ಯಲಗೋಡದಲ್ಲಿ ಮಳೆಗಾಗಿ “ವಾರ” ಮಾಡುತ್ತೇವೆ – ಅಣ್ಣಪ್ಪಗೌಡ ಪಾಟೀಲ.
ಯಲಗೋಡ ಜು.10





ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದಲ್ಲಿ ಮಳೆ ಇಲ್ಲದ ರೈತರು ಕಂಗಾಲ ಆಗಿದ್ದಾರೆ, ಮೀರಗದ ಮಳೆಗೆ ರೈತರು ಬಿತ್ತನೆ ಮಾಡಿದ್ದಾರೆ ಆದರೆ ಇನ್ನೂ ಮಳೆ ಇಲ್ಲದ ಕಾರಣಕ್ಕೆ,ದಿನಾಂಕ 11 ರಂದು ಶುಕ್ರವಾರ ದಿಂದ “ವಾರ” ಮಾಡುತ್ತೇವೆ ಗ್ರಾಮದ ಎಲ್ಲಾ ದೇವಸ್ಥಾನದಲ್ಲಿ 24 ಘಂಟೆ ದೀಪ ಇರಬೇಕು ಮೂರು ಶುಕ್ರವಾರ ಎರಡು ಮಂಗಳವಾರ ರೈತರು ಎತ್ತುಗಳಿಗೆ ಗಳೇ ಗಾಡಿ ಹುಡ ಬಾರದು ಗ್ರಾಮಸ್ಥರು ಸಂಪ್ರದಾಯದ ಪ್ರಕಾರ ವಾರ ಮಾಡಬೇಕು ಹಾಗೂ ಹೋಟೆಲ್ ದಲ್ಲಿ ಯಾವುದೇ ಎಣ್ಣೆಯ ದಿನಸಿನ ಪದಾರ್ಥಗಳು ಮಾಡಬಾರದು ಹಾಗೂ ಮಾಂಸ ಮಾರಾಟ ಬಂದ ಮಾಡಬೇಕು,ವಾರ ಮೂಗಿದ ಮೇಲೆ ಎಲ್ಲಾ ಯಾತ್ರೆ ಪ್ರಕಾರ ಚಾಲು ಮಾಡಬೇಕು ಗ್ರಾಮಸ್ಥರು ಎಲ್ಲಾ ದೇವಸ್ಥಾನ ಗಳು ಸ್ವಚತೆ ಮಾಡಬೇಕು, ಗ್ರಾಮದ ಸಾರ್ವಜನಿಕರು ನೇಮ ನಿತ್ತೆಯಿಂದ ವಾರವನ್ನು ಪಾಲಿಸ ಬೇಕು ಎಂದು ಗ್ರಾಮದ ಪ್ರಮುಖರಾದ ಅಣ್ಣಪ್ಪಗೌಡ ಪಾಟೀಲ ತಿಳಿಸಿದರು.
ತಾಲ್ಲೂಕ ವರದಿಗಾರರು ಸಿಹಿಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್ ಕೆ ನೂಸ್ಜ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ