ಕಾಯಕ ಶರಣರ ಜಯಂತಿಯನ್ನು ಆಚರಣೆ.
ಜಮಖಂಡಿ ಫೆಬ್ರುವರಿ.10

ಜಮಖಂಡಿ ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ದಿನಾಂಕ 10.02.2024 ಶನಿವಾರ ಮುಂಜಾನೆ 10:ಗಂಟೆಗೆ ಕಾಯಕ ಶರಣರ ಜಯಂತಿಯನ್ನು ಆಚರಿಸಲಾಯಿತು. ಆದ್ಯ ವಚನಕಾರ ಕಾಯಕಯೋಗಿ ಶಿವಶರಣ ಮಾದರ ಚನ್ನಯ್ಯ ಮತ್ತು ಡೋಹಾರ ಕಕ್ಕಯ್ಯ ಸಮಗಾರ ಹರಳಯ್ಯ ಮತ್ತು ಉರ್ಲಿಂಗಪೆದ್ದಿ ಹಾಗೂ ಮಾದರ ಧೂಳಯ್ಯನವರ ಜಯಂತಿಯ ಕಾರ್ಯಕ್ರಮದಲ್ಲಿ ಪೂಜೆ ನೆರವೇರಿಸಿ ಮಾತನಾಡಿದ 12.ನೇ ಶತಮಾನದ ಅಂದಿನ ಶರಣರ ಜನಗಳು ಇಂದು ನಮಗೆ ದಾರಿ ದೀಪವಾಗಿವೆ ಅವರು ಹೇಳಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯ ಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಕರ್ತವವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಶಾಮರಾವ್ ಘಾಟಗೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಪುಟ್ಟು ಪಾಣಿ ಮುತ್ತಣ್ಣ ಮೇತ್ರಿ ಪರುಸುರಾಮ್ ಕಾಂಬಳೆ ದಾನೇಶ್ ಗಾಟ್ಗೆ ಶಶಿಕಾಂತ ದೊಡ್ಡಮನಿ ಪ್ರೇಮ ಬಳೋಲಗಿಡದ ಸಂಜು ಐಹೊಳೆ ಮಾದೇವ ಕಡಕೋಳ ಶೇಖರ ಭಜಂತ್ರಿ ರಮೇಶ್ ಆಲಬಾಳ ಶಶಿ ಮೀಸಿ ಸುರೇಶ್ ಕಾಂಬಳೆ ಸುನಿಲ್ ಜೋಗದಂಡೆ ಪ್ರಭು ಭಜಂತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆಯನ್ನು ನೆರವೇರಿಸಿದರು.