ಸರಕಾರದ ಸಾಧನೆ ಜನರಿಗೆ ತಿಳಿಸಿ – ಉತ್ತರಾಖಂಡ ಶಿಕ್ಷಣ ಧನಸಿಂಗ್ ರಾವತ …
ಸಾಲೋಟಗಿ (ಮೇ.5) :
ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಮತದಾರರ ಒಲವು, ಕಾರ್ಯಕರ್ತರ ಪರಿಶ್ರಮ,ಪಕ್ಷದ ಯೋಜನೆಗಳಿಂದ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಬರಲಿದೆ ಎಂದು ಉತ್ತರಾಖಂಡದ ಶಿಕ್ಷಣ ಸಚಿವ ಧನಸಿಂಗ ರಾವತ ಹೇಳಿದರು.ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ತಾಲೂಕಿನ ಸಾಲೋಟಗಿ ಗ್ರಾಮದ ಜನರು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ ಮತಯಾಚಿಸಿದರು. ದೇಶದ ನರೇಂದ್ರ ಮೋದಿಯವರು ವಿಶ್ವ ಮೆಚ್ಚಿದ ನಾಯಕರಾಗಿದ್ದಾರೆ. ಅವರ ಶ್ರಮದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ 370 ವಿಧಿ ರದ್ದು ಮಾಡಿ ದೇಶದಲ್ಲಿ ಎಲ್ಲರಿಗೂ ಅಲ್ಲಿ ಹೋಗಿ ಬರಲು ಸ್ವತಂತ್ರ ಕಲ್ಪಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದೇವೆ.

ಮತ್ತು ದೇಶ ವಿದೇಶಗಳಲ್ಲಿ ಉತ್ತಮ ಸಂಬಂಧ ಹೊಂದಿದ್ದೇವೆ. ಅಭಿವೃದ್ದಿ ಕಾರ್ಯ ವೇಗವಾಗುತ್ತಿದೆ ಮತ್ತು ರಾಜ್ಯದಲ್ಲಿಯೂ ಸಹ ಉತ್ತಮ ಕಾರ್ಯಗಳು ಮಾಡುವದರಿಂದ ಬಿಜೆಪಿ ಸರಕಾರ ರಾಜ್ಯದಲ್ಲಿ ರಚನೆ ಆಗುತ್ತದೆ ಎಂದರು. ಸಂಸದ ರಮೇಶ ಜಿಗಜಿಣಗಿ ಮಾತನಾಡಿ ಡಬಲ್ ಇಂಜಿನ್ ಸರಕಾರದಿಂದ ರಾಜ್ಯ ನಾಲ್ಕೆದು ವರ್ಷಗಳಲ್ಲಿ ವೇಗವಾಗಿ ಅಭಿವೃದ್ದಿಯಾಗಿದೆ. ಕರ್ನಾಟಕ ದೇಶದ ನಂ 1 ರಾಜ್ಯವಾಗಲು ಮತದಾರರು ಮತ್ತೊಮ್ಮೆ ಬಿಜೆಪಿಗೆ ಬೆಂಬಲ ನೀಡಬೇಕು ಎಂದರು. ಇದೇ ವೇಳೆ ಸಾಲೋಟಗಿ ಗ್ರಾಮದ ಪ್ರಮುಖರು 150 ಕ್ಕೂ ಹೆಚ್ಚು ಹಿರಿಯರು ಸ್ವ ಇಚ್ಛೆಯಿಂದ ಬಿಜೆಪಿ ಸೇರಿ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಇವರಿಗೆ ಬೆಂಬಲ ವ್ಯಕ್ತ ಪಡಿಸಿದರು. ಇಂಡಿ ಮಂಡಲ ಪ್ರಧಾನ ಮಲ್ಲಿಕಾರ್ಜುನ ಕಿವಡೆ,ರಾಜ್ಯ ಪ್ರಮುಖ ವಿವೇಕ ಡಬ್ಬಿ,ವಿ.ಎಚ್. ಬಿರಾದಾರ, ಬಾಳು ಮುಳಜಿ, ರಾಜಶೇಖರ ಯರಗಲ್ಲ ಮಾತನಾಡಿದರು. ಸೊಸೈಟಿ ಅಧ್ಯಕ್ಷ ಅಪ್ಪಾಸಾಬ ಕೊರಳ್ಳಿ, ಗ್ರಾ.ಪಂ ಉಪಾದ್ಯಕ್ಷ ಶಿವಾನಂದ ನಂದಾಗೋಳ, ಮಹೇಶ ಹಸನಾಪುರ, ಪುಂಡಲೀಕ ಕೆರೂರ,ಶಿವು ಸಾತಲಗಾಂವ,ಬಂದು ಬೊರಟಗಿ ಮತ್ತಿತರು ಬಿಜೆಪಿ ಸೇರ್ಪಡೆಯಾದರು.
ಜಿಲ್ಲಾ ವರದಿಗಾರರು: ಬೀ.ಎಸ್.ಹೊಸೂರ್.ವಿಜಯಪುರ …