ಸರ್ವಜ್ಞನ ವಚನಗಳು ಜೀವನದ ದಾರಿ ದೀಪವಾಗಿವೆ – ಮಹೇಶ ಸಂದಿಗವಾಡ.

ಹುನಗುಂದ ಫೆಬ್ರುವರಿ.20 :

ಸರ್ವಜ್ಞರ ವಚನಗಳು ಪ್ರತಿಯೊಬ್ಬರ ಜೀವನಕ್ಕೆ ದಾರಿ ದೀಪವಾಗಿವೆ.ಅವರ ಆದರ್ಶಮಯ ಜೀವನ ಮತ್ತು ಅವರ ವಚನಗಳನ್ನು ನಾವೆಲ್ಲರು ಅಳವಡಿಸಿ ಕೊಳಬೇಕು ಎಂದು ಗ್ರೇಡ್೨ ತಹಶೀಲ್ದಾರ್ ಮಹೇಶ ಸಂದಿಗವಾಡ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಮಂಗಳವಾರ ನಡೆದ ಸಂತ ಸರ್ವಜ್ಞ ಜಯಂತಿ ಕಾರ್ಯಾಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ವಜ್ಞ ರಚಿಸಿದ ತ್ರಿಪದಿಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯಾಗಿವೆ.ಜನ ಸಾಮನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸರಳ ಭಾಷೆಯಲ್ಲಿ ವಚನಗಳನ್ನು ರಚಿಸಿದ್ದಾರೆ ಎಂದರು.ಶಿಕ್ಷಕ ಮುತ್ತಣ್ಣ ಕುಂಬಾರ ಮಾತನಾಡಿ,ಬಸವಣ್ಣ ಮತ್ತು ಸರ್ವಜ್ಞರ ರಚಿಸಿದ ವಚನಗಳು ಶ್ರೇಷ್ಠ ಗ್ರಂಥಗಳಾಗಿವೆ.ವಚನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿ ಕೊಳ್ಳವುದರ ಜೊತಗೆ ಮಕ್ಕಳಿಗೆ ನಿತ್ಯ ಅವುಗಳ ಪಠಣ ಮಾಡಿಸುವುದು ಅಷ್ಟೇ ಅವಶ್ಯವಾಗಿದೆ. ಶರಣರ, ಸಂತರ ಜಯಂತಿಗಳನ್ನು ಕೇವಲ ಭಾವಚಿತ್ರದ ಪೂಜೆಗೆ ಸೀಮಿತ ಗೊಳಿಸಿದೆ ಅವರ ವಿಚಾರಗಳನ್ನು ತಿಳಿಸುವ ಕಾರ್ಯಾ ಆಗಬೇಕು ಎಂದರು.

DOWNLOAD OUR APP

ಭೂ ನ್ಯಾಯ ಮಂಡಳಿ ಸದಸ್ಯ ಅಮರೇಶ ನಾಗೂರು ಮಾತನಾಡಿದರು.ಶಿರಸ್ತೇದಾರರಾದ ಎಸ್.ಎ. ಮುಂಡೇವಾಡಿ,ಎಚ್.ಎಂ. ಶಿವಣಗಿ.ನಾಗರಾಜ ಹೊಸೂರ,ಮುಖಂಡರಾದ ಸಂಗಣ್ಣ ಕುಂಬಾರ ಶಿವಪುತ್ರಪ್ಪ ಕುಂಬಾರ, ಮಲ್ಲಪ್ಪ ಕುಂಬಾರ,ವಿನೋಧ ಕುಂಬಾರ ಇತರರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button