ಸಮಾಜ ಸೇವೆ ಮಾಡ ಬೇಕೆನ್ನುವ – ಮನೋಭಾವವಿರ ಬೇಕು.
ಸೂಗುರ.ಎನ್ ಜ.04

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ.ಎನ್ ಗ್ರಾಮದಲ್ಲಿ ಇರುವ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ಮಠದ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಅಪ್ಪಣೆಯಂತೆ ಶ್ರೀಮಠ ಕಿರಿಯ ಪೀಠಾದಿಪತಿಗಳಾದ ಅಭಿನವ ಡಾ.ಕುಮಾರ ಭೋಜರಾಜರ 30 ನೇ. ವರ್ಷದ ಜನ್ಮ ದಿನದ ಪ್ರಯುಕ್ತವಾಗಿ ಶ್ರೀ ಭೋಜಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಲ್ಲಿ 104 ಶಾಲಾ ಮಕ್ಕಳಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿ ಪ್ರತಿಯೊಬ್ಬ ಮನುಷ್ಯರಿಗೂ ತಾವು ಯಾವುದೇ ಹುದ್ದೆಯಲ್ಲಿ ಇದ್ದರು ಸಮಾಜ ಸೇವೆ ಮಾಡ ಬೇಕೆನ್ನುವ ಮನೋಭಾವವಿರಬೇಕು ಅಂದಾಗ ಮಾತ್ರ ನಾವು ಹುಟ್ಟಿದ್ದು ಸಾರ್ಥವಾಗುತ್ತದೆ. ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಸಮಾಜ ಸೇವಕ ಶ್ರೀ ಮಲ್ಲಿಕಾರ್ಜುನ.ಬಿ ಹಡಪದ ಸುಗೂರ.ಎನ್ ಅವರು ಹೇಳಿದರು.

ತಾಲೂಕಿನ ನಾಲವಾರ ಪಕ್ಕದಲ್ಲಿ ಇರುವ ಶ್ರೀ ಭೋಜಲಿಂಗೇಶ್ವರ ಮಠದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಶಾಲಾ ಮುಂಭಾಗದಲ್ಲಿ ಇರುವ ಅಂಗಳದಲ್ಲಿ ಉಚಿತ ಕ್ಷೌರ ಸೇವೆ ಹಮ್ಮಿ ಕೊಂಡಿದ್ದು 104 ಜನ ವಿಧ್ಯಾರ್ಥಿಗಳಿಗೆ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಸೇವೆ ಮಾಡಿದರು ಎಂದು ಶಿಕ್ಷಕರಾದ ನಾಗೇಶ ವಿಶ್ವಕರ್ಮ ಅವರು ಮಾತನಾಡಿದರು.

ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಬೇರೆಯವರಿಗೆ ಸಹಾಯ ಮಾಡುವ ಒಳ್ಳೆಯ ಮನಸ್ಸಗಳ ವ್ಯಕ್ತಿಗಳು ಸಿಕುವುದೇ ಕಡಿಮೆ. ಆದರೆ ಕೆಲವು ತಾವು ಮಾಡುವ ಒಳ್ಳೆಯ ಕೆಲಸದಿಂದಲೆ ನಿಜ ಜೀವನದಲ್ಲಿ ಹೀರೊಗಳು ಆಗುತ್ತಾರೆ. ಇದಕ್ಕೆ ನೈಜ ಉದಾಹರಣೆ ಎಂದರೆ ಈ ಹಡಪದ ಅಪ್ಪಣ್ಣ ಸಮಾಜದ ನಿಸ್ವಾರ್ಥ ಸಮಾಜದ ಯುವಕ ಮಲ್ಲಿಕಾರ್ಜುನ ಬಿ ಹಡಪದ ಸುಗೂರ.ಎನ್ ಇವರು ಕ್ಷೌರಿಕ ವೃತ್ತಿಯಲ್ಲಿಯೇ ತಮ್ಮ ಕಾಯಕದಿಂದ ಅನಾಥರಿಗೆ. ಅಂಧರಿಗೆ. ನಿರ್ಗತಿಕರಿಗೆ ಅನಾಥ ಬುದ್ದಿ ಮಾಂಧ್ಯರಿಗೆ. ಮತ್ತು ಅನಾಥ ಶಾಲಾ ಮಕ್ಕಳಿಗೆ. ಪೌರ ಕಾರ್ಮಿಕರಿಗೆ. ಸಾಧು-ಸಂತರಿಗೆ. ಕಿವುಡರಿಗೆ. ಮೂಕರಿಗೆ. (ಅಂಗವಿಕಲರಿಗೆ) ವಿಕಲ ಚೇತನರಿಗೆ. ಹೀಗೆ ಒಟ್ಟು ೧೬ ವಿವಿಧ ಕಡೆಯಲ್ಲೂ ಸೇರಿ 1770 ಜನ ಅನಾಥರಿಗೆ ಫ್ರೀಯಾಗಿ (ಉಚಿತವಾಗಿ) ಕ್ಷೌರ ಸೇವೆ ಸಲ್ಲಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಶ್ರೀ ಭೋಜಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ಬಸವರಾಜ ಕುಂಬಾರ ಸರ ಎಷ್ಟೋ ಜನ ವೃತ್ತಿ ಹೊಂದಿ ತಮ್ಮ ಕುಟುಂಬದ ನಿರ್ವಹಣೆ ಕಾಳಜಿ ವಹಿಸುತ್ತಾರೆ. ಆದರೆ ಈ ಹಡಪದ ಅಪ್ಪಣ್ಣ ಸಮಾಜ ಸಂಘ ಸಂಸ್ಥೆ ಸತತವಾಗಿ ೯ ವರ್ಷಗಳ ಕಾಲ ಅನೇಕ ನಿರ್ಗತಿಕರಿಗೆ. ಅನಾಥ ಆಶ್ರಮದಲ್ಲಿ ಇರುವ ಬುದ್ದಿ ಮಾಂಧ್ಯರಿಗೆ. ಪೌರ ಕಾರ್ಮಿಕರಿಗೆ. ಕಟ್ಟಡ ಕಾರ್ಮಿಕರಿಗೆ. ಸಾಧು-ಸಂತರಿಗೆ. ಮೂಕರಿಗೆ. ಅಂಗವಿಕಲರಿಗೆ. (ವಿಕಲಚೇತನರಿಗೆ) ಹೀಗೆ ಹಲವಾರು ಕ್ಷೇತ್ರದಲ್ಲಿ ಇವರ ಸೇವೆ ಸಲ್ಲಿಸಿ ಸಮಾಜಕ್ಕಾಗಿ ದುಡಿಯುವ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಅಲ್ಪಸ್ವಲ್ಪ ಕೊಡುಗೆ ನೀಡಬೇಕೆಂದು ಈ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸೇವೆ ಆಗಿರುವುದು ಶ್ಲಾಘನೀಯ. ಆದರೆ ಇವರು ಶಾಲಾ ಮಕ್ಕಳಿಗೆ ತಮ್ಮ ಸಮುದಾಯದಿಂದ ಉಚಿತವಾಗಿ ಕ್ಷೌರ ಸೇವೆ ನೀಡುತ್ತಿದ್ದಾರೆ. ನಾವೆಲ್ಲರೂ ಮೆಚ್ಚುವಂತದ್ದು ಎಂದು ಸಿದ್ರಾಮರೆಡ್ಡಿ ಗೌಡ ಕುರಾಳ ಸುಗೂರ ಎನ್ ಮನದಾಳದ ಮಾತನಾಡಿದರು.

ಸಂಘ ಸಂಸ್ಥೆ ಹುಟ್ಟು ಹಾಕುವುದು ದೊಡ್ಡ ವಿಷಯವಲ್ಲ ಆದರೆ ಇದನ್ನು ಉಳಿಸಿ ಬೆಳಸುವುದೇ ದೊಡ್ಡದು. ಇನ್ನೊಬ್ಬರಿಗೆ ಕಷ್ಟ ಬಂದಾಗ ಸಹಾಯ ಮಾಡಬೇಕು. ಹೊರತು ಕೇಡು ಮಾಡುವ ಭಾವನೆ ಇರಬಾರದು ವಿದ್ಯಾರ್ಥಿಗಳಿಗೆ ನಾವು ಮಾಡಿದ ಸೇವೆ ನನಗೆ ತೃಪ್ತಿ ತಂದಿದೆ ಎಂದು ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಸಿ ಹಳ್ಳಿ ಶಹಾಬಾದ ತಿಳಿಸಿದರು. ಈ ಸಂಧರ್ಭದಲ್ಲಿ ಶರಣು ಹಡಪದ ಕೊಲ್ಲೂರು, ಹಾಗೂ ಸಂಗಮೇಶ ಹಡಪದ ಮಾರಡಗಿ, ಸೇರಿದಂತೆ ಗಣೇಶ ಹಡಪದ ಶಹಾಬಾದ ಭಾಗವಹಿಸಿದ್ದರು ಎಂದು ವರದಿಯಾಗಿದೆ.

