ಸಂಕೋನಟ್ಟಿ ಗ್ರಾಮದಲ್ಲಿ ವರ್ಧಮಾನ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಡಿಸಿಎಂ, ಶಾಸಕರಾದ ಲಕ್ಷ್ಮಣ ಸಂ. ಸವದಿ.
ಅಥಣಿ ಫೆಬ್ರುವರಿ.5

ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ರವಿವಾರ ದಂದು ವರ್ಧಮಾನ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಹಾಗೂ ದಾನಿಗಳ ಸನ್ಮಾನ ಸಮಾರಂಭದಲ್ಲಿ ಜರುಗಿದ ಪರಪ್ಪ ಲಕ್ಷ್ಮಣ ಪಡನಾಡ ವಿದ್ಯಾಲಯ, ಬಾಬಾಸಾಬ ಮಲಗೌಡ ಪಾಟೀಲ ಪದವಿ ಪೂರ್ವ ಮಹಾ ವಿದ್ಯಾಲಯ ಸಂಕೋನಟ್ಟಿ, ಶ್ರೀಮತಿ ತನುಜಾ ಕಿರಣಕುಮಾರ್ ಪಾಟೀಲ್ ಪ್ರೌಢಶಾಲೆ ನಂದಗಾಂವ ಇವುಗಳ ನಾಮಕರಣ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಪಾಲ್ಗೊಂಡು ಮಾತನಾಡಿದರು.ವರ್ಧಮಾನ ಶಿಕ್ಷಣ ಸಂಸ್ಥೆಯು ಕಡಿಮೆ ಶುಲ್ಕ ಪಡೆದು ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಬಡವರ ಬಾಳಲ್ಲಿ ಶಿಕ್ಷಣದ ಬೆಳಕು ನೀಡಿದೆ. ಇನ್ನೂ ಈ ಶಿಕ್ಷಣ ಸಂಸ್ಥೆಯು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂದು ಹೇಳಿದರು.ಸಮಾರಂಭದಲ್ಲಿ ಶ್ರವಣ ಬೆಳಗೊಳದ ಜಗದ್ಗುರು ಸ್ವಸ್ತಿಶ್ರೀ ಮದಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಸಿದ್ದಯೋಗಿ ಅಮರೇಶ್ವರ ಮಹಾರಾಜರು ಸಾನಿಧ್ಯ ವಹಿಸಿದ್ದರು.ಸಿ.ಬಿ. ಪಡನಾಡ, ಆನಂದಕುಮಾರ್ ಮಗದುಮ್ಮ, ಶ್ರೀಕಾಂತ ಮುತ್ತಪ್ಪ ಅಸ್ಕಿ, ಶಾಂತಿನಾಥ ನಂದೇಶ್ವರ, ರಾಜು ಪಾಟೀಲ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.