ಕೂಸಿನ ಮನೆ ಕೇಂದ್ರಗಳಿಗೆ ಮೊಬೈಲ್ ಕ್ರಷ್ ತಂಡ ಭೇಟಿ.
ಗೋರಬಾಳ ಫೆಬ್ರುವರಿ.8

ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಗೋರಬಾಳ, ಬಲಕುಂದಿ, ಕೆಲೂರ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೂಸಿನ ಮನೆ ಕೇಂದ್ರಗಳಿಗೆ ರಾಜ್ಯ ಮೊಬೈಲ್ ಕ್ರಷ್ ತಂಡದ ಅವಿನಾಶ್ ಹಾಗೂ ವಿಶ್ವನಾಥ್ ಅವರು ಭೇಟಿ ನೀಡಿ ಕೇಂದ್ರಗಳ ಪರಿಶೀಲನೆ ಹಾಗೂ ಶಿಶು ಆರೈಕೆದಾರರ ಜೊತೆಗೆ ಸಂವಾದ ನಡೆಸಿದರು.ಈ ವೇಳೆ ಕೇಂದ್ರದಲ್ಲಿರುವ ಕೊರತೆ ಹಾಗೂ ಕೇಂದ್ರಕ್ಕೆ ಬೇಕಾದ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.ಈ ಸಂದರ್ಭದಲ್ಲಿ ಎಡಿಪಿಸಿ ರಾಜೇಶ್ವರಿ , ಡಿಐಇಸಿ ಅಜಯ್ ಸೂಳಿಕೇರಿ, ಸಹಾಯಕ ನಿರ್ದೇಶಕರಾದ (ಗ್ರಾ.ಉ) ಗಿರಿಮಲ್ಲಪ್ಪ ಶಿರಗುಪ್ಪಿ, ತಾಂತ್ರಿಕ ಸಂಯೋಜಕ ವಿಶ್ವನಾಥ್ ಹೆಬ್ಬಾಳ , ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಶಿಶು ಆರೈಕೆದಾರರು, ಉಪಸ್ಥಿತರಿದ್ದರು.