ಸಂತೋಷ ಲಾಡ್ ಅವರ 49 ನೇ. ಹುಟ್ಟು ಹಬ್ಬದ ನಿಮಿತ್ತ ಖ್ಯಾತ ಚಲನಚಿತ್ರ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರಿಂದ ಬರೆಸಿರುವ ಕಾಯಕಯೋಗಿ ಬಸವಣ್ಣ ಸಂವಿಧಾನ ಶಿಲ್ಪಿ.
ಹೊಸಪೇಟೆ ಫೆಬ್ರುವರಿ.28

ಇಲ್ಲಿನ ಡಾ. ಪುನೀತ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ 49 ನೇ ಹುಟ್ಟು ಹಬ್ಬದ ನಿಮಿತ್ತ ಖ್ಯಾತ ಚಲನಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಅವರಿಂದ ಬರೆಸಿರುವ ಕಾಯಕಯೋಗಿ ಬಸವಣ್ಣ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು.ಮುಖ್ಯ ಅತಿಥಿಯಾಗಿ ಎಐಸಿಸಿ ಸದಸ್ಯ ಕೆ.ರಾಜು ಪ್ರಾಸ್ತಾವಿಕ ಮಾತನಾಡಿದರು.ಜೆ.ಎನ್.ಯು. ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಚಿಂತಕ ಕನ್ಹಯ್ಯಕುಮಾರ್ ಮಾತನಾಡಿ,ಭಾರತೀಯ ಸಂಸ್ಕೃತಿ ಭಾಷೆ ನೆಲ ಜಲ ಜನರ ಕಲ್ಯಾಣ ಜನ ಸಾಮಾನ್ಯರ ಅಭಿವೃದ್ಧಿಗಾಗಿ ಮಹಾತ್ಮಾ ಗಾಂಧಿ ಬಸವಣ್ಣ ಅಂಬೇಡ್ಕರ್ ಪಟೇಲ್ ನೆಹರು ಹೋರಾಡಿದರು ಆದರೆ ಮನುವಾದಿಗಳು ಇವರನ್ನ ನಂಬಲ್ಲಾ. ಆದರೆ ಇವರ ವಿಚಾರಗಳು ಮುಂದೆ ಬಂದಾಗ ಜನರ ಮದ್ಯ ಬಿರುಕು ಮೂಡಿಸುವ ಕೆಲಸ ಮಾಡಿಸುತ್ತಾರೆಧರ್ಮದ ಬಣ್ಣ ಹಚ್ಚಿ ಹಿಂದೂ ಮುಸ್ಲಿಂ ಅಂತಾ ಪುಂಗುತ್ತಾರೆ. ನಾವು ದೇಶದಲ್ಲಿ ಸಮಾನತೆಯ ಪ್ರೀತಿಯ ಮಾತನಾಡಿದರೆ ಅವರು ದೇಶದ ಸಂವಿಧಾನ ಬದಲಾಯಿಸುವ ಮಾತನಾಡುತ್ತಾರೆ ನಾವು ಭಾರತೀಯರು ಆದರೇ ಜಾತಿ ಆಧಾರದಲ್ಲಿ ಒಡೆಯಲು ಪ್ರಯತ್ನಿಸುತ್ತಾರೆ. ನಾವು ಸಂವಿಧಾನವು ನಮಗೆ ಮತದಾನದ ಅಧಿಕಾರ ನೀಡಿದೆ. ಆದರೆ ನಮಗೆ ಮತದಾನದ ಅಧಿಕಾರ ಇಲ್ಲದೇ ಇದ್ದಿದ್ದರೇ ಮನುವಾದಿ ನಾಯಕರುಗಳು ನಿಮ್ಮ ಮುಂದೆ ಮತಕ್ಕಾಗಿ ಕೈ ಜೋಡಿಸಿ ನಿಲ್ಲುತ್ತಿರಲಿಲ್ಲಾ. ನಮಗೆ ಮತದಾನದ ಅಧಿಕಾರ ಕೊಟ್ಟಿದ್ದು ಬಾಬಾಸಾಹೇಬ್ ಅಂಬೇಡ್ಕರ್. ಇಪ್ಪತೈದು ಕೋಟಿ ಭಾರತೀಯರನ್ನ ಎರಡೂವರೆ ಸಾವಿರ ಸಂಖ್ಯೆ ಆಂಗ್ಲರು ನಮ್ಮನ್ನ ಒಡೆದು ಆಗ ಅಳುತಿದ್ದರು. ಆದರೆ ನಮಗೆ ಸ್ವಾತಂತ್ರ ಬಂದಾಗ ಅಂಬೇಡ್ಕರ್ ಹಿಂದುಳಿದ ದಲಿತ ಬಡವ ಮಾತನಾಡುವ ಹಕ್ಕು ಕೊಟ್ಟಿದ್ದಾರೆ ಈಗಲೂ ನಮ್ಮ ಹೋರಾಟ ನಮ್ಮ ಸಂವಿಧಾನ ರಕ್ಷಣೆ ಮಾಡುವ ಹೊಣೆ ನಮ್ಮ ಮೇಲಿದೆ. ಎಂದು ಹೇಳಿದರು.ರಾಷ್ಟ್ರೀಯ ದಲಿತ ಮೋರ್ಚಾದ ಸಂಚಾಲಕ ಜಿಗ್ನೇಶ್ ಮೇವಾನಿ ಮಾತನಾಡಿ,ಸಂತೋಷ್ ಲಾಡ್ ರವರು ನನ್ನನ್ನ ಅವರ ಜನುಮದಿನಕ್ಕೆ ಅಹ್ವಾನಿಸಿದ್ದಾರೆ. ನಾನು ಇಲ್ಲಿ ರಾಜಕೀಯ ಮಾತನಾಡಲು ಬಂದಿಲ್ಲ. ನಮ್ಮ ದೇಶ ಮೂರುಸಾವಿರ ವರ್ಷದ ಗುಲಾಮಗಿರಿ ನೋಡಿದೆ. ಶೂದ್ರರಿಗೆ ಓದುವ ಬರೆಯುವ ಅಸ್ತಿ ಹೊಂದುವ ಅಧಿಕಾರ ಇರಲಿಲ್ಲ.ಶೂದ್ರರು ಸರಿ ಸಮಾನವಾಗಿ ಮಾತನಾಡಿದರೆ ಅವನನ್ನ ಜೀವಿಸಲೂ ಬಿಡಬೇಡಿ ಬದುಕಲು ಬಿಡಬೇಡಿ ಅಂತ ಇದು ಮನುಸ್ಮೃತಿಯಲ್ಲಿ ಬರೆದಿದೆ ಎಂದು ಹೇಳಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಸವಣ್ಣನವರ ಅಸೆ ಶೂದ್ರ ದಲಿತ ಅದಿವಾಸಿ ಬಡವ ಬಲ್ಲಿದ ಹಿಂದುಳಿದವರ ಏಳಿಗೆಗಾಗಿ ದುಡಿದವರು. ಎದೆಯುಬ್ಬಿಸಿ ತಲೆ ತಗ್ಗಿಸದೆ ಸರಿ ಸಮಾನಾಗಿ ಮಾತನಾಡುವ ಹಕ್ಕಿಗಾಗಿ ಹೋರಾಡಿದ್ದಾರೆ ಎಂದು ಹೇಳಿದರು.ಖ್ಯಾತ ಚಲನಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಅವರು ರಚಿಸಿರುವ ಗೀತೆಗಳನ್ನು ಬಿಡುಗಡೆ ಗೊಳಿಸಲಾಯಿತು.ಈ ವೇಳೆ ಸಚಿವ ಸಂತೋಷ ಲಾಡ್ ಅವರ ಕುರಿತ ಸಾಕ್ಷ್ಯಚಿತ್ರ ಅನಾವರಣ ಗೊಳಿಸಲಾಯಿತು. ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಸಾಮಾಜಿಕ ಕಾರ್ಯಗಳ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ, ಸಾಮೂಹಿಕ ವಿವಾಹ, ರೈತರಿಗೆ ಜೆಸಿಬಿ, ಬೋರ್ ವೆಲ್ ನೆರವು, ನಿರುದ್ಯೋಗಿಗಳಿಗೆ ಕೌಶಲ್ಯಭಿವೃದ್ದಿ ತರಬೇತಿ ನೀಡಿ ಉದ್ಯೋಗ, ಉತ್ತರಖಂಡ್ ನಲ್ಲಿ ನಡೆದ ಪ್ರವಾಹದಲ್ಲಿ ಕನ್ನಡಿಗರ ರಕ್ಷಣೆ, ಹಸಿದವರಿಗೆ ಅನ್ನ ಸಂತರ್ಪಣೆ, ಮೆಡಿಕಲ್ ಕಿಟ್, ಕಣ್ಣಿನ ಶಸ್ತ್ರಚಿಕಿತ್ಸೆ, ತಪಾಸಣೆ, ಆರೋಗ್ಯ ಶಿಬಿರಗಳು,ಮಹಿಳೆಯರಿಗೆ ಟೈಲರಿಂಗ್, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸಹಾಯಹಸ್ತ, ವಿದ್ಯಾರ್ಥಿಗಳಿಗೆ ಕ್ರೀಡಾಕೂಟ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಉದ್ಯೋಗ ಮೇಳ, 14 ವರ್ಷಗಳಲ್ಲಿ ಫೌಂಡೇಶನ್ ಮಾಡಿದ ಹಲವಾರು ಜನೋಪಯೋಗಿ ಕಾರ್ಯಗಳ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಡಾ.ವಿ.ನಾಗೇಂದ್ರಪ್ರಸಾದ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. “ನಗುತಾ ನಗುತಾ ಬಾಳಿ ನೀವು ಸಂತೋಷಣ್ಣಾ, ಎಂದು ಹೀಗೆ ಬಾಳಿ ನೀವು ಸಂತೋಷಣ್ಣಾ “ಎಂದು ಗಾಯಕರು ಹಾಡಿದರು.ಬಾಬಾ ವಂದನೆ, ನಿನಗೆ ಕೋಟಿ ವಂದನೆ, ಬಾಬಾಸಾಹೇನ ಹಾಡನ್ನು ಹಾಡಿ ಪ್ರೇಕ್ಷರನ್ಬು ರಂಜಿಸಿದರು.ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಶಾಸಕರಾದ ತುಕಾರಾಂ, ಬಿ.ಎಂ.ನಾಗರಾಜ, ಡಾ.ಎನ್.ಟಿ.ಶ್ರೀನಿವಾಸ, ಎಂ.ಪಿ.ಲತಾ ಮಲ್ಲಿಕಾರ್ಜುನ, ಜೆ.ಎನ್.ಗಣೇಶ, ಮಾಜಿ ಶಾಸಕ ಭೀಮಾನಾಯ್ಕ್, ಮಾಜಿ ಪರಿಷತ್ ಸದಸ್ಯ ಕೆ.ಎಸ್.ಎಲ್.ಸ್ವಾಮಿ, ವಿಜಯನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್, ಕುರಿ ಶಿವಮೂರ್ತಿ,ಬಿ.ವಿ.ಶಿವಯೋಗಿ, ಮಹಮ್ಮದ್ ರಫೀಕ್, ನಿಂಬಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಾಲತೇಶ್.ಶೆಟ್ಟರ್.ಹೊಸಪೇಟೆ

