ಅಂಜುಟಗಿ ನೂತನ ಗ್ರಾಮ ಪಂಚಾಯತ ಮತ್ತು ಗ್ರಾಮೀಣ ಸಂತೆ ಕಟ್ಟೆ ಉದ್ಘಾಟನೆ.

ಅಂಜುಟಗಿ ಫೆಬ್ರುವರಿ.25

ಇಂಡಿ ತಾಲೂಕಿನ ಸಮೀಪದ ಅಂಜುಟಗಿಗ್ರಾಮದ ನೂತನ ಹೈಟೆಕ್ ಗ್ರಾಮ ಪಂಚಾಯತ ಕಟ್ಟಡ ಮತ್ತು ಗ್ರಾಮಿಣ ಸಂತೆ ಕಟ್ಟೆ ಉದ್ಘಾಟನಾ ಸಮಾರಂಭ ಹ್ಯಾಟ್ರೀಕ್ ಗೆಲುವು ಸಾಧಿಸಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ನೇತ್ರತ್ವದಲ್ಲಿ ಉದ್ಘಾಟಿನೆ ಕಾರ್ಯಕ್ರಮ ನೇವೆರಿಸಲಾಯಿತು.ಜಿಲ್ಲೆಗಳಲ್ಲಿ ಸಿಗುವಂತಹ ಸೌಲಭ್ಯ, ಜಿಲ್ಲೆಗಳಲ್ಲಿ ಇರುವಂತಹ ಕಟ್ಟಡಗಳು, ಶಿಕ್ಷಣ ನಮ್ಮ ಗ್ರಾಮಗಳಲ್ಲಿ ಸಿಗುವಂತೆ ಮಾಡ ಬೇಕೆಂದು ನನ್ನ ಆಸೆ, ಆದ್ದರಿಂದ ನಮ್ಮ ತಾಲೂಕಿನ ಪ್ರತಿ ಗ್ರಾಮ ಪಂಚಾಯತಗಳು ಗ್ರಾಮ ಸೌಧ ಮಡೆ-ಮಾಡುತ್ತೇನೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.ಜಿಲ್ಲೆಯಲ್ಲಿ ಇಲ್ಲದಂತಹ ಮಿನಿ ವಿಧಾನ ಸೌಧ, ತಾಲೂಕುಗಳಲ್ಲಿ ಇಲ್ಲದಂತಹ ಗ್ರಾಮ ಸೌಧಗಳು ನಮ್ಮ ಇಂಡಿ ತಾಲೂಕಿನಲ್ಲಿವೆ, ತಾಲೂಕಿನ 38 ಗ್ರಾಮ ಪಂಚಾಯತಗಳಲ್ಲಿ 15 ಗ್ರಾ-ಪಂಗಳು ಇವತ್ತು ಗ್ರಾಮ ಸೌಧವಾಗಿ ಲೊಕಾರ್ಪಣೆ ಗೊಂಡಿವೆ, ಜಿಲ್ಲೆಗಳಲ್ಲಿ ಇರುವಂತಹ ಶಾಲಾ ಕಾಲೇಜುಗಳು ಇವತ್ತು ಅಂಜುಟಗಿ, ಝಳಕಿ, ಹೋರ್ತಿ ಗ್ರಾಮಗಳಲ್ಲಿ ತಲೆ ಎತ್ತಿ ನಿಂತಿವೆ, ನೆನೆಗುದಿಗೆ ಬಿದ್ದಂತಹ ಸಕ್ಕೆರೆ ಕಾರ್ಖಾನೆ ಇವತ್ತು ಇಂಡಿ, ಸಿಂದಗಿ ತಾಲೂಕಿನ ರೈತರ ಕಣ್ಮಣಿಯಾಗಿ ಹೊರ ಹೊಮ್ಮಿದೆ ಇಂತಹ ಜಿಲ್ಲೆಯಲ್ಲಿರುವಂತಹ ಸೌಲಬ್ಯಗಳು ನಮ್ಮ ತಾಲೂಕಿನಲ್ಲಿವೆ ಆದ್ದರಿಂದ ಮುಂದಿನ ದಿನಗಳಲ್ಲಿ ಇಂಡಿ ತಾಲೂಕನ್ನು ಜಿಲ್ಲೆಯಾಗಿ ಪರಿವರ್ತಿಸದೆ ಹೋದಲ್ಲಿ ನಾನು ರಾಜಕಿಯ ನಿವೃತ್ತಿ ಹೊಂದುತೇನೆಂದು ಶಪಥ ಮಾಡಿದರು.ಹಿಂದಿನ ಸರ್ಕಾರದಲ್ಲಿ ಅನುದಾನದ ಕೊರತೆ ಇರೊದರಿಂದ ಅಭವೃದ್ದಿ ಕಾರ್ಯಗಳು ಸ್ವಲ್ಪ ಹಿನ್ನಡೆ ಸಾಧಿಸಿದ್ದೆನೆ, ಮುಂದಿನ ದಿನಗಳಲ್ಲಿ ತಾಲೂಕಿನ ರಸ್ತೆಗಳು, ಗ್ರಾಮೀಣ ಅಭಿವೃದ್ಧಿ ಕಾರ್ಯಗಳು ಮಾಡುತ್ತೆನೆ, ಮತ್ತು ನಮ್ಮ ತಾಲೂಕು ನೀರಾವರಿ ಯೋಜನೆಯ ಕೊನೆಯ ಹಂತದಲ್ಲಿರುವದರಿಂದ ನಮ್ಮ ರೈತರು ಸುಧಾರಿಸಲು ತೊಂದರೆಯಾಗಿದೆ, ಕೆನಾಲ್ ತರುವದು ನನ್ನ ಜವಾಬ್ದಾರಿ ನೇವೆರಿಸಿದ್ದೆನೆ, ಆದರೆ ನೀರು ಹರಿಸೋದರಲ್ಲಿ ನಮಗೆ ಮಲತಾಯಿ ಧೋರಣೆಯಾಗಿದೆ, ಇದನ್ನು ಮುಂದಿನ ದಿನಗಳಲ್ಲಿ ಖಂಡಿತವಾಗಲು ಸಂಪೂರ್ಣವಾಗಿ ನೀರಾವರಿ ಯೋಜನೆ ನಮ್ಮ ತಾಲೂಕಿಗೆ ತಲುಪುವಂತೆ ಮಾಡುತ್ತೆನೆ, ಸರ್ಕಾರ ಗ್ಯಾರಂಟಿಗಳಲ್ಲಿ ಹಣ ತೊಡಗಿದ್ದರೂ ನಮ್ಮ ಮುಖ್ಯಮಂತ್ರಿಗಳು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ, ಇಂತಹ ಕಷ್ಟದಲ್ಲಿ ಹೈಟೆಕ್ ಕಾರ್ಯಗಳು ನಿರ್ವಹಿಸಲು ಸಾಧ್ಯವಾದದ್ದು ನಿಮ್ಮೆಲ್ಲರ ಆಶೀರ್ವಾದವೇ ಕಾರಣ, ನೀವುಗಳು ನೀಡಿರುವಂತಹ ಆಶೀರ್ವಾದ ದೇವರ ಆಶೀರ್ವಾದ ಎಂದರು. ನಮ್ಮ ಜಿಲ್ಲಾ ಪಂಚಾಯತ ಅಡಿಯಲ್ಲಿ436 ಗ್ರಾಮ ಪಂಚಾಯತಗಳು ಇದ್ದು ಇವುಗಳಿಗೆ ಇಗಾಗಲೆ ಬಡವರ ಪಾಲಿನ ಸರ್ಕಾರಿ ಅನುದಾನದ ಮನೆಗಳು ಕಡಿಮೆ ಪ್ರಮಾಣದಲ್ಲಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಗ್ರಾ-ಪಂಗೆ 100 ರಂತೆ ಮಂಜೂರು ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆನೆ ಎಂದು ಮಾನ್ಯ ಶಾಸಕ, ವಿಧಾನ ಪರಿಷತ್ ಸುನೀಲಗೌಡ ಪಾಟೀಲ ಮಾತನಾಡಿದರು, ನಮ್ಮ ಜಿಲ್ಲೆಯಲ್ಲಿ ಇಂತಹ ಕಟ್ಟಡಗಳು ಅತಿ ಸುಂದರವಾಗಿ ನಿರ್ಮಾಣ ಮಾಡಿರುವದರಿಂದ ನಮ್ಮ ಜಿಲ್ಲೆಯು ಬೇರೆ ಬೇರೆ ಜಿಲ್ಲೆಗಳಿಗೆ ಮಾದರಿಯಾಗಿದೆ, ಬೇರೆ ಜಿಲ್ಲೆಯ ಜನರು ನಮ್ಮ ಗ್ರಾಮಗಳಿಗೆ ಭೇಟಿ ನೀಡುವಂತಾಗಿದೆ ಇದು ನಮ್ಮ ಹೆಮ್ಮೆಯ ವಿಷಯ ಇದಕ್ಕೆಲ್ಲ ಇಲ್ಲಿನ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಮತ್ತು ಮುಖ್ಯವಾಗಿ ಗ್ರಾಮಸ್ಥರ ಸಹಕಾರ ಎಂದರು.ಈ ಸಂದರ್ಬದಲ್ಲಿ ದಿವ್ಯ ಸಾನಿಧ್ಯ ಸಂಸ್ಥಾನ ಹಿರೇಮಠ ತಡವಲಗಾ ಷ.ಬ್ರ.ಶ್ರೀ ಅಭಿನವ ರಾಜೋಟೇಶ್ವರ ಶಿವಾಚಾರ್ಯರು, ಸಂಜಯ ಖಡಗೆಕರ, ಗ್ರಾ-ಪಂ ಅಧ್ಯಕ್ಷ ಸುವರ್ಣ ಬಸವರಾಜ ಕವಡಿ, ಉಪಾಧ್ಯಕ್ಷ ಶಂಕರ ದೊಡ್ಡೆಣ್ಣವರ, ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಶಿವಣಗಿ, ಎಸ್.ಆರ್.ರುದ್ರವಾಡಿ, ಸುಭಾಸ ಅಚ್ಚಿಗರ, ಸಣ್ಣಪ್ಪ ತಳವಾರ, ಅಣ್ಣಪ್ಪ ತಳವಾರ, ನಿಲಕಂಠ ರೂಗಿ, ಜೆಟ್ಟೆಪ್ಪ ರವಳಿ, ಅಣ್ಣಾರಾಯ ಬಬಲಾದ, ಶೇಖರ ನಾಯಕ, ಭೀಮಣ್ಣ ಕವಲಗಿ,, ಸತೀಶ ಹತ್ತಿ, ರುಕ್ಮುದ್ದಿನ ತದ್ದೆವಾಡಿ,ಇತರರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button