“ಕನ್ನಡಿಗರ ಅಭಿಮಾನ”…..

ಕನ್ನಡ ಕವಿರತ್ನರೆ ಜ್ಞಾನಪೀಠ ಪ್ರಶಸ್ತಿಗೆ




ಬಾಜಿನರಾದವರೇ
ಋಷಿ ಮುನಿಗಳ ತಪಸ್ಸಿಗೆ
ವೀರ ಶೂರತನಕ್ಕೆ ಹೆಸರಾದವರೇ
ಕಲೆ ಸಾಹಿತ್ಯ ಸಂಸ್ಕೃತಿ ನಾಡಿನ
ಬೀಡಿಗೆ ತಲೆಬಾಗಿದವರೇ
ನಡೆ ನುಡಿ ಪ್ರೀತಿ ತ್ಯಾಗಕ್ಕೆ ಮುನ್ನಡೆ ಬರೆದವರೇ
ಇದ್ದರೆ ಮತ್ತೊಂದು ಜನುಮ ಮತ್ತೆ ಕನ್ನಡ
ನಾಡಲ್ಲೆ ಹುಟ್ಟಿ ಬರುವೆ ಎಂದವರೇ
ನಾಡಿನ ಕವಿಗಳ ಸಾಹಿತಿಗಳ ದಾಸರ ಸಂತರ
ಕೀರ್ತನೆಗಳ ಸಂಗೀತದ ಕೋಗಿಲೆಯ ಒಡಲು
ನಮ್ಮ ಕಾವೇರಿ ಮಡಿಲು
ಇತಿಹಾಸದ ಪುಟದಲ್ಲಿ ಮರೆತರೆ
ಮರೆಯಲಾಗದ ಮಾಣಿಕ್ಯದ ಮುತ್ತುರತ್ನಗಳು
ಕವಿ ವನ್ಯರು
ಓ ಕನ್ನಡ ಮಾತೆ
ಮಾನವರಲ್ಲಿ ಜಾತಿ, ಮತ ಪಂಗಡಗಳ ಬೇಗ
ಬಾವ ಕಳೆದುಬಿಡು
ಜಗತ್ತಿನಾದ್ಯಂತ ತುಂಬಿರುವ ನರಭಕ್ಷಕರ
ವಂಚನೆಯನ್ನು ಕೊಂದುಬಿಡು
ಸ್ತ್ರೀ ರಕ್ಷಣೆಗೆ ಜಗತ್ತಿನ ಎಲ್ಲಾ ಶಕ್ತಿಯನ್ನು
ಒಂದುಗೂಡಿ ಬಿಡು
ಕನ್ನಡ ನಾಡ ನುಡಿಯಲಿ ಸಂಸ್ಕೃತಿಯ ಬೀಜವ
ಹರಡಿ ಬಿಡು
ನಿನ್ನ ಧರ್ಮದ ಕಾರ್ಯಕ್ಕೆ ಅಧರ್ಮ ಕುಗ್ಗಿ
ಹೋಗಲಿ
ಕಿಡಿಗೇಡಿಗಳ ಕಿಚ್ಚು ಕೊಚ್ಚಿ ಹೋಗಲು ಕೈ
ಜೊತೆಯಾಗಿರಲಿ
ನಿನ್ನಲ್ಲಿ ಅಡಗಿರುವ ಅಜ್ಞಾನವ ಕಳೆದು ಜ್ಞಾನದ
ಜ್ಯೋತಿ ಬೆಳಗಲಿ
ನಾನು ನನ್ನದು ಎಂಬ ಭೂತ ಹಿಂದೆ ಒಡೆದು
ಹೋಗಲಿ
ಕನ್ನಡ ಮಾತೆಯೇ ನನ್ನ ಹೃದಯದ ಆರತಿ
ಎಂದೆಂದೂ ಸಿದ್ಧವಾಗಿರಲಿ
ಅನುರಾಧ.ಡಿ ಸನ್ನಿ
ಹೂಲಗೇರಿ