75.ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಜಿಲ್ಲಾಡಳಿತದಿಂದ “ಸಾಧಕರಿಗೆ ಸನ್ಮಾನ”…
ಬೆಳಗಾವಿ, ಜನೇವರಿ.26 :
ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು, ವಿಕಲ ಚೇತನರ ವೈಯಕ್ತಿಕ ಅನುಪಮ ಸಾಧನೆಗೆ ಪ್ರಶಸ್ತಿ ನೀಡಿದ್ದಕ್ಕೆ 75. ನೇಯ ಗಣರಾಜ್ಯೋತ್ಸವ ದಿನಾಚರಣೆಯ ನಿಮಿತ್ತ ಬೆಳಗಾವಿ ಜಿಲ್ಲಾಡಳಿತದಿಂದ “ಸಾಧಕರಿಗೆ ಸನ್ಮಾನ” ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಅವರು ವಿಶೇಷ ಚೇತನ “ಹನಮಂತ ಕುರಬರ” ಅವರನ್ನು ಗೌರವಿಸಿ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀ ನಿತೀಶ್ ಪಾಟೀಲ, ಎಸ್ ಪಿ ಡಾ. ಭೀಮಾಶಂಕರ ಎಸ್ , ಸಿಇಒ ರಾಹುಲ್ ಶಿಂಧೆ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು: ಎಂ.ಎಂ.ಶರ್ಮಾ. ಬೆಳಗಾವಿ …