ಕೊಟ್ಟೂರು:ಎಂ.ಕಾಂ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ.

ಕೊಟ್ಟೂರು ಫೆಬ್ರುವರಿ.8

ಕೊಟ್ಟೂರೇಶ್ವರ ಮಹಾವಿದ್ಯಾಲಯ ಕೊಟ್ಟೂರಿನಲ್ಲಿ ಎಂ.ಕಾಂ ಸ್ನಾತಕೊತರ ವಿಭಾಗದಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಿದ್ದರಾಮ ಕಲ್ಮಠ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಉತ್ತಮ ಅಂಕ ಗಳಿಸುವುದರ ಮೂಲಕ ಪಡೆಯಿರಿ ಹಾಗೂ ಕಾಲದ ಮಹತ್ವವನ್ನು ತಿಳಿದುಕೊಳ್ಳಿ ಎನ್ನುತ್ತಾ ” ಕಲಿಯುಗ ಮುಗಿದರೂ ಕಲಿಯುದು ಮುಗಿಯಲ್ಲ” ಎಂದು ಕಲಿಕೆ ಎಂಬುವುದು ನಿರಂತರವಾಗಿರುತ್ತದೆ ಎಂದು ಜ್ಞಾನದ ಅರಿವನ್ನು ಮೂಡಿಸಿದರು .ಹಾಗೂ ವಿದ್ಯೆ ಜೊತೆ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿ ಹೊಂದಿ ಸಂಸ್ಥೆಗೆ ಒಳ್ಳೆಯ ಹೆಸರನ್ನು ತರುವ ಪ್ರಯತ್ನ ಮಾಡಿ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರವಿಕುಮಾರ್ ಮಾತನಾಡಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಮೂಲಕ ಕಾಲೇಜಿನ ಸವಲತ್ತುಗಳ ಬಗ್ಗೆ ಉತ್ತಮ ಗ್ರಂಥಾಲಯದ ಬಳಕೆ ಹಾಗೂ. ಹಿರಿಯ ಉಪನ್ಯಾಸಕರ ಮಾರ್ಗದರ್ಶನ ಪಡೆದುಕೊಳ್ಳಿ ಎಂದು ತಿಳಿಸಿದರು. ಮತ್ತು ತಮ್ಮ ವಿದ್ಯಾಭ್ಯಾಸವನ್ನು ಉದಾಹರಣೆಯಾಗಿ ತೆಗೆದು ಕೊಂಡು ” ನಾನು science ವಿದ್ಯಾರ್ಥಿಯಾಗಿದ್ದೆ ಹಾಗಾಗಿ ಕನ್ನಡವನ್ನು ಬಳಸಲು ಕಷ್ಟವಾಗುತ್ತಿತ್ತು ಆದರೆ .ನಾನು ನಮ್ಮ ಸಂಸ್ಥೆಯಲ್ಲಿ ಪ್ರತಿಯೊಬ್ಬರ ಮಾತನ್ನು ಆಲಿಸುತ್ತಾ ಕನ್ನಡದಲ್ಲಿ ಭಾಷಣ ಮಾಡುವುದನ್ನ ಕಲಿತಿದ್ದೇನೆ.ಯಾವುದೇ ವಿಷಯದ ಬಗ್ಗೆ ಜ್ಞಾನವನ್ನು ತಿಳಿದು ಕೊಳ್ಳಬೇಕಾದರೆ ಮೊದಲು ಆಸಕ್ತಿ ಮುಖ್ಯವಾಗಿರುತ್ತದೆ ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.

ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಸಜ್ಜನ್ ಹಾಗೂ IQAC ಸಂಯೋಜಕರಾದ ಕೃಷ್ಣಪ ಸರ್ , ರಾಸಾಯನ ಶಾಸ್ತ್ರದ ಮುಖ್ಯಸ್ಥರಾದ ರವೀಂದ್ರ ಗೌಡ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಜಿ ಬಿ ಸಿದ್ದನಗೌಡ ಹಾಗೂ ಪಿಯುಸಿ ಪ್ರಾಚಾರ್ಯರಾದ ಎಂ ಹೆಚ್ ಪ್ರಶಾಂತ್ ಕುಮಾರ್. ಹಾಗೂ ಇತರೆ ಉಪನ್ಯಾಸಕರು ಉಪಸ್ಥಿತರಿದ್ದರು. ಎಂ.ಕಾಂ ವಿಭಾಗದ ಉಪನ್ಯಾಸಕರಾದ ಗುರುಲಿಂಗನಗೌಡರು ವಿದ್ಯಾರ್ಥಿಗಳಿಗೆ ಜ್ಞಾನವನ್ನು ತಿಳಿಯಿರಿ ಪ್ರತಿಯೊಬ್ಬರಿಂದಲೂ ಏನನ್ನಾದರೂ ತಿಳಿಯಿರಿ ಎಂದು ಜ್ಞಾನದ ಮಹತ್ವ ತಿಳಿಸಿದರು.ಹಾಗೂ ಶರಣೇಶ್ ಉಪನ್ಯಾಸಕರು ” ಆಯ್ಕೆ ಇದೆ ನಮ್ಮ ಕೈಯಲ್ಲಿ” ಎಂಬ ನೇಮಿಚಂದ್ರ ಮಾತನ್ನ ವಿದ್ಯಾರ್ಥಿಗಳಿಗೆ ಆಯ್ಕೆಯ ಕುರಿತು ತಿಳಿಸಿದರು.ಹಾಗೂ ಶ್ರೀನಿವಾಸ್ ಉಪನ್ಯಾಸಕರು ತಮ್ಮ ಅನುಭವಗಳ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತೇಜನವನ್ನು ನೀಡಿದರು. ಹಾಗೂ ಸುರೇಶ್ ಉಪನ್ಯಾಸಕರು ಪುಸ್ತಕದ ಜ್ಞಾನದ ಜೊತೆಗೆ ಹೊರಗಿನ ಪ್ರಪಂಚವನ್ನು ತಿಳಿಯಿರಿ ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನ ವಿದ್ಯಾರ್ಥಿ ಬಸವರಾಜ್ ಅವರು ನೆರವೇರಿಸಿ ಕೊಟ್ಟರು .ಭಾರತಿ ಮತ್ತು ಶಾಲಿನಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಮೃತ ಮತ್ತು ಚಂದನ ಸ್ವಾಗತ ಕಾರ್ಯಕ್ರಮವನ್ನು ನಿರ್ವಹಿಸಿದರು. ಹಾಗೂ ಅನುಷಾ ಮತ್ತು ಮಹೇಶ್ ವಂದನಾರ್ಪಣೆ ಮಾಡಿದರು. ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನ ತಿಳಿಸುತ್ತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ” ನಹೀ ಜ್ಞಾನೇನ ಸದೃಶಂ” ಎಂಬ ಶ್ಲೋಕದ ಮಾತಿನಂತೆ ಜ್ಞಾನಕ್ಕೆ ಸಮಾನವಾದದ್ದು ಯಾವುದು ಇಲ್ಲ .ಅಂತಹ ಜ್ಞಾನವನ್ನು ಪಡೆಯ ಬೇಕೆಂದರೆ ಮೊದಲು ಆಸಕ್ತಿ ಬರಬೇಕಾಗುತ್ತದೆ ಆಸಕ್ತಿ ಬರಲು ಈ ರೀತಿಯ ಕಾರ್ಯಕ್ರಮಗಳು ಬಹಳಷ್ಟು ವಿದ್ಯಾರ್ಥಿಗಳ ಮನಸ್ಸನ್ನ ಆಸಕ್ತಿ ಗೊಳಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button