ಕೋಡಿಹಳ್ಳಿ ಗ್ರಾಮದಲ್ಲಿ ಶ್ರೀ ರಾಮನ ಭಕ್ತರಿಂದ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ.
ಕೋಡಿಹಳ್ಳಿ ಜನೇವರಿ.24

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಹಿಂದೂ ಬಾಂಧವರ ಭಕ್ತರ ದೈವ ಶಕ್ತಿಯಾದ ಶ್ರೀರಾಮನ ಎಲ್ಲ ಭಕ್ತರಿಂದ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಬಂದಂತಹ ನೂರಾರು ಭಕ್ತರಿಗೆ ಶ್ರೀರಾಮನಿಗೆ ಪ್ರಿಯವಾದ ಪಾನಕ, ಕೋಸಂಬರಿ,ಕಡ್ಲೆ ಕಾಳು ಹಂಚಲಾಯಿತು.

ಗ್ರಾಮದ ಎಲ್ಲ ಮುಖಂಡರು, ಹಿರಿಯರು, ಯುವಕರು, ಮಹಿಳೆಯರು, ಮಕ್ಕಳು ಶ್ರೀರಾಮನಿಗೆ ಪೂಜೆ ಸಲ್ಲಿಸಿ ಭಕ್ತಿ ಭಾವ ಸಮರ್ಪಿಸಿದರು.ಈ ಸಂದರ್ಭದಲ್ಲಿ ಶ್ರೀರಾಮನ ಭಕ್ತರಾದ ಶ್ರೀಯುತ ಶ್ರೀಧರ್.ಏಚ್, ರಾಜು.ಡಿ , ಮನೋಜ್ .ಟಿ, ಮೈಲಾರಿ.ಕೆ, ಅರುಣ್ ಕುಮಾರ್. ಟಿ ಪರಮೇಶ್. ಟಿ , ಸ್ವಾಮಿ.ಆರ್ ತಿಪ್ಪೇಸ್ವಾಮಿ.ಪಿ.ಎಂ , ಅಭಿಷೇಕ್.ಡಿ , ಕೋಟಿ.ಎನ್ , ತಿಪ್ಪೇಶ್.ಎನ್ ಹಾಗೂ ಸಮುದಾಯದ ಎಲ್ಲ ಮುಖಂಡರು ಉಪಸ್ಥಿತರಿದ್ದರು.