ಕಂದಗಲ್ಲಿಗೆ ಬಾಲಕಿಯರ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ವೀಣಾ ಸಿಂಪಿಯವರಿಂದ ಹೇಳಿಕೆ.
ಕಂದಗಲ್ಲ ಜನೇವರಿ.18

ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮಕ್ಕೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮಂಜೂರು ಮಾಡಬೇಕೆಂದು ಕಂದಗಲ್ಲ ಸರಕಾರಿ ಪ್ರೌಢ ಶಾಲೆಯ ಎಸ್.ಡಿ.ಎಂ. ಸಿ ಮಹಿಳಾ ಸದಸ್ಯರಾದ ಶ್ರೀ ಮತಿ ವೀಣಾ ಸಿಂಪಿಯವರು ಹೇಳಿಕೆ ಮಾಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು “ಕಂದಗಲ್ಲದಲ್ಲಿ ಪ್ರತ್ಯೇಕವಾಗಿ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಿದ್ದು ಅಲ್ಲಿ 250 ಕ್ಕಿಂತಲೂ ಅಧಿಕ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಕಂದಗಲ್ಲ ಸಮೀಪ ಇರುವ ಮರಟಗೇರಿ, ಸೋಮಲಾಪುರ, ಗೋನಾಳ ಎಸ್. ಕೆ ಗ್ರಾಮಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಬಾಲಕಿಯರು ಪ್ರಾಥಮಿಕ ಶಿಕ್ಷಣ ನಂತರ ಪ್ರೌಢ ಶಿಕ್ಷಣಕ್ಕೆ ಕಂದಗಲ್ಲಿನ ಸರಕಾರಿ ಪ್ರೌಢಶಾಲೆಗೆ ಆಗಮಿಸುತ್ತಾರೆ.

ಅದಲ್ಲದೆ ಸ್ವಗ್ರಾಮದ ಬಾಲಕಿಯರು ಕೂಡ ಪ್ರಾಥಮಿಕ ಶಿಕ್ಷಣ ಮುಗಿಸಿ ಸರಕಾರಿ ಪ್ರೌಢಶಾಲೆಗೆ ಬರುತ್ತಾರೆ ಹೀಗಾಗಿ ಸರಕಾರಿ ಪ್ರೌಢ ಶಾಲೆಯಲ್ಲಿ ಈಗ ವಿದ್ಯಾರ್ಥಿಗಳ ಸಂಖ್ಯೆ 8,9,10, ಮೂರು ತರಗತಿಗಳು ಸೇರಿ ಒಟ್ಟು 413 ಇದ್ದು ಇದರಲ್ಲಿ 228 ಬಾಲಕರಿದ್ದು 185 ಬಾಲಕಿಯರಿದ್ದಾರೆ. ಒಂದೊಂದು ಕ್ಲಾಸಿಗೆ ನೂರಕ್ಕಿಂತಲೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಇರುವದರಿಂದ ಪ್ರತಿಯೊಂದು ತರಗತಿಗಳು ಎ ಬಿ ವರ್ಗಗಳಾಗಿ ನೆಡೆಯುತ್ತಿವೆ. ಸರಕಾರಿ ಪ್ರೌಢ ಶಾಲೆಯಲ್ಲಿ 11 ಕೊಠಡಿಗಳಿವೆ ಆರ್. ಎಂ.ಎಸ್ ಯೋಜನೆ ಅಡಿ ಹೆಚ್ಚುವರಿಯಾಗಿ 6 ಕೊಠಡಿಗಳನ್ನು ನೂತನವಾಗಿ ಕಲ್ಪಿಸಲಾಗಿದೆ ಬಾಲಕಿಯರಿಗೆ ಪ್ರತ್ಯೇಕ ಪ್ರೌಢಶಾಲೆ ಮಾಡುವುದರಿಂದ ಕಟ್ಟಡದ ಸಮಸ್ಯೆ ಬರುವುದಿಲ್ಲ. ಶಿಕ್ಷಕರ ಸಿಬ್ಬಂದಿ ಒದಗಿಸಿದರೆ ಇಲ್ಲಿ ಬಾಲಕಿಯರ ಪ್ರೌಢಶಾಲೆ ಪ್ರಾರಂಭಿಸಬಹುದು. ಕಳೆದ ಹಲವಾರು ವರ್ಷಗಳಿಂದ ಸರಕಾರಿ ಬಾಲಕಿಯರ ಪ್ರೌಢಶಾಲೆ ಪ್ರಾರಂಭಿಸ ಬೇಕೆಂದು ಮನವಿ ಸಲ್ಲಿಸುತ್ತಾ ಬಂದಿದ್ದರೂ ಬೇಡಿಕೆ ಈಡೇರಿಲ್ಲ ಅದಕ್ಕಾಗಿ ನಮ್ಮ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ವಿಜಯಾನಂದ ಕಾಶಪ್ಪನವರು ಸಾಹೇಬರು ಬಾಲಕಿಯರ ಸರಕಾರಿ ಪ್ರೌಢಶಾಲೆ ಮಂಜೂರು ಮಾಡಿಸಿ ಬಾಲಕಿಯರಿಗೆ ಅನುಕೂಲ ಮಾಡಿ ಕೊಡಬೇಕೆಂದು ಸಿಂಪಿಯವರು ವಿನಂತಿಸಿ ಕೊಂಡಿದ್ದಾರೆ.
ತಾಲೂಕ ವರದಿಗಾರರು:ಪ್ರತಾಪ.ವಾಯ್.ಕಿಳ್ಳಿ ಇಳಕಲ್ಲ