ಅ.1 ರಂದು ಹೊನ್ನ ಸಿರಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭ.
ಹುನಗುಂದ ಸಪ್ಟೆಂಬರ್.29

ಪಟ್ಟಣದ ವಿಜಯ ಮಹಾಂತೇಶ ಹೈಸ್ಕೂಲ್ ಮಳಿಗೆಯಲ್ಲಿ ಅ.1 ರಂದು ರವಿವಾರ ಬೆಳಗ್ಗೆ 1೦:3೦ ಗಂಟೆಗೆ ಹೊನ್ನಸಿರಿ ಸೌಹಾರ್ಧ ಪತ್ತಿನ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಡಾ.ಬಸವರಾಜ ಚಂದಪ್ಪ ಕಡಿವಾಲ ಹೇಳಿದರು.ಪಟ್ಟಣದ ಹೊನ್ನಸಿರಿ ಸೌಹಾರ್ಧ ಪತ್ತಿನ ಸಹಕಾರಿ ಸಂಘದ ನೂತನ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ತರಗಿ ಸಂಸ್ಥಾನಮಠ ಇಳಕಲ್ಲದ ಗುರುಮಹಾಂತ ಶ್ರೀಗಳು,ನಂದವಾಡಗಿಯ ಡಾ. ಅಭಿನವ ಚನ್ನಬಸವ ಶಿವಾಚಾರ್ಯ ಮತ್ತು ನಿತ್ಯ ದಾಸೋಹ ಮಠ ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿಕೊಂಡು ಉದ್ಘಾಟನೆ ಮಾಡಲಿದ್ದಾರೆ.ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಅಮರೇಶ ಹಳಪೇಟಿ,ವೀರೇಶ ಮುದಗಲ್ಲ ,ಸಂಗಪ್ಪ ಹೊಸೂರ,ಮಹೇಶ ಬೆಳ್ಳಿಹಾಳ,ವೀರಣ್ಣ ಹಂಡರಗಲ್ಲ,ಲಾಲಾಬಾಷಾ ಶಿವನಗುತ್ತಿ,ಮಲ್ಲೇಶಪ್ಪ ಹುನಗುಂದ,ಸಕರೆಪ್ಪ ಬಂಕದ,ವೀರೇಶ ಪಾಟೀಲ,ಪ್ರವೀಣ ಹಳಪೇಟಿ,ಗಿರೀಶ ಹಳಪೇಟಿ,ಮುಖ್ಯ ಕಾರ್ಯನಿರ್ವಾಹಕ ಚೇತನ ಮನಗೂಳಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ