ಇಂದು ಕಾಯಕಯೋಗಿ ಮಠ ಗುರೂಜಿ ಅವರ 45.ನೇ ಪುಣ್ಯ ಸ್ಮರಣೆ – ಉಚಿತ ಆರೋಗ್ಯ ಶಿಬಿರ ಮತ್ತು ಔಷಧಿ ವಿತರಣೆ.
ಹುನಗುಂದ ಜನೇವರಿ.27

ಪಟ್ಟಣದ ವಿಜಯಮಹಾಂತೇಶ ವಿದ್ಯಾವರ್ಧಕ ಸಂಘ,ಶ್ರೀ ಗುರುಬಸವಾರ್ಯ ಮಠ ಗುರೂಜಿ ಮಮೋರಿಯಲ್ ಟ್ರಸ್ಟ್,ಬಾಗಲಕೋಟಿಯ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ ಶ್ರೀಕುಮಾರೇಶ್ವರ ಆಸ್ಪತ್ರೆ ವ, ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಕಾಯಕಯೋಗಿ ಲಿಂ,ಗುರುಬಸವಾರ್ಯ ಮಠ ಗುರೂಜಿ ಅವರ ೪೫ ನೆಯ ಪುಣ್ಯಸ್ಮರಣೆ ಅಂಗವಾಗಿ ಜ.೨೮ ರಂದು ರವಿವಾರ ಬೆಳಗ್ಗೆ ೯ ಗಂಟೆಗೆ ವಿಜಯ ಮಹಾಂತೇಶ ಸಭಾ ಭವನದಲ್ಲಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಔಷಧಿ ವಿತರಣೆ ಕಾರ್ಯಕ್ರಮ ಜರಗಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ವಿ.ಮ.ವಿ.ವ ಸಂಘದ ಗೌರವ ಕಾರ್ಯದರ್ಶಿ ಮಹಾಂತೇಶ ಕಡಪಟ್ಟಿ ಹೇಳಿದರು.ಶನಿವಾರ ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಕಾರ್ಯಾಲಯದಲ್ಲಿ ಕರೆದ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,ಇಳಕಲ್ಲದ ಗುರುಮಹಾಂತ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಕೊಳ್ಳಲಿದ್ದಾರೆ.ಶಿರೂರದ ಮಹಾಂತ ತೀರ್ಥದ ಡಾ.ಬಸವಲಿಂಗ ಸ್ವಾಮಿಗಳು ಅಧ್ಯಕ್ಷತೆಯನ್ನು ವಹಿಸುವರು.ವಿ.ಮ.ವಿವ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿವ್ಮಠ ಗೌರವ ಉಪಸ್ಥಿತಿ ವಹಿಸಲಿದ್ದಾರೆ,ದಾವಣಗೇರಿ ವಿಶ್ವ ವಿದ್ಯಾಲಯದ ಉಪಕುಲಪತಿ ಬಿ.ಡಿ.ಕುಂಬಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು.ಗೌರವ ಕಾರ್ಯದರ್ಶಿ ಮಹಾಂತೇಶ ಕಡಪಟ್ಟಿ ಹಿರಿಯ ಟ್ರಸ್ಟಿ ಎಸ್.ಎಸ್.ಬೆಳ್ಳಿಹಾಳ,ಉಚಿತ ಪ್ರಸಾದ ನಿಲಯದ ಕಾರ್ಯಾಧ್ಯಕ್ಷ ಸಂಗಣ್ಣ ಚಿನಿವಾಲರ ಉಪಸ್ಥಿತಿ ವಹಿಸಲಿದ್ದಾರೆ.ಬಾಗಲಕೋಟಯ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾಧಿಕಾರಿ ಮೆಹಬೂಬ ಎಂ ತುಂಬರಮಟ್ಟಿ,ಬಾಗಲಕೋಟ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ,ಹುನಗುಂದ ಪೊಲೀಸ್ ಠಾಣೆಯ ಸಿಪಿಐ ಸುನೀಲ ಸವದಿ, ಪಿಎಸ್‌ಐ ಚನ್ನಯ್ಯ ದೇವೂರ,ಹುನಗುಂದದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಬಿ.ಎಚ್.ತಿಳಗೂಳ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಿ.ಎನ್.ಖ್ಯಾಡ ಅವರಿಗೆ ಗೌರವ ಸನ್ಮಾನ ನಡೆಯಲಿದೆ ಎಂದರು.ಈ ಸಂದರ್ಭದಲ್ಲಿ ಎಂ.ಎಸ್.ಮಠ,ಅರಣೋದಯ ದುದ್ಗಿ,ಡಾ.ಡಿ.ಎಸ್.ಹವಲ್ದಾರ,ಸಂಗಣ್ಣ ಚಿನಿವಾಲ, ರವಿ ಹುಚನೂರ,ಡಾ.ಎಸ್.ಎಚ್.ಮುದಗಲ್ಲ ಇದ್ದರು.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ