ಡಿ.ಎಸ್.ಎಸ್ ಪ್ರತಿಭಟನಾ ರ್ಯಾಲಿ – ತಾಳಿಕೋಟಿ ಕಂದಾಯ ನಿರೀಕ್ಷಕರಿಗೆ ಮನವಿ ಸಲ್ಲಿಕೆ ಸೂಕ್ತ ಕ್ರಮಕ್ಕೆ ಆಗ್ರಹ.
ಕಲಕೇರಿ ಜನೇವರಿ.27

ಕಲಬುರ್ಗಿ ನಗರದ ಕೋಟನೂರ್ ಲುಂಬುಣೆ ಉದ್ಯಾನ ವನದಲ್ಲಿರುವ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮತ್ತಳಿಗೆ ಅವಮಾನ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಕಠೀಣ ಶೀಕ್ಷೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯ ಸದಸ್ಯರು ಕಲಕೇರಿ ಗ್ರಾಮದಲ್ಲಿ ಅಂಬೇಡ್ಕರ್ ವೃತ್ತದಿಂದ ಮುಖ್ಯ ಬಜಾರ ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಿದರು.ಬೃಹತ್ ಪ್ರತಿಭಟನಾ ರ್ಯಾಲಿ ಮುಖಾಂತರ ಮುಖ್ಯ ಬಜಾರ ತಲುಪಿ ಅಲ್ಲಿ ಟೈರ್‌ಗೆ ಬೆಂಕಿಯನ್ನು ಹೆಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ನಂತರ ಪ್ರತಿಬಟನಾ ಸ್ಥಳಕ್ಕಾಗಮಿಸಿದ ತಾಳಿಕೋಟಿ ಕಂದಾಯ ನೀರಿಕ್ಷಕ ದುಂಡಯ್ಯ ಮಠಪತಿ ಅವರ ಮೂಲಕ ಘನವತ್ತ ರಾಜ್ಯಪಾಲರಿಗೆ ತಲುಪುವಂತೆ ಮನವಿಯನ್ನು ಪ್ರತಿಭಟನಾಕಾರರು ಸಲ್ಲಿಸಿದರು.ಈ ಸಂದರ್ಭದಲ್ಲಿ ಅನೇಕ ಪ್ರತಿಭಟನಾಕಾರರು ಮಾತನಾಡಿ ಈ ಘಟನೆಗೆ ಸಂಭದಿಸಿದ ಎಲ್ಲ ದುಷ್ಕರ್ಮಿಗಳನ್ನು ಬಂಧಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸುವಂತೆ ಆಗ್ರಹಪಡಿಸಿದರು. ಇಂತಹ ದುಷ್ಕೃತ್ಯಗಳು ಮತ್ತೆ. ನಡೆಯದಂತೆ ಸೂಕ್ತ ಪೋಲಿಸ್ ಬಂದೋಬಸ್ತ್ ಮತ್ತು ಗುಪ್ತಚರ ಇಲಾಖೆಗಳು ಕ್ರಮ ವಹಿಸಬೇಕೆಂದು ಅವರು ಆಗ್ರಹಿಸಿದರು.ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಲಕ್ಕಪ್ಪ ಬಡಿಗೇರ,ಹಣಮಂತ ವಡ್ಡರ,ಶರಣು ಶಿಂಧೆ, ಪರಶುರಾಮ ದೋರೇಗೋಳ, ಸಲಿಂ ನಾಯೋಡಿ, ಚಾಂದಪಾಶಾ ಹವಾಲ್ದಾರ,ಭಿಮಣ್ಣ ವಡ್ಡರ, ಮಾದೇವ ಲಿಂಗದಳ್ಳಿ,ಶಿವಶರಣ ಹೊಸಮನಿ,ಶಿವಾನಂದ ವಾಲಿಕಾರ ನಬಿಲಾಲ್ ನಾಯ್ಯೋಡಿ, ಸಂತೋಷ ಮೋಪಗಾರ,ಸಂಗು ದೇಸಾಯಿ, ಹಾಜಿಪಾಷ ಜಾಗೀರದಾರ,ದೇವಿಂದ್ರ ಬಡಿಗೇರ,ಪ್ರಕಾಶ ಪುಜಾರಿ,ಲಕ್ಷಣ ಹೊಸಮನಿ, ರಮೇಶ ಹೊಸಮನಿ,ಶಿವು ಹೋಸಮನಿ ಅಶೋಕ ವಡ್ಡರ್, ದತ್ತಪ್ಪ ಬನ್ನೇಟ್ಟಿರವಿ ಸುದಾಕರ್,ವಿನೋದ ವಡಗೇರಿ,ಅಶೋಕ ಕೇರೂಟಗಿ, ಸಂಜೀವ ಪವಾರ,ಮಹೇಶ ದೋಡಮನಿ,ಅಶೋಕ ಗಡಸಲಮನಿ ಸೇರಿದಂತೆ ಇತರರು ಇದ್ದರು.
ತಾಲೂಕ ವರದಿಗಾರರು:ಮಹಿಬೂಬಾಷ.ಮನಗೂಳಿತಾಳಿಕೋಟಿ