ಕಾನಾ ಹೊಸಹಳ್ಳಿ ಕೆ.ಇ.ಬಿ ಕಚೇರಿಯಲ್ಲಿ 75.ನೇ ಗಣರಾಜ್ಯೋತ್ಸವ ಆಚರಣೆ.
ಕಾನಾ ಹೊಸಹಳ್ಳಿ ಜನೇವರಿ.26

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾ ಹೊಸಹಳ್ಳಿ ಹೋಬಳಿಯ ಕೆಇಬಿ ಕಚೇರಿಯಲ್ಲಿ 75.ನೇ ಗಣರಾಜ್ಯೋತ್ಸವ ಅಂಗವಾಗಿ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ ವ್ಯಾಪ್ತಿಯ ಶಾಖಾಧಿಕಾರಿ ಮಾರಪ್ಪ ಧ್ವಜಾರೋಹಣ ನೆರವೇರಿಸಿ, ಲೈನ್ ಮ್ಯಾನ್ ಅಮರೇಶ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಅನೇಕ ಭಾಷೆಗಳನ್ನು ಮಾತನಾಡುವ ಜನ ಹಾಗೂ ವಿವಿಧ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವುದು ವೈಶಿಷ್ಟಮಯವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಮೋಹನ್. ರಮೇಶ್. ನಾಗರಾಜ. ಚನ್ನಬಸಪ್ಪ. ಈರಣ್ಣ. ಸೇರಿ ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ