಪೇಟೆ,ತೆಕ್ಕಲಕೋಟೆ, ಬಾಗಲಕೋಟೆ ಸೇರಿದಂತೆ ಅನೇಕ ಜಿಲ್ಲೆಗಳಿಂದ ೧೫.ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ