ಮುರಿದು ಬಿದ್ದ ವಿದ್ಯುತ್ ಕಂಬ – ತಪ್ಪಿದ ಬಾರಿ ಅನಾಹುತ.
ಬಯಲತುಂಬರಗುಗುದ್ದಿ ಜನೇವರಿ.24

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸ ಹಳ್ಳಿ ಹೋಬಳಿಯ ಬಯಲತುಂಬರಗುದ್ದಿ ಗ್ರಾಮದಲ್ಲಿ ವ್ಯಕ್ತಿಯೋರ್ವ ವಿದ್ಯುತ್ ಕಂಬವೇರಿ ಕೆಲಸ ಮಾಡುವಾಗ ಎರಡು ಕಂಬಗಳು ಮುರಿದು ಬಿದ್ದ ಘಟನೆ ಸೋಮವಾರ ಸಂಜೆ ನಡೆದಿದೆ, ಅದೃಷ್ಟವಶಾತ್ ಆತ ಪ್ರಾಣಪಾಯದಿಂದ ಪಾರಗಿದ್ದಾನೆ ಸಣ್ಣ ಪುಟ್ಟ ಗಾಯಗಳಾಗಿವೆ.ನಲವತ್ತು ವರ್ಷಕ್ಕೂ ಹಳೆಯ ಕಂಬಗಳಿದ್ದರಿಂದ ಕಂಬವೇರಿದ ಸಮಯದಾಲಿ ಜೋಲಿ ಹೊಡೆದು ಒಂದು ಕಂಬ ಮುರಿದ್ದಿದ್ದು, ಪಕ್ಕದ ಕಂಬವು ಸಹ ತಂತಿಯ ಸೆಳೆತಕ್ಕೆ ಮುರಿದು ಬಿದ್ದಿದೆ, ಪ್ಯೂಸ್ ತೆಗೆದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.ಗ್ರಾಮದ 20.ಕ್ಕೂ ಹೆಚ್ಚು ಕಂಬಗಳ ಬುಡದಲ್ಲಿ ಸಿಮೆಂಟ್ ಉದುರಿ ತಂತಿ ತುಕ್ಕು ಹಿಡಿದಿದ್ದು, ಬಿಳುವ ಹಂತ ತಲುಪಿವೆ ಯಾವುದೇ ಕ್ಷಣದಲ್ಲಾದರು ಅನಾಹುತ ಸಂಭವಿಸಬಹುದು, ಜೀವ ಹಾನಿಯಾದರೇ ಯಾರು ಹೊಣೆ. ಅದಷ್ಟು ಬೇಗ ಬೇರೆ ಕಂಬಗಳನ್ನು ಅಳವಡಿಸ ಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಕಾನಹೊಸಹಳ್ಳಿ ವ್ಯಾಪ್ತಿಯ ಬಹುತೇಖ ಹಳ್ಳಿಗಳಲ್ಲಿ ಹಳೆ ಕಂಬಗಳ ತೆರವು ಗೊಳಿಸಿ ಹೊಸ ಕಂಬಗಳನ್ನು ಅಳವಡಿಸಲಾಗಿದೆ, ಬಯಲುತುಂಬರಗುದ್ದಿ ಗ್ರಾಮಕ್ಕೆ ಇನ್ನೂ ನವೀಕರಣವಾಗಿಲ್ಲ ಎಂದು ಹೆಸರೇಳಲು ಇಚ್ಚಿಸದ ಸಿಬ್ಬಂದಿ ಮಾಹಿತಿ ನೀಡಿದರು. ನಾಲ್ಕು ಕಂಬಗಳನ್ನು ಸದ್ಯ ಹಾಕಲಾಗುವುದು ಉಳಿದಂತೆ ಪರಿಶೀಲನೆ ನಡೆಸಿ ಅಗತ್ಯವಿದಲ್ಲಿ ಹಾಳದ ಕಂಬಗಳನ್ನು ಬದಲಿಸಲಾಗುವುದು ಎಂದು ಕೆಇಬಿ ಶಾಖಾಧಿಕಾರಿ ಮಾರಪ್ಪ ತಿಳಿಸಿದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ