ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲ್ಯ ಉಳ್ಳವರು ಎಂದು ತೋರಿಸಿದರು ನಿಜಶರಣ ಅಂಬಿಗರ ಚೌಡಯ್ಯನವರು – ಎ.ಸಿ ಅಬಿದ್ ಗದ್ಯಾಳ.
ಇಂಡಿ ಜನೇವರಿ.21

ತಾನು ಕೇವಲ ತುಂಬಿದ ಹೊಳೆಯಲ್ಲಿ ಡೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರವಲ್ಲ ಭವಸಾಗರದಲ್ಲಿ ಹುಟ್ಟು ಹಾಕುವ ಕೌಶಲ್ಯ ಉಳ್ಳವರು ಎಂದು ತೋರಿಸಿದವರು ನಿಜಶರಣ ಅಂಬಿಗರ ಚೌಡಯ್ಯನವರು ಎಂದು ಕಂದಾಯ ಉಪ ವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಅವರು ತಾಲೂಕಾ ಆಡಳಿತ ವತಿಯಿಂದ ಮಿನಿ ವಿಧಾನ ಸೌಧದಲ್ಲಿ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವೃತ್ತಿಯಲ್ಲಿ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ ನೇರ ನಿರ್ಭೀತ ವಚನಗಳನ್ನು ಬರೆದಿದ್ದಾರೆ ಎಂದರು.ಶಿಕ್ಷಣ ಇಲಾಖೆಯ ಬಸವರಾಜ ಗೊರನಾಳ ಮಾತನಾಡಿದರು.ಗ್ರೇಡ್ ೨ ತಹಸೀಲ್ದಾರ ಧನಪಾಲಶೆಟ್ಟಿ, ಶಿರಸ್ತೆದಾರ ಬಸವರಾಜ ರಾವೂರ, ಎಂ ಪಿ ಕೊಡತೆ,ಕಜಾಪ ಅಧ್ಯಕ್ಷ ಆರ್.ವಿ.ಪಾಟೀಲ,ಪ್ರಕಾಶ ಚವಡಿಹಾಳ,ಎಚ್ ಎಸ್ ಗುನ್ನಾಪುರ, ಎಸ್ ಬಿ ಪಾಟೀಲ,ವಿ ಎಸ್ ಕೊಳುರಗಿ, ಎಸ್ ಪಿ ಬಗಲಿ ಮತ್ತಿತರಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ