ಅಕ್ಷರ ದಾಸೋಹ ಕಾರ್ಯಕರ್ತರ ಜಿಲ್ಲಾ ಸಮಾವೇಶ.
ತರೀಕೆರೆ ಫೆಬ್ರುವರಿ.4
ಅಡಿಗೆ ಮಾಡುವಾಗ ಸ್ವಚ್ಛತೆಯನ್ನು ಕಾಪಾಡಿ ಮಕ್ಕಳಿಗೆ ಪೌಷ್ಟಿಕ ರುಚಿಕರವಾದ ಆಹಾರ ಬಡಿಸಿರಿ ಎಂದು ಅಕ್ಷರ ದಾಸೋಹ ಕಾರ್ಯಕರ್ತೆಯರ ಫೆಡರೇಶನ್ ಜಿಲ್ಲಾ ಅಧ್ಯಕ್ಷರಾದ ಜಿ ರಘು ರವರು ಹೇಳಿದರು. ಅವರು ಇಂದು ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು, ತಾಲೂಕಾ ಪಂಚಾಯಿತಿ ತರೀಕೆರೆ, ವತಿಯಿಂದ ಏರ್ಪಡಿಸಿದ್ದ ಅಡುಗೆ ಸಿಬ್ಬಂದಿಗೆ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಲೆ ಏರಿಕೆ ಸಂದರ್ಭದಲ್ಲಿ ನೀಡುತ್ತಿರುವ ಗೌರವದನ ತುಂಬಾ ಕಡಿಮೆಯಾಗಿದ್ದು ಗೌರವದನ ನಿಲ್ಲಿಸಿ ಮಾಸಿಕ ಸಂಬಳವನ್ನು ಸರ್ಕಾರ ಘೋಷಣೆ ಮಾಡಬೇಕು.
ಹಾಗೂ ಇವರಿಗೆ ಅಪಘಾತ ವಿಮೆ ಇಲ್ಲ ವೈದ್ಯಕೀಯ ಬತ್ತೆ ಇಲ್ಲ ಮೂಲಭೂತ ಸೌಕರ್ಯಗಳು ನೀಡಿಲ್ಲ, 60 ವರ್ಷ ತುಂಬಿದ ನಂತರ ಇವರಿಗೆ ಪೆನ್ಷನ್ ವ್ಯವಸ್ಥೆ ಇಲ್ಲ. ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ನ್ಯಾಯ ಸಿಕ್ಕಿಲ್ಲ ಆದ ಕಾರಣ ಫೆಬ್ರವರಿ 11.ರಂದು ಚಿಕ್ಕಮಗಳೂರಿನಲ್ಲಿ ಜಿಲ್ಲಾ ಸಮಾವೇಶ ಏರ್ಪಡಿಸಿ ಐದು ಜನ ಶಾಸಕರನ್ನು ಈ ಸಮಾವೇಶಕ್ಕೆ ಆಹ್ವಾನಿಸಿ ಸರ್ಕಾರದ ಮುಂದೆ ನಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗುವುದು ಎಂದು ಹೇಳಿದರು. ಆರು ಕ್ಲಸ್ಟರ್ಗಳಿಂದ 80 ಶಾಲೆಗಳಿಂದ ಬಿಸಿಯೂಟ ಕಾರ್ಯಕರ್ತರು ತರಬೇತಿಯಲ್ಲಿ ಭಾಗವಹಿಸಿದ್ದರು. ತಾಲೂಕಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಗಣೇಶ್ ರವರು ಮಾತನಾಡಿ, 45 ವರ್ಷ ತುಂಬಿದವರು ಪ್ರಧಾನ ಮಂತ್ರಿ ಸಮ್ಮಾನ್ ಯೋಜನೆ ಅಡಿ ಪಿಂಚಣಿ ಸೌಲಭ್ಯ ಪಡೆಯಲು ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಉಳಿತಾಯ ಮಾಡಿರಿ ಮತ್ತು ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯ ಪಡೆಯಿರಿ,
ಹಣ್ಣು ಮತ್ತು ತರಕಾರಿಗಳಲ್ಲಿ ವಿಷಕಾರಿ ಔಷಧಿಗಳು ಬೆರೆತಿರುವುದರಿಂದ ಎಚ್ಚರಿಕೆ ವಹಿಸಿ ಅಡುಗೆ ತಯಾರಿಸಿರಿ ಎಂದು ಹೇಳಿದರು. ಅಡಿಗೆ ಮಾಡುವ ಸ್ಪರ್ಧೆಯಲ್ಲಿ 14 ಶಾಲೆಗಳು ಸ್ಪರ್ಧಿಸಿದ್ದವು 4 ಶಾಲೆಗಳಿಗೆ ಪ್ರಥಮ ಬಹುಮಾನ 4 ಶಾಲೆಗಳಿಗೆ ದ್ವಿತೀಯ ಬಹುಮಾನ ನಾಲ್ಕು ಶಾಲೆಗಳಿಗೆ ತೃತೀಯ ಬಹುಮಾನ ಹಾಗೂ ನಾಲ್ಕು ಶಾಲೆಗಳಿಗೆ ಸಮಾಧಾನಕರ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ತರೀಕೆರೆ ಗೌರವ ಅಧ್ಯಕ್ಷ ಶಿವಕುಮಾರ್ ಗಟ್ಟಿ,ಅಧ್ಯಕ್ಷರಾದ ಚಂದ್ರಮ್ಮ, ಸಿ ಆರ್ ಪಿ ಗಳಾದ ಮಮತಾ, ಕಮಲ,ಶಿಲ್ಪ,ಜಿ ಸುರೇಶ್ ಮಾಂತೇಶ್, ಮರಿ ತಿಮ್ಮಯ್ಯ ಹಾಗೂ ಅತಿಥಿಯ ಶಾಲೆ ಮುಖ್ಯ ಶಿಕ್ಷಕರಾದ ಶಕುಂತಲಾ ಸುರೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ