ಮುಸ್ಲಿಂ ಮಹಿಳೆಯರಿಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ್ ಭಟ್ಟರನ್ನು ಬಂಧಿಸಿ ಹಾಗೂ ಶ್ರೀ ಕಾಂತರಾಜ್ ವರದಿಯನ್ನು ಅಂಗೀಕರಿಸುವಂತೆ ಒತ್ತಾಯಿಸಿ ಪ್ರತಿಭಟನೆ.

ಹೊಸಪೇಟೆ ಜನೇವರಿ.18

ವಿಜಯನಗರ ಜಿಲ್ಲಾ ಕಛೇರಿ ಬಳಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ವಿಜಯನಗರ ಜಿಲ್ಲಾ ಸಮಿತಿಯು ಪ್ರತಿಭಟನೆ ಹಮ್ಮಿಕೊಂಡಿತ್ತು.ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕಳೆದ 2023 ಡಿಸೆಂಬರ್ 24 ರಂದು ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಡೆದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪರಿವಾರದ ಪ್ರಮುಖ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಕಡ್ಕ ಪ್ರಭಾಕರ್ ಭಟ್ಟನು ‘ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ, ಜೀವನ ಪೂರ್ತಿ ಖಾಯಂ ಗಂಡನೇ ಇರಲಿಲ್ಲ. ಅವರಿಗೆ ಖಾಯಂ ಗಂಡನನ್ನು ಕೊಟ್ಟಿದ್ದು, ಮೋದಿ ಸರ್ಕಾರ’. ನೆನಪಿಡಿ ಎಂದು ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಸಾರ್ವಜನಿಕವಾಗಿ ಮಹಿಳೆಯರನ್ನ ಅವಮಾನಿಸಿ, ಧರ್ಮವನ್ನು ನಿಂದಿಸಿ. ಧರ್ಮ ಧರ್ಮಗಳ ಮಧ್ಯ ಬೆಂಕಿ ಹಚ್ಚುವ ಕೋಮು ಗಲಭೆಗೆ ಪ್ರಚೋಧನೆ ನೀಡುವಂತಹ ನೀಚ ಮನಸ್ಸಿನ ಕಲ್ಲಡ್ಕ ಪ್ರಭಾಕರ್ ಭಟ್ಟನ ದ್ವೇಷ ಭಾಷಣದಿಂದ ಅಶಾಂತಿಯ ವಾತಾವರಣ ಸೃಷ್ಟಿಯಾಗಿ ಜೀವ ಹಾನಿಯೂ ಸಂಭವಿಸಬಹುದಾಗಿದ್ದು, ಇಂತಹ ದ್ವೇಷ ಕಾರುವ ಭಾಷಣಗೈಯುವವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ ಅಲ್ಲದೆ ದ್ವೇಷ ಭಾಷಣ ಗೈದವರ ವಿರುದ್ದ ಪೋಲೀಸರೇ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿ ಕೊಳ್ಳಲು ಅವಕಾಶವಿದೆ ಆದರೂ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವ ಮೂಲಕ ಪೋಲೀಸ್ ಇಲಾಖೆ ವಿಫಲವಾಗಿದೆ.’ಮುಸ್ಲಿಂ ಮಹಿಳೆಯರಿಗೆ ಮಾಡಿದ ಅಪಮಾನ ಸಮಸ್ತ ಮಹಿಳೆಯರಿಗೆ ಮಾಡಿದ ಅಪಮಾನವಾಗಿದೆ’.ಮಹಿಳೆ ಯಾವುದೇ ಧರ್ಮದವರಾಗಿರಲಿ. ಯಾವುದೇ ಭಾಷೆಯವರಾಗಿರಲಿ. ಯಾವುದೇ ಜಾತಿಯವರಾಗಿರಲಿ ಹಿಂದೂವಾಗಿರಲಿ, ಮುಸ್ಲಿಂವಾಗಿರಲಿ, ಕ್ರಿಶ್ಚಿಯನ್ ಆಗಿರಲಿ, ದಲಿತ, ಶೂದ್ರ ಆದಿವಾಸಿಯಾಗಿರಲಿ ಅವಳು ಹೆಣ್ಣುಮಗಳು. ಅವಳು ಭಾರತ ಮಾತೆಗೆ ಸಮಾನಳು ಹೆಣ್ಣನ್ನು ದೇವತೆ ಎಂದು ಪೂಜಿಸುತ್ತೇವೆ. ಜೀವನೂದ್ದಕ್ಕೂ ಬೇಕಾಗಿರುವಂತಹ ಪ್ರತಿಯೊಂದು ಅಂಶವು ಹೆಣ್ಣಿಗೆ ಹೋಲಿಕೆ ಮಾಡುತ್ತೇವೆ.ಹೆಣ್ಣು ಇಲ್ಲದೆ ಏನೂ ಇಲ್ಲ. ಸೃಷ್ಟಿಯ ಮೂಲಕವೇ ಹೆಣ್ಣು ಆದರೂ ಹೆಣ್ಣುಮಕ್ಕಳನ್ನು ಸಾರ್ವಜನಿಕ ಸಭೆಯಲ್ಲಿ ಇಷ್ಟು ತುಚ್ಚವಾಗಿ ಮಾತನಾಡಿ ಮಹಿಳೆಯರಿಗೆ ಅವಹೇಳನ ಮಾಡಿರುವ ಸಂಘ ಪರಿವಾರದ ಕಲ್ಲಡ್ಕ ಪ್ರಭಾಕರ ಭಟ್ಟನ ಹೇಳಿಕೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ.ಸಮಾಜದಲ್ಲಿ ಜಾತಿ ದ್ವೇಷ, ಧರ್ಮದ್ವೇಷ ನಿರ್ಮೂಲನೆಯಾಗಿಸಿ ಶಾಂತಿ ಸೌಹಾರ್ದತೆ ತರುವುದು ನಮ್ಮೆಲ್ಲರ ಸಂಕಲ್ಪವಾಗಬೇಕು.

ಸ್ವತಂತ್ರ, ಸಮಾನತೆ, ಜಾತ್ಯಾತೀತ ತತ್ವ ನಮ್ಮ ಸಂಘಟನೆಯ ಗುರಿಯಾಗಬೇಕು. ವಿಶ್ವದ ಶಾಂತಿ ಸಂದೇಶ ಸಾರಿದ ಮಹಾ ಮಾನವತಾ ವಾದಿಗಳಾದ ಗೌತಮ ಬುದ್ಧ. ಸಮಾನತೆ ಸಾರಿದ ಬಸವಣ್ಣ, ಟಿಪ್ಪುಸುಲ್ತಾನ್, ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ದೃಷ್ಟಿಯಲ್ಲಿ ಮತ್ತು ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಪ್ರೋ|| ಬಿ ಕೃಷ್ಣಪ್ಪ ರವರ ಆಶೆಯಗಳು ನನಸು ಮಾಡುವ ಮಾರ್ಗದಲ್ಲಿ ಸಾಗಿ ಮನುಷ್ಯರು ನಾವೆಲ್ಲಾ ಒಂದೇ ಎಂಬ ಭಾವನೆಯೊಂದಿಗೆ ಕೋಮುವಾದವನ್ನು ಧಿಕ್ಕರಿಸಿ ಸರ್ವ ಜನಾಂಗದ ಒಳಿತಿಗಾಗಿ ಒಂದಾಗಿ ಮುಸ್ಲಿಂ ಮಹಿಳೆಯರ ವಿರುದ್ದ ಅವಹೇಳನ ಕಾರಿಯಾಗಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪರಿವಾರದ ಕಲ್ಲಡ್ಕ ಪ್ರಭಾಕರ್ ಭಟ್ಟರನ್ನು ಬಂಧಿಸಿ ಹಾಗೂ ರಾಜ್ಯದಲ್ಲಿ ಈ ಹಿಂದೆ ಸಾಮಾಜಿಕ, ಶೈಕ್ಷಣಿಕ, ಸಮೀಕ್ಷೆ ನಡೆಸಿರುವ ಶ್ರೀ ಕಾಂತರಾಜ್ (ಜಾತಿ ಗಣತಿ) ವರದಿಯನ್ನು ಜಾರಿ ಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ವಿಜಯನಗರ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್ ಇವರ ಮೂಲಕ ಮನವಿ ಸಲ್ಲಿಸಲಾಯಿತು.ಮುಸ್ಲಿಂ ಮಹಿಳೆಯರ ವಿರುದ್ಧ ಸಾರ್ವಜನಿಕವಾಗಿ ಅವಹೇಳನಕಾರಿಯಾಗಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ಪರಿವಾರದ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ಟನ ವಿರುದ್ಧ ಗೂಂಡಾ ಕಾಯಿದೆಯಡಿ ಬಂಧಿಸಿ ಗಡಿಪಾರು ಮಾಡಬೇಕು. ಸಾಮಾಜಿಕ ಶೈಕ್ಷಣಿಕ ಮತ್ತು ಜಾತಿ ಸಮೀಕ್ಷೆ ನಡೆಸಿರುವ ಶ್ರೀ ಕಾಂತರಾಜ್ ಜಾತಿ ಗಣತಿ ವರದಿಯನ್ನು ಜಾರಿ ಗೊಳಿಸಬೇಕು. ಜಿಲ್ಲೆಯಲ್ಲಿ ದಲಿತ ಅಲೆಮಾರಿ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಯಬೇಕು.ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಪ್ರೊ.ಬಿ. ಕೃಷ್ಣಪ್ಪ ಬಣ) ಮುಖಂಡರುಗಳು ಆದಎಸ್.ದುರುಗೇಶ್, ಸಣ್ಣ ಮಾರೆಪ್ಪ,ತಗ್ಗಿನಕೇರಿ ಕೊಟ್ರೇಶ್,ಉದಯ್ ಕುಮಾರ್,ಬಿ.ಟಿ ಗುದ್ದಿ ದುರುಗೇಶ್,ಕಂದಗಲ್ಲು ಪರುಶುರಾಮ,ಶ್ರೀನಿವಾಸ್,ಕೊಗಳಿ ಉಮೇಶ,ಕುಮಾರ್ ಮಾಕನಡಕು,ದೇವಪ್ರಿಯ ಕಾಮಲಾಪುರ, ಜೆ, ಶಿವಕುಮಾರ್, ಕಾರ್ಯದರ್ಶಿಗಳು ಸದಸ್ಯರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button