ಕಂದಗಲ್ಲು ಗ್ರಾಮದ ಈಶ್ವರ ದೇವರ ರಥೋತ್ಸವ.
ಕಂದಗಲ್ಲು ಫೆಬ್ರುವರಿ.11

ಕೊಟ್ಟೂರು ತಾಲೂಕಿನ ಕಂದಗಲ್ಲು ಗ್ರಾಮದ ಈಶ್ವರದೇವರ ರಥೋತ್ಸವವು ಸಾವಿರಾರು ಭಕ್ತಸ್ತೋಮದಲ್ಲಿಶನಿವಾರ ವಿಜೃಂಬಣೆಯಿಂದ ನೆರವೇರಿತು. ರಥೋತ್ಸವ ಪ್ರಯುಕ್ತವಾಗಿ ಶ್ರೀ ಸ್ವಾಮಿಯ ಮೂರ್ತಿಗೆ, ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಧಾರ್ಮಿಕ ಪೂಜಾ ಕೈಂಕರ್ಯಗಳು ಶಾಸ್ರೋಕ್ತವಾಗಿ ನೆರವೇರಿದವು.ರಥೋತ್ಸವದ ಪಟಾಕ್ಷಿ ಹರಾಜು ಪ್ರಕ್ರಿಯೆಯಲ್ಲಿ ಗ್ರಾಮದ, ಮಲ್ಲನಗೌಡ್ರ ಸಿದ್ದನಗೌಡ ವಕೀಲರು 11.5 ಸಾವಿರ ರೂ.ಗೆ ಶ್ರೀಸ್ವಾಮಿಯ ಪಟಾಕ್ಷಿಯನ್ನು ಪಡೆದು ಕೊಂಡರು. ಪಟಾಕ್ಷಿ ಸವಾಲು ಮುಗಿಯುತ್ತಿದ್ದಂತೆ ಸಾವಿರಾರು ಭಕ್ತರು ಶ್ರೀಸ್ವಾಮಿಗೆ ಉತ್ತುತ್ತಿ, ಬಾಳೆ ಹಣ್ಣು, ಎಸೆದು ಭಕ್ತಿ ಸಮರ್ಪಿಸಿ ಜಯ ಘೋಷಗಳನ್ನು ಕೂಗುತ್ತಾ ರಥವನ್ನು ಎಳೆದೊಯ್ದರು. ರಥೋತ್ಸವವು ಸಮಳ,ಮೇಳ ಮಂಗಳ ವಾದ್ಯಗಳೊಂದಿಗೆ,ನಂದಿ ಧ್ವಜ ಕುಣಿತದೊಂದಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ, ಭಕ್ತಸ್ತೋಮದಲ್ಲಿ ಸಂಭ್ರಮದಿಂದ ಪಾದಕಟ್ಟೆಯವರಿಗೆ ರಥೋತ್ಸವವು ರಾಜ ಗಾಂಭೀರ್ಯದಿಂದ ಸಾಗಿ ಮತ್ತೆ ಮರುಳಿ ಮೂಲ ಸ್ಥಾನಕ್ಕೆ ಬಂದು ನೆಲೆ ನಿಂತಿತು. ರಥೋತ್ಸವ ಸಂಧರ್ಭದಲ್ಲಿ ದೇವಸ್ಥಾನದ ಅರ್ಚಕರು, ಗ್ರಾಮದ ಮುಖಂಡರು, ಆಯಗಾರರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು