ಕಲಕೇರಿ ಎಚ್.ಕೆ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭ.

ಕಲಕೇರಿ ಜನೇವರಿ.27

ತಾಳಿಕೋಟೆ ತಾಲೂಕಿನ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಕಲಕೇರಿ HK ಆವರಣದಲ್ಲಿ 75.ನೇ ಗಣರಾಜ್ಯೋತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಥಮವಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ನಂತರ ನಮ್ಮ ಶಾಲೆಯ SDMC ಅಧ್ಯಕ್ಷರಾದ ಶ್ರೀ ಪ್ರಕಾಶ ಪೂಜಾರಿ ಅವರಿಂದ ಧ್ವಜರೋಹಣ ನೆರವೇರಿತು. ತಾಲೂಕ ಪಂಚಾಯತಿಯ ಸದಸ್ಯರಾದ ಲಕ್ಕಪ್ಪ ಬಡಿಗೇರ್, ಊರಿನ ಮುಖಂಡರಾದ ದೇವೇಂದ್ರ ಬಡಿಗೇರ್ ಗ್ರಾಮ ಪಂಚಾಯಿತಿಯ ಸದಸ್ಯರಾದ ಭೀಮಣ್ಣ ವಡ್ಡರ ಮಲ್ಲು ರಕ್ಕಸಗಿ ರಮೇಶ್ ಮೋಸಗಾರ ಶಾಲೆಯ ಮುಖ್ಯ ಗುರುಗಳಾದ ಶ್ರೀ K M ಮುಚಖೇಡ ಅವರು ಅರ್ಥ ಪೂರ್ಣವಾಗಿ ಸ್ವಾಗತ ಭಾಷಣ ಮಾಡಿದರು.

ನಂತರ ಗುರುಮಾತೆಯವರಾದ ಶ್ರೀಮತಿ PR ಮುಜಾವರ ಅವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಮುಂದೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿದರು. ಶ್ರೀಮತಿ PRಮುಜಾವರ ಗುರುಮಾತೆ ಯವರು ತಮ್ಮ ಪ್ರಾಸ್ತಾವಿಕ ನುಡಿಗಳನ್ನು”ನಮ್ಮ ಸಂವಿಧಾನ, ಅದರ ಅರ್ಥ ಅದರ ವಿಸ್ತಾರ ಹಾಗೂ ಮಕ್ಕಳು ಅತ್ಯಮೂಲ್ಯ ರತ್ನಗಳು ಅವರಲ್ಲಿ ಸದ್ಭಾವನಾ ಗುಣವನ್ನು ತುಂಬಿ ಅವರೇ ನಮ್ಮ ನಿಜವಾದ ಆಸ್ತಿ, ಹೀಗೆ ಎಲ್ಲರಿಗೂ ಮನಮುಟ್ಟುವ ಹಾಗೇ ಹೇಳಿದರು. ಶ್ರೀ LD ವಠಾರ ಗುರುಗಳು ಇಡೀ ಕಾರ್ಯಕ್ರಮವನ್ನು ಅತೀ ಸುಂದರವಾಗಿ, ಎಲ್ಲರ ಮನಸ್ಸಿಗೆ ಮುದ ನೀಡುವ ನಡೆಸಿಕೊಟ್ಟರು. ಕಾರ್ಯಕ್ರಮ , ಪಾಲಕರು ಪೋಷಕರು, ಅಡುಗೆ ಸಿಬ್ಬಂದಿ ಹಾಗೂ ಮುದ್ದು ಮಕ್ಕಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.

ತಾಲೂಕ ವರದಿಗಾರರು:ಮಹಿಬೂಬಬಾಷ.ಮನಗೂಳಿ ತಾಳಿಕೋಟಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button