ನಿಜ ಕಾಯಕದಲ್ಲಿ ನಿರತರಾದವರೆ ನಿಜ ಶರಣರು – ಗುರು ಮಹಾಂತ ಶ್ರೀಗಳು.

ಹುನಗುಂದ ಜನೇವರಿ.18

ಕಾಯಕದಲ್ಲಿ ನಿರತರಾಗಿ ತನ್ನನ್ನೇ ತಾ ಅರಿತು ಕೊಂಡು ಜೀವನದಲ್ಲಿ ಮುಕ್ತಿ ಪಡೆಯುವವರೇ ನಿಜ ಶರಣರು. ಅಂತಹ ಕಾಯಕ ಜೀವಿಗಳಾಗಿ ಆದರ್ಶ ದಾಂಪತ್ಯ ಜೀವನಕ್ಕೆ ಮಾದರಿಯಾದವರು ಲಿಂ ಚೆನ್ನಮ್ಮ ನೀಲಕಂಠಪ್ಪ ಹಾದಿಮನಿಯವರು. ದಂಪತಿಗಳು ಇಂದು ಬಸವಾದಿ ಶರಣರ ವಚನಗಳನ್ನು ಓದುವ ಪರಿಪಾಠ ಬೆಳಸ ಬೇಕಿದೆ. ಅದಕ್ಕಾಗಿ ಮಕ್ಕಳಿಗಾಗಿ ಶರಣರ ವಚನಗಳ ಸರಳ ಅರ್ಥವನ್ನು ಅರುಹುವ ಕೆಲಸವಾಗ ಬೇಕು ಎಂದು ಚಿತ್ತರಗಿ ಸಂಸ್ಥಾನ ಮಠದ ಇಳಕಲ್ಲದ ಗುರು ಮಹಾಂತ ಶ್ರೀಗಳು ಹೇಳಿದರು. ಪಟ್ಟಣದ ಪರಸಭೆಯ ಮಂಗಲ ಮಂಟಪದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ತಾಲೂಕಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ಸಹಯೋಗದಲ್ಲಿ ನಡೆದ ಲಿಂ ಚೆನ್ನಮ್ಮ ನೀಲಕಂಠಪ್ಪ ಬಸವಪ್ಪ ಹಾದಿಮನಿ ಶರಣ ದಂಪತಿಗಳ ೭ ನೇ ಪುಣ್ಯ ಸ್ಮರಣೆ, ದತ್ತಿ ಉಪನ್ಯಾಸ, ಪುಸ್ತಕ ಲೋಕಾರ್ಪಣೆ ,ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿದ ಅವರು ೧೨ ನೇ ಶತಮಾನದ ಶರಣರು ಹೇಳಿದಂತೆ ಕಾಯಕ ಮತ್ತು ಸಂಸಾರಗಳ ಸಾರ ತಿಳಿದು ಜೀವನ ನಡೆಸಿದಾಗಲೇ ಮುಕ್ತಿ ಕಾಣಲು ಸಾಧ್ಯ ಎಂದರು. ೧೨ ನೇ ಶತಮಾನದ ಶರಣರ ಅನುಭಾವದ ನುಡಿಗಳೆ ವಚನಗಳು.ಜೀವನದ ಮೌಲ್ಯಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟ ಶರಣರು ನುಡಿದಂತೆ ನಡೆದು ಮುಕ್ತಿ ಪಥದ ದಾರಿ ತೋರಿದರು. ಆ ಹಾದಿಯಲ್ಲಿ ನಡೆದ ಹಾದಿಮನಿ ದಂಪತಿಗಳ ಬದುಕು ಮಾದರಿಯಾದುದು ಎಂದು ನೇತೃತ್ವ ವಹಿಸಿ ಶಿರೂರ ಮಹಾಂತ ತೀರ್ಥದ ಡಾ ಬಸವಲಿಂಗ ಶ್ರೀಗಳು ಹೇಳಿದರು. ಪ್ರೊ. ಅಜಯ ಪುರಾಣಿಕ ಮಾತನಾಡಿ ಶರಣ ಸಂಸ್ಕಾರ ವೆಂಬುದನ್ನು ನೀಲಕಂಠಪ್ಪ ಅವರು ತಮ್ಮ ತಂದೆ ಗುದ್ಲಿಕಾಯಕ ಯೋಗಿ ಬಸವಪ್ಪ ಶರಣರಿಂದಲೆ ಬಳುವಳಿಯಾಗಿ ಪಡೆದರು.ಹೀಗಾಗಿ ಕಾಯಕದೊಳಗೆ ನಿರತರಾದ ನೀಲಕಂಠಪ್ಪ ಮತ್ತು ಚೆನ್ನಮ್ಮ ದಂಪತಿಗಳು, ಸತ್ಯಶುದ್ಧ ಚಿತ್ತ ಶುದ್ಧ ಕಾಯಕದ ಮಹತ್ವ ತಿಳಿಸಿಕೊಟ್ಟ ಬಸವಣ್ಣನವರ ಹಾದಿಯಲ್ಲಿಯೇ ನಡೆದು ಶರಣರಾದರು. ಅವರು ವೃತ್ತಿಯಲ್ಲಿಯೇ ವೈಚಾರಿಕ ತತ್ವ , ಸಮಾನತೆ ದಾಸೋಹ.,ಸಮನ್ವಯತೆಗಳನ್ನು ಅಳವಡಿಸಿ ಕೊಂಡು ಮಾದರಿ ಜೀವನ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ ಎಂದರು. ಜನಪದ ಶಬ್ಧ ಗಾರುಡಿಗ, ಸಾಹಿತಿ ಡಾ, ಸಿದ್ಧು ಆರ್ ದಿವಾಣ ಮಾತನಾಡಿ ಬಸವಣ್ಣ ಹುಟ್ಟಲಿ, ಹೊ¸ಪ್ಯಾಟಿ ಕಟ್ಟಲಿ, ಎಂದು ಜನಪದ ಗರತಿ ಹಾಡಿದಂತೆ ಹೊಸ ಸಮಾಜ ಕಟ್ಟಿದ ಬಸವಣನವರು ಕಳಬೇಡಾ ಕೊಲಬೇಡಾ ಎಂದು ಜೀವನದಲ್ಲಿ ಪಾಲಿಸಬೇಕದ ಸಪ್ತ ಸೂತ್ರಗಳನ್ನು ಹೇಳಿಕೊಟ್ಟರು. ಅಂತರಂಗ ಬಹಿರಂಗ ಶುದ್ಧಿಯ ಸಾರ್ಥಕ ಜೀವಕ್ಕೆ ಶರಣರ ವಚನಗಳು ದಾರಿ ತೋರುತ್ತವೆ. ೧೭ ನೇ ದತ್ತಿ ಉಪನ್ಯಾಸ ಸಾರ್ಥಕವಾಗಲು ಬಸವಾದಿ ಶರಣ ಬದುಕಿನ ಮೌಲ್ಯಗಳನ್ನು ಜನಪದ ತತ್ವಗ¼ನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದರು, ಡಾ. ಲಲಿತಾ ಹೊಸಪ್ಯಾಟಿ ಅವರ ‘ಬಗೆದಷ್ಟು ಬಗೆಗಳು’ ಮತ್ತು ಜಗದೀಶ ಹಾದಿಮನಿಯವರ ‘ಕೊನೆಯಿರದ ಬಾನು’ ನಾಟಕ ಕೃತಿಗಳನ್ನು ಲೋಕಾರ್ಪಣೆ ಗೊಳಿಸಿದ ವಿ. ಎಂ ಹಾದಿಮನಿಯವರು ಪುಸ್ತಕಗಳು ಭಾವನಾತ್ಮಕವಾಗಿ ಓದುಗರೊಂದಿಗೆ ಮುಖಾ ಮುಖಿಯಾಗುತ್ತವೆ. ನಾವು ಅಳಿದರೂ ರಚಿಸಿದ ಪುಸ್ತಕಗಳು ಉಳಿಯುತ್ತವೆ. ಮಕ್ಕಳಲ್ಲಿ ಓದುವ ಹವ್ಯಾಸ ವೃದ್ಧಿಯಾಗುವಂತಹ ಪುಸ್ತಕಗಳು ಮಕ್ಕಳ ಕೈಗೆ ದೊರೆಯಲು ಶಿಕ್ಷಕರ ಪ್ರಯತ್ನ ಮಹತ್ವದ್ದು ಎಂದರು. ಈ ಸಂದರ್ಭದಲ್ಲಿ ಲಿ. ನೀಲಕಂಠಪ್ಪ ಬಸವಪ್ಪ ಹಾದಿಮನಿ ಆದರ್ಶ ಶಿಕ್ಷ ಪ್ರಶಸ್ತಿಯನ್ನು ವೀರಾಪೂರ ಸ ಹಿ ಪ್ರಾ ಶಾಲೆ ಶಿಕ್ಷಕಿ ಕಸ್ತೂರಿ ಕೆ. ಕೊನೆಸಾಗರ, ಹಾಗೂ ಹೊನ್ನಾರಹಳ್ಳಿ ಸ, ಕಿ. ಪ್ರಾ. ಶಾಲೆ ಶಿಕ್ಷಕ ಅಶೋಕ, ವಿ .ಬಳ್ಳಾ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಬಗೆದಷ್ಟು ಬಗೆಗಳು ವಿಮರ್ಶಾ ಕೃತಿ ಕುರಿತು ಪ್ರೊ ಸಂಗಣ್ಣ ಮುಡಪಲದಿನ್ನಿ, ಕೊನೆಯಿರದ ಬಾನು ಕುರಿತು ಪ್ರೊ. ಎಂ ಡಿ ಚಿತ್ತರಗಿ ಅವಲೋಕನ ಮಾಡಿದರು. ವೇದಿಕೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎ ಎಸ್ ಪಾವಟೆ, ಕೃತಿಕಾರರಾದ ಕವಯಿತ್ರಿ ಲಲಿತಾ ಕೆ. ಹೊಸಪ್ಯಾಟಿ, ಜಗದೀಶ ಹಾದಿಮನಿ. ಡಾ. ಎಸ್ ಎನ್ ಹಾದಿಮನಿ, ಉಪಸ್ಥಿತರಿದ್ದರು. ವಚನ ಪ್ರಾರ್ಥನೆಯನ್ನು ವಾಣಿ ಗಜೇಂದ್ರಗಡ, ವಿಜಯ ದಳವಾಯಿ, ಸುಮಂಗಲಾ ಪೂಜಾರಿ ಮಾಡಿದರು. ಸ್ವಾಗತ ಪ್ರೊ, ಎಸ್ ಹಾದಿಮನಿ, ಪರಿಚಯ ಡಾ.ಮುರ್ತುಜಾ ಒಂಟಿ, ಅಂದಯ್ಯ ವಸ್ತೃದ ನಿರೂಪಿಸಿ ವಂದಿಸಿದರು.

ಬಾಕ್ಸ್ – ಅವಲೋಕನಬಗೆದಷ್ಟು ಬಗೆಗಳು (ವಿಮರ್ಶೆ ಪುಸ್ತಕಾವಲೋಕ)‘ಬಗೆದಷ್ಟು ಬಗೆಗಳು’ ಅಂದರೆ ಬಗೆದಂತೆ ಚಿಮ್ಮುವ ವಿಚಾರಗಳ ಚಿಲುಮೆ. ರವಿ ಕಾಣದ್ದನ್ನು ಕವಿ ಕಾಣುತ್ತಾನೆ. ಕವಿ ಕಾಣದ್ದನ್ನು ವಿಮರ್ಶಕ ಕಾಣುತ್ತಾನೆ ವಿಮರ್ಶಕ ಕಾಣದ್ದನ್ನು ಸಹೃದಯ ಕಾಣುತ್ತಾನೆ .ಈ ಕೃತಿಯಲ್ಲಿ ಅಡಕವಾದ ಸೂಕ್ಷö್ಮ ಭಾವನೆಗಳು ಗಮನಸೆಳೆಯುತ್ತವೆ. ಡಾ. ಅರುಣ ಜೋಳದ ಕೂಡಿಗ್ಲಿಯವರ ಕೃತಿ ಪದ್ಮಶ್ರೀ ಮಂಜಮ್ಮ ಜೋಗತಿಯವರ ಆತ್ಮ ಕಥನÀ ‘ಒಳಗೆ ಸುಳಿವ ಹೆಣ್ಣು’ ಅವಲೋಕನ ಓದುವಾಗ ಇಡೀ ಕೃತಿಯನ್ನು ಓzಲೇಬೇಕೆಂಬ ಕಾತುರ ಸಹೃದಯರಿಗೆ ಬರುತ್ತದೆ. ಈ ರೀತಿ ಸಂದಿಸುವಿಕೆಯನ್ನು ಮತ್ತು ಸ್ಪಂದನೆಯನ್ನು ಒಟೊಟ್ಟಿಗೆ ಒಗ್ಗಿಸುವಂತೆ ಮಾಡುತ್ತದೆ ಈ ಸಂಕಲನ.. ** ಪ್ರೊ. ಎಸ್ ಎಸ್ ಮುಡಪಲದಿನ್.

ಕೊನೆಯಿರದ ಬಾನು (ನಾಟಕ)ಇತಿಹಾಸ ಮತ್ತು ಪುರಾಣಗಳ ಬಗ್ಗೆ ಆಸಕ್ತರಾದ ಜಗದೀಶ ಹಾದಿಮನಿಯªರು ಈ ನಾಟಕವನ್ನು ಹೊಸ ದೃಷ್ಠಿ ಕೋನದಲ್ಲಿ ಚಿತ್ರಿಸಿದ್ದಾರೆ. ಇಲ್ಲಿ ಕರ್ಣನ ಕೊನೆಯ ಸನ್ನಿವೇಶ, ಇಲ್ಲಿಯವರೆಗಿನ ನಾಟಕ ಕೃತಿಗಳಲ್ಲಿ ಬಂದಿಲ್ಲದ ಸನ್ನಿವೇಶ. ಕರುಳು ಹಿಂಡುವAತಹ ಕರ್ಣನ ಪಾತ್ರ ನೋವುಂಡು ನೇಹ ಉಣಬಡಿಸಿದ್ದನ್ನು ಚಿತ್ರಿಸುತ್ತದೆ. ಹುನಗುಂದ ತಾಲೂಕಿನ ಪ್ರಸಿದ್ಧ ನಾಟಕಕಾರ ಪಿ ಬಿ ಧುತ್ತರಗಿಯವರನಂತರ ಪ್ರಮುಖ ನಾಟಕ ರಚನೆಯಲ್ಲಿ ತೊಡಗಿಸಿಕೊಂಡ ಜಗದೀಶರಿಗೆ ನಾಟಕ ರಚನೆಯ ಹಿಡಿತವಿದೆ. ಪ್ರೊ. ಎಂ ಡಿ ಚಿತ್ತರಗ.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button