ನಧಾಫ್ ಮತ್ತು ಪಿಂಜಾರ ಸಮಾಜಕ್ಕೆ ಐದು ನೂರು ವರ್ಷಗಳ ಇತಿಹಾಸವಿದೆ – ಶಾಸಕ ಕಾಶಪ್ಪನವರ.
ಹುನಗುಂದ ಫೆಬ್ರುವರಿ.26

ಮೊಘಲರ ಕಾಲದಿಂದಲೂ ಕೂಡಾ ನಧಾಫ್ ಮತ್ತು ಪಿಂಜಾರ ಸಮಾಜದ ಬಗ್ಗೆ ಇತಿಹಾಸದಲ್ಲಿ ಪುರಾವೆಗಳಿದ್ದು. ಈ ಸಮಾಜಗಳಿಗೆ ೫೦೦ ವರ್ಷಗಳಷ್ಟು ಇತಿಹಾಸವನ್ನು ಹೊಂದಿದೆ.ಇಸ್ಲಾಂ ಧರ್ಮದಲ್ಲಿಯೇ ಅತ್ಯಂತ ಚಿಕ್ಕ ಮತ್ತು ಶ್ರೇಷ್ಠ ಸಮುದಾಯವಾಗಿದೆ.ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ರವಿವಾರ ಪಟ್ಟಣದ ಅಮರಾವತಿ ರಸ್ತೆಯ ಗುರು ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ನಧಾಫ್ ಮತ್ತು ಪಿಂಜಾರ್ ಸಂಘ ಹುನಗುಂದ ತಾಲೂಕಾ ಘಟಕ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವ ಮತ್ತ ನಂತರದಲ್ಲಿ ಈ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ ಸಮಾಜವಾಗಿದೆ.ಸಮಾಜದ ಪ್ರತಿಯೊಂದು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವ ಕಾರ್ಯವನ್ನು ಮಾಡಬೇಕು.ಅದರ ಜೊತೆಗೆ ಧಾರ್ಮಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸ್ಥಾನಮಾನವನ್ನು ಗಳಿಸುಕೊಳ್ಳು ವಂತಾಗಬೇಕು.ಇಂದಿನ ದಿನಗಳಲ್ಲಿ ರಾಜಕೀಯವಾಗಿ ಹೆಚ್ಚು ಗುರುತಿಸಿ ಕೊಂಡಾಗ ಮಾತ್ರ ಸಮಾಜದ ಅಭಿವೃದ್ದಿ ಹೊಂದಲು ಸಾಧ್ಯ.ನಧಾಫ್ ಮತ್ತು ಪಿಂಜಾರ್ ಸಮಾಜಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ಜಾಗವನ್ನು ಗುರುತಿಸಿ ಶಾಸಕರ ಪ್ರದೇಶ ಅಭಿವೃದ್ದಿ ಹಣದಲ್ಲಿ ೧೦ ಲಕ್ಷ ಅನುದಾನವನ್ನು ನೀಡುತ್ತೇನೆ.ಅಲ್ಪಸಂಖ್ಯಾತ ನಿಗಮದ ಸಚಿವರಿಂದ ಹೆಚ್ಚಿನ ಅನುದಾನವನ್ನು ತರುತ್ತೇನೆ.ಸಮಾಜದ ಅಭಿವೃದ್ದಿ ನಿಗಮಕ್ಕೆ ಹೆಚ್ಚಿನ ಹಣವನ್ನು ಸರ್ಕಾರ ದಿಂದ ಕೊಡಿಸುವ ಭರವಸೆಯನ್ನು ನೀಡಿದರು.ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಿಯಾನುಬಾನು ನಧಾಫ್ ಮಾತನಾಡಿ ರಾಜ್ಯದಲ್ಲಿ ನಧಾಪ್ ಮತ್ತು ಪಿಂಜಾರ ಸಮಾಜವು ೩೩ ಲಕ್ಷ ಜನಸಂಖ್ಯೆ ಹೊಂದಿದ್ದು. ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತವಾಗಿದ್ದು.ಕಳೆದ ಬಿಜೆಪಿ ಸರ್ಕಾರದಲ್ಲಿ ಜಾರಿಯಾದ ಪಿಂಜಾರ ಅಭಿವೃದ್ದಿ ಸ್ಥಾಪಿಸಿದ್ದು.ಆ ನಿಗಮಕ್ಕೆ ಕೂಡಲೇ ಅನುದಾನವನ್ನು ನೀಡುವಂತೆ ಶಾಸಕರಿಗೆ ಒತ್ತಾಯಿಸಿದರು.ನಧಾಫ್ ಮತ್ತು ಪಿಂಜಾರ್ ಸಂಘದ ತಾಲೂಕು ಘಟಕದ ಅಧ್ಯಕ್ಷ ದಾವಲಸಾಬ ಎಮ್. ನಾಧಾಫ್,ಎಲ್.ಎನ್.ನದಾಫ್,ದಾವಲಸಾಬ ನಧಾಫ್,ಮೆಹಬೂಬ ಪಿಂಜಾರ,ಸೈಯದ್ ಸದಾಫ್,ಅಲ್ಲಿಸಾಬ ನದಾಫ್,ಖಾಜಾಬಿ ನಧಾಫ್,ಮಹಮ್ಮದ ಫಾರೂಕ ಯತ್ನಟ್ಟಿ,ಫಕೀರಸಾಬ್ ಪಿಂಜಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ