ಗುರು ಕಾಣಿಕೆ.

ಬಾಲ್ಯದಲ್ಲಿ ಕಂಡ ಭಾವನೆಗಳ ತುಂಟಾಟ
ಮೋಜುಮಸ್ತಿನ ಬೃಂದಾವನದ ಬಯಲಾಟ
ಗುರಿತೋರಿದ ಅರಿವಿನ ಜ್ಞಾನದ ಈ ಪಾಠ
ಜೀವನಪೂರ್ತಿ ಎಚ್ಚರಿಲ್ಲದ ಈ ಅಲೆದಾಟ
ಅರಿವಿನ ಮನೆಯೊಳು ಅಂದರ ಹೋಡಾಟ
ಅರಿಯದೆ ಹೋದೆ ನಾ ಗುರುವಿನ ಹುಡುಕಾಟ
ಜ್ಞಾನವ ಹುಡುಕುವ ಈ ಚದುರಂಗದಾಟ
ನಾಸ್ತಿಕ ಶಿರಿತನದ ಚಿಂತನೆಯ ಒಡನಾಟ
ಕರುಣಾಳು ಗುರುವೆ ಕಲಿಸಿರಿ ಜೀವನಪಾಠ
ಬದುಕಲಿ ಗೆಲ್ಲಲಿಕ್ಕಾಗಿ ಈ ಮಾಯದಾಟ
ಜ್ಞಾನಬಂಡಾರವ ಪಡೆಯಲಿಕ್ಕೆ ಜೂಟಾಟ
ಗುರಿಮುಟ್ಟುವರೆಗೆ ಗೆಲುವಿನ ಈ ನಿತ್ಯಒಟ
ಮಾಯಾಲೋಕದ ಗುರುವಿನ ನೀತಿಪಾಠ
ಅಜ್ಞಾನಕೆ ನೀಡಿರಿ ಜ್ಞಾನದ ಈ ಕಿರೀಟ
ಗುರುವಿನ ಗುರುತನದ ಈ ತ್ರಿರಂಗಪಟ
ಗುರು – ಶಿಷ್ಯರ ಬಾಂಧವ್ಯದ ಒಡನಾಟ
ನಾಡತಾಯ ಧರಿಸಿದಂತಿಯರು ಮುಕುಟ
ಗುರುಸಾಧನೆಗೆ ಸಾಕ್ಷಿ ಈ ಕನ್ನಡ ಬಾಹುಟ
ರಚನೆ:ಎನ್.ಎಸ್. ಹಾಲವಾರ ಸರೂರ