ಪ್ರತಿಮಾ ಹಾಸನ್ ಗೆ “ಸಾಧಕ ರತ್ನ” ರಾಷ್ಟ್ರೀಯ ಪ್ರಶಸ್ತಿ ಪ್ರಧಾನ.
ಹಾಸನ ಜನೇವರಿ.15

ನಾಡಿನ ಸಮಾಚಾರ ಸೇವಾ ಸಂಘ (ರಿ ) ಹಾಗೂ ನಾಡಿನ ಸಮಾಚಾರ ದಿನಪತ್ರಿಕೆ ಸೇವಾ ಬಳಗ ಇವರ ಸಂಯುಕ್ತಾಶ್ರಯದಲ್ಲಿ “ಸಾವಿತ್ರಿಬಾಯಿ ಫುಲೆ ಜಯಂತಿ” ಯ ನಿಮಿತ್ತವಾಗಿ ಸಂಸ್ಕರಣೆ ಹಾಗೂ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು. ಈ ಸಂದರ್ಭದಲ್ಲಿ ಹಾಸನ ನಗರದ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರನ್ನು ಸಾಮಾಜಿಕ, ಸಾಹಿತ್ಯ, ಹಾಗೂ ಶೈಕ್ಷಣಿಕ ಸೇವೆಯನ್ನು ಗುರುತಿಸಿ. ಪ್ರತಿಮಾ ಹಾಸನ್ ರವರಿಗೆ “ಸಾಧಕರ ರತ್ನ ” ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು. ರವಿವಾರ ದಿನಾಂಕ 14.01.2024. ರಂದು ಮಧ್ಯಾಹ್ನ 3 ಗಂಟೆಗೆ ಅಕ್ಕಮಹಾದೇವಿ ಸಭಾ ಭವನ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು. ಇಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿದ್ದು. ಪ್ರತಿಮಾ ಹಾಸನ್ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು .ಎಲ್ಲಾ ಕ್ಷೇತ್ರದ ಕಾರ್ಯ ತತ್ಪರತೆಯನ್ನು ಗಮನಿಸಿ ಪ್ರಶಸ್ತಿ ನೀಡಲಾಯಿತು . ಇವರು ಶಿಕ್ಷಕಿಯಾಗಿದ್ದು,” ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ”ದ ಸಂಸ್ಥಾಪಕ ಅಧ್ಯಕ್ಷರಾಗಿದ್ದು.ವಿವಿಧ ಕ್ಷೇತ್ರದ ಸಂಘ ಸಂಸ್ಥೆಗಳ ಮಹಿಳಾ ಜಿಲ್ಲಾಧ್ಯಕ್ಷರು ಆಗಿ, ರಾಜ್ಯ ಮಟ್ಟದಲ್ಲೂ ಪದಾಧಿಕಾರಿ ಪಡೆದು, ಹಲವಾರು ಸಂಸ್ಥೆಯ ಕಾರ್ಯಕರ್ತೆಯಾಗಿ, ಪತ್ರಕರ್ತೆಯಾಗಿ , ಅಂಕಣಗಾರ್ತಿಯಾಗಿ, ಸಾಮಾಜಿಕ ಚಿಂತಕಿಯಾಗಿ, ತನ್ನದೇ ಆದಂತಹ ಸಮಾಜ ಸೇವೆಯನ್ನು ಸಲ್ಲಿಸುತ್ತಿರುವುದನ್ನು ಗಮನಿಸಿ ಕ್ರಿಯಾಶೀಲರಾದ , ಬಹುಮುಖ ಪ್ರತಿಭೆಯಾಗಿ, ಕಾರ್ಯನಿರ್ವಹಿಸುವ ಶ್ರೀಮತಿ ಹೆಚ್, ಎಸ್, ಪ್ರತಿಮಾ ಹಾಸನ್ ರವರಿಗೆ ಗಮನಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಪೂರ್ಣ ನಿರೂಪಣೆಯನ್ನು ಮಾಡಿದ್ದು. ಕವನ ವಾಚನವನ್ನು ಮಾಡಿ. ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ, ಕಾರ್ಯಕ್ರಮದ ಯಶಸ್ವಿಗೆ ಪಾಲುದಾರರಾದರು. ಕಾರ್ಯಕ್ರಮದಲ್ಲಿ ಸುಮಂಗಲಿ ಟ್ರಸ್ಟ್ ನ ಸಂಸ್ಥಾಪಕರಾದ ಡಾ. ಎಸ್ ಜೆ ಸುಶೀಲಮ್ಮ, ಹಿರಿಯ ಸಾಹಿತಿಗಳಾದ ಶ್ರೀಮತಿ ವಿಜಯ ವಿಷ್ಣು ಭಟ್, ಸಮಾಜ ಸೇವಕಿ ಮತ್ತು ಪತ್ರಿಕೆಯಾದ ಶ್ರೀಮತಿ ಸಾವಿತ್ರಿ ಸುರೇಶ್ ಕುಮಾರ, ನಾಡಿನ ಸಮಾಚಾರದ ಪತ್ರಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಸವರಾಜ ವಾಯ್ ಉಪ್ಪಾರಟ್ಟಿ, ಹಿರಿಯ ಸಾಹಿತಿಗಳು ಡಾ. ಕೊಡಚಪ್ಪೆ ಗೋವಿಂದ ಭಟ್, ಡಾ. ಟಿ ನಾಗರಾಜು ಇನ್ನು ಹಲವರು ಉಪಸ್ಥಿತರಿದ್ದರು.