ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ – ನಟಿ ಭಾವನಾ ರಾಮಣ್ಣ.
ಬೆಂಗಳೂರು ಫೆಬ್ರುವರಿ.26

ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಶಂಕರಮಠ ವಾರ್ಡ್ ನಲ್ಲಿ ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ “ಸ್ಪಂದನ ಕಪ್-2024” ಆಯೋಜನೆ.ಖ್ಯಾತ ಚಲನಚಿತ್ರ ನಟಿ “ಭಾವನ”ರವರು, ಸ್ಪಂದನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮೋಹನ್ ಕುಮಾರ್, ಅಂತರಾಷ್ಟ್ರೀಯ ಯೋಗಪಟು “ಕಮಲಕಣ್ಣನ್” ಅಧ್ಯಕ್ಷರಾದ ಸುದೀಂದ್ರಚಾರ್, ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಿಶಾಲಾಕ್ಷ್ಮಿ ಶಿವರಾಜುರವರು, ಕೆಂಪೇಗೌಡ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ರವಿಕಾಂತ್ ರವರು ದೀಪ ಬೆಳಗಿಸಿ, ಬ್ಯಾಡ್ಮಿಂಟನ್ ಆಡುವ ಮೂಲಕ ಪಂದ್ಯಾವಳಿ ಉದ್ಘಾಟನೆ ಮಾಡಿದರು.

ನಟಿ ಭಾವನಾ ರಾಮಣ್ಣರವರು ಮಾತನಾಡಿ ಮಹಿಳೆಯರು ಇಂದು ಚಲನಚಿತ್ರ, ವಿಜ್ಞಾನ ತಂತ್ರಜ್ಞಾನ, ಚಲನಚಿತ್ರ, ಕ್ರೀಡಾರಂಗ ರಾಜಕೀಯ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ.ಸೈನಾ ನೇಹವಾಲ್, ಪಿ.ವಿ.ಸಿಂದು, ಜ್ವಾಲಗುಟ್ಟಾ, ಆನೇಕ ಮಹಿಳೆಯರು ದೇಶಕ್ಕಾಗಿ ಆಡಿದ್ದಾರೆ.ಕ್ರೀಡೆಯಲ್ಲಿ ಮಹಿಳೆಯರ ಪಾತ್ರ ದೊಡ್ಡದು, ಒಲಂಪಿಕ್, ಏಷಿಯನ್ ಗೇಮ್ಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಮಹಿಳೆಯರು ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.

“ಎಮ್.ಶಿವರಾಜುರವರು” ಮಾತನಾಡಿ ಮನುಷ್ಯ ಆರೋಗ್ಯವಂತರಾಗಿ ಬದುಕು ಸಾಗಿಸಲು, ರೋಗ ಮುಕ್ತ ಸಮಾಜ ನಿರ್ಮಾಣ ಮಕ್ಕಳಿಂದ ಹಿರಿಯರಿಗೂ ಕ್ರೀಡಾ ಚಟುವಟಿಕೆ ಮುಖ್ಯ.ನಮ್ಮ ಕ್ಷೇತ್ರದಲ್ಲಿ ಉತ್ತಮ ಕ್ರೀಡಾಪಟುಗಳು ಇದ್ದಾರೆ, ಅವರಿಗೆ ಸಹಕಾರ, ಪ್ರೋತ್ಸಹ ನೀಡಲು ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದರು.ಬಾಲಕ ವಿಭಾಗ ಬಾಲಕಿಯರು ಮತ್ತು ಪುರುಷರ, ಮಹಿಳೆ ಬ್ಯಾಡ್ಮಿಂಟನ್ ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.