ದೀನ ದಲಿತರ, ಶೋಷಿತರ ಬಡ ಮಹಿಳೆಯರಿಗೆ ಪಂಚ ಗ್ಯಾರಂಟಿ ಸಹಕಾರಿಯಾಗಿದೆ – ಶಾಸಕ ಡಾ.ಶ್ರೀ ನಿವಾಸ್.ಎನ್.ಟಿ.
ಕಾನಾ ಹೊಸಹಳ್ಳಿ ಫೆಬ್ರುವರಿ.4

ದೀನ ದಲಿತರ ಶೋಷಿತರ, ಬಡ ಮಹಿಳೆಯರ ಏಳಿಗೆಗೆ ಪಂಚ ಗ್ಯಾರಂಟಿ ಯೋಜನೆ ಸಹಕಾರಿಯಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು. ಇಲ್ಲಿನ ಗಾಣಿಗರ ಸಮುದಾಯ ಭವನದಲ್ಲಿ ನಡೆದ ಕಾನಾ ಹೊಸಹಳ್ಳಿ ಹೋಬಳಿ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಿ.ಎಂ. ಸಿದ್ದರಾಮಯ್ಯ ಹಾಗೂ ಡಿ.ಸಿ.ಎಂ. ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿ ಕೊಡುತ್ತಿರುವುದನ್ನು ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದರು. ಅಂದು ದೇವರಾಜ ಅರಸು ಅವರು ಬಡವರ ಪರವಾಗಿ ಕೆಲಸ ಮಾಡಿ ದೇಶದ ಗಮನ ಸೆಳೆದಿದ್ದರು. ಇಂದು ಸನ್ಮಾನ್ಯ ಸಿ.ಎಂ. ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ ಮತ್ತು ಯುವ ನಿಧಿಗಳ ಮೂಲಕ ದೀನ ದಲಿತರು, ಶೋಷಿತರು ಮತ್ತು ಎಲ್ಲಾ ವರ್ಗದ ಬಡವರನ್ನು ಮೇಲಕ್ಕೆ ಎತ್ತುವಂತದ್ದು ಶ್ಲಾಘನೀಯವಾದದ್ದು ಎಂದೂ ಹೇಳಿದರು. ಈ ಯೋಜನೆಗಳ ಬಗ್ಗೆ ಸಾಕಷ್ಟು ಜನ ಅಪ ಪ್ರಚಾರ ಮಾಡಿದರು. ಆದರೂ ಟೀಕೆಗಳಿಗೆ ಸರ್ಕಾರ ತಲೆ ಹಾಕದೇ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಎಲ್ಲವನ್ನೂ ಸರಿ ದೂಗಿಸಿಕೊಂಡು ಸ್ವಲ್ಪಾ ಮಟ್ಟಿಗೆ ತಡವಾಗಿ ಆದರೂ ಅಭಿವೃದ್ಧಿಗೆ ಒತ್ತು ಕೊಟ್ಟಿರುವುದು ಮೆಚ್ಚುವಂತದ್ದು ಎಂದೂ ಶಾಸಕರು ಹೇಳಿದರು. ಬುದ್ಧ, ಬಸವ, ಅಂಬೇಡ್ಕರ್ ಮತ್ತು ಸಂವಿಧಾನ ಪರ ಚಿಂತನೆಗಳನ್ನು ಮೈಗೂಡಿಸಿ ಕೊಂಡು ಸರ್ಕಾರ ಅಭಿವೃದ್ಧಿಗೆ ಒತ್ತು ನೀಡುತ್ತದೆ ಎಂದರು. ಕ್ಷೇತ್ರದ ಅಭಿವೃದ್ಧಿಗಾಗಿ ನೂರಾರು ಕೋಟಿ ಅನುದಾನ ತಂದಿರುವುದನ್ನು ಜನರಿಗೆ ಮಾಹಿತಿ ನೀಡಿದರು. ಈ ವೇಳೆ ತಾಲೂಕಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ವೈ. ರವಿಕುಮಾರ್, ತಹಶೀಲ್ದಾರ್ ರೇಣುಕಮ್ಮ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೇತನ ಎ.ಸಿ, ಶಿಶು ಅಭಿವೃದ್ಧಿ ಇಲಾಖಾಧಿಕಾರಿ ಮಾಲಂಬಿ, ಜೆಸ್ಕಾಂ ಎಇಇ ಪ್ರಕಾಶ್ ಪತ್ತೆನೂರು, ಸಾರಿಗೆ ಘಟಕ ವ್ಯವಸ್ಥಾಪಕ ಮರಿಲಿಂಗಿಪ್ಪ ಮುಖಂಡರಾದ ಕೆ.ಎಂ ಶಶಿಧರ ಸ್ವಾಮಿ, ಉಪಾಧ್ಯಕ್ಷೆ ನೇತ್ರಾವತಿ ಮಂಜುನಾಥ, ಕಾನಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಗೌಡ, ಕೂಡ್ಲಿಗಿ ಬ್ಲಾಕ್ ಅಧ್ಯಕ್ಷ ಗುರುಸಿದ್ದನಗೌಡ, ಎಎಸ್‌ಐ ಎಸ್.ಕೆ.ಜಿಲಾನಿ, ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್ ಇತರರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ