ವಿಶ್ವನಾಥ ಮೊಕಾಶಿ ಕರ್ನಾಟಕ ರಾಜ್ಯ ಥ್ರೋಬಾಲ್ ತಂಡಕ್ಕೆ ಆಯ್ಕೆ.
ಹುನಗುಂದ ಜನೇವರಿ.16





ಪಟ್ಟಣದ ವ್ಹಿ.ಎಮ್.ಎಸ್.ಆರ್.ವಸ್ತೃದ ಕಲಾ, ವಿಜ್ಞಾನ ಹಾಗೂ ವ್ಹಿ.ಎಸ್. ಬೆಳ್ಳಿಹಾಳ ವಾಣಿಜ್ಯ ಪದವಿ ಪೂರ್ವ ಮಹಾ ವಿದ್ಯಾಲಯದ ಪಿಯುಸಿ ದ್ವಿತೀಯ ವರ್ಷದಲ್ಲಿ ಓದುತ್ತಿರುವ ಕುಮಾರ.ವಿಶ್ವನಾಥ ಆರ್.ಮೊಕಾಶಿ ಕರ್ನಾಟಕ ರಾಜ್ಯ ಥ್ರೋಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.ಇತ್ತೀಚಿಗೆ ಮಂಡ್ಯದಲ್ಲಿ ಜರುಗಿದ ರಾಜ್ಯ ಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿರುವುದರ ಮುಖಾಂತರ ಕರ್ನಾಟಕ ರಾಜ್ಯ ಥ್ರೋಬಾಲ್ ತಂಡಕ್ಕೆ ಆಯ್ಕೆಯಾಗಿ ರಾಷ್ಟ್ರ ಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಲ್ಲಿದ್ದಾರೆ. ರಾಜ್ಯ ತಂಡಕ್ಕೆ ಆಯ್ಕೆಯಾದ ಈ ಕ್ರೀಡಾಪಟು ಮತ್ತು ಕ್ರೀಡಾ ನಿರ್ದೇಶಕ ಲೆಫ್ಟಿನೆಂಟ್ ಎಸ್.ಬಿ.ಚಳಗೇರಿ ಅವರನ್ನು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಡಾ|| ಮಹಾಂತೇಶ ಕಡಪಟ್ಟಿ. ಆಡಳಿತ ಮಂಡಳಿ ನಿರ್ದೇಶಕರು,ಸರ್ವ ಸದಸ್ಯರು ಹಾಗೂ ಮಹಾ ವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಚ್.ಎಸ್. ಬೊಳ್ಳಿಶೆಟ್ಟರ, ಒಕ್ಕೂಟದ ಕಾರ್ಯಾಧ್ಯಕ್ಷ ಎಮ್.ಎಮ್.ಆಲೂರ, ಮಹಾ ವಿದ್ಯಾಲಯದ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ