ಉಜ್ಜನಿ ಗ್ರಾಮದಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಟಾಪನೆಯ ಶುಭ ಸಂಭ್ರಮ.
ಉಜ್ಜನಿ ಜನೇವರಿ.22

ಅಯೋಧ್ಯೆಯಲ್ಲಿ ನಡೆದ ಪ್ರಭು ಪುರುಷೋತ್ತಮ ಶ್ರೀರಾಮನ ಪ್ರಾಣ-ಪ್ರತಿಷ್ಠಾಪನೆಯ ಶುಭ ಸಂಭ್ರಮವನ್ನು ದಿನಾಂಕ 22-01-2024 ಕೊಟ್ಟೂರು ತಾಲೂಕಿನ ಉಜ್ಜನಿ ಗ್ರಾಮದಲ್ಲಿ ಸಮಸ್ತ ಹಿಂದೂ ಬಾಂಧವರು ಮತ್ತು ಪ್ರಭು ಶ್ರೀರಾಮ ಭಕ್ತರಿಂದ ಸಂಭ್ರಮಿಸಲಾಯಿತು.ಮುಂಜಾನೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರೀರಾಮನ ಸಹಸ್ರನಾಮ ಪಠಿಸಿ ಜೊತೆಗೆ ಸಕಲ ಭಕ್ತರು ಸೇರಿ ಭಜನೆಯನ್ನು ಮಾಡಲಾಯಿತು.ಇದಾದ ನಂತರ ಗ್ರಾಮದ ಮುಖ್ಯ ವೃತ್ತದಲ್ಲಿ ಅಳವಡಿಸಿರುವ ಶ್ರೀರಾಮನ ಕಟೌಟ್ ಗೆ ಗ್ರಾಮದ ಎಲ್ಲಾ ಭಕ್ತರಿಂದ ಹೂಮಾಲೆ ಅರ್ಪಿಸಿ ಪೂಜಿಸಲಾಯಿತು, ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ-ಪ್ರತಿಷ್ಠಾಪನೆ ನಂತರ ಗ್ರಾಮದ ಮುಖ್ಯ ರಸ್ತೆಯಲ್ಲಿ ಹಸಿ ಕಾಳುಗಳಿಂದ ಮಾಡಿದ ಕೋಸಂಬರಿ ಹಾಗೂ ಬೆಲ್ಲದ ಪಾನಕವನ್ನು ಉಜ್ಜಿನಿಯ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಭಕ್ತಾದಿಗಳಿಗೆ ವಿತರಿಸಲಾಯಿತು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು