ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಬಿ.ಎಂ. ಚಂದ್ರಪ್ಪ ರವರನ್ನು ಗೆಲ್ಲಿಸಲೇಬೇಕೆಂದು ಮತದಾರರಲ್ಲಿ ಮನವಿ ಮಾಡಿದ – ಶಾಸಕರು.
ಮೊಳಕಾಲ್ಮುರು ಏಪ್ರಿಲ್. 22

ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಲೋಕಸಭಾ ಚುನಾವಣೆ ಹಿನ್ನೆಲೆ ದೇವಸಮುದ್ರ, ನಾಗಸಮುದ್ರ, ಚಿಕ್ಕೇರಹಳ್ಳಿ, ಗ್ರಾಮ ಪಂಚಾಯಿತಿಗಳ ಕೇಂದ್ರಗಳಿಗೆ ತೆರಳಿ ನಮ್ಮ ಅಭ್ಯರ್ಥಿಯಾದ ಬಿ ಎನ್ ಚಂದ್ರಪ್ಪನವರಿಗೆ ಹೆಚ್ಚಿನ ಮತ ನೀಡುವ ಮೂಲಕ ಅಭ್ಯರ್ಥಿಗೆ ಗೆಲುವಿಗೆ ಶ್ರಮಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು. ಮತ್ತು ಈ ಭಾಗದ ತಳವಾರಳ್ಳಿ ಚಿಕ್ಕೇರಳ್ಳಿ ಹಿರೇಕೆರಳ್ಳಿ ನಾಗಸಮುದ್ರ ಅನೇಕ ಗ್ರಾಮಗಳಿಗೆ ರೈತರಿಗೆ ಮತ್ತು ನೀರಾವರಿ ಇರುವ ಕೃಷಿಕರಿಗೆ ಅನುಕೂಲವಾಗಲೆಂದು ಸರ್ಕಾರ ದಿಂದ ತಳವಾರಳ್ಳಿ ಹತ್ತಿರ ಒಂದು ಕೋಟಿ ಇಪ್ಪತ್ತೈದು ಲಕ್ಷದ ಚಕ್ ಡ್ಯಾಮ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು.

ಇದು ರೈತರಿಗೆ ಅಂತರ್ಜಲ ಹೆಚ್ಚಾಗಿ ಮತ್ತು ಪ್ರಾಣಿ- ಪಕ್ಷಿಗಳಿಗೆ ದನಕರುಗಳಿಗೆ ನೀರಿನ ದಾಹ ನೀಗಿಸಲು ಮತ್ತು ಇದಲ್ಲದೆ ಹಿರೆಕೆರೆಹಳ್ಳಿ ಭಟ್ರಳ್ಳಿ ಗೌರಸಮುದ್ರ ಹಮಕುಂದಿ ಬೈರಾಪುರ ಅಶೋಕ ಸಿದ್ದಾಪುರ ರಾಂಪುರ ದೇವಸಮುದ್ರ ತಳವಾರಳ್ಳಿಂದ ಹೋಗುವ ಹಗರಿಗೆ ಚಾನಲ್ ಕಾಮಗಾರಿ ಮೂರು ಕೋಟಿ 50 ಲಕ್ಷದ ವೆಚ್ಚದಲ್ಲಿ ನಡೆಯುತ್ತಿದ್ದು ಇದು ಎಲ್ಲಾ ರೈತರಿಗೆ ಅನುಕೂಲವಾಗಲೆಂದು ಎನ್ ವೈ ಗೋಪಾಲಕೃಷ್ಣ ಶಾಸಕರ ದೊಡ್ಡ ಗುಣ ಎಂದು ತಿಳಿಯಬೇಕು ರೈತರಿಗೆ ಕೃಷಿಕರಿಗೆ ಎಲ್ಲಾ ವರ್ಗದ ಜನಸಾಮಾನ್ಯರಿಗೆ ಯಾವತ್ತಿಗೂ ಅನ್ಯಾಯ ಆಗದಂತೆ ಸರ್ಕಾರದ ಯೋಜನೆಗಳು ರೂಪಿಸುವಂತಹ ಎನ್ ವೈ ಗೋಪಾಲಕೃಷ್ಣ ಶಾಸಕರು ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರುಗಳು, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಕಾರ್ಯಕರ್ತರು ಅಭಿಮಾನಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ ಮೊಳಕಾಲ್ಮುರು.