ಕಳಪೆ ಕಾಮಗಾರಿಗೆ ಸಾರ್ವಜನಿಕರಿಂದ – ಆಕ್ರೋಶ.
ಕೋಗಳಿ ಮಾರ್ಚ್.8

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಸಮುದಾಯ ಭವನ ಕಳಪೆ ಕಾಮಗಾರಿ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಕನ್ನಡದ ಪ್ರಪ್ರಥಮ ಗದ್ಯ ಕವಿ ಶಿವಕೋಟ್ಯಾಚಾರ್ಯರ ನೆನಪಿಗೋಸ್ಕರ ಸುವರ್ಣ ಗ್ರಾಮದ ಯೋಜನೆಯಲ್ಲಿ ಕೋಟಿ ಕೋಟಿ ಅನುದಾನ ಬಂದಿತ್ತು ಅದರಲ್ಲಿ ಈ ಸಮುದಾಯ ಭವನವನ್ನು ನಿರ್ಮಾಣವಾಗಿತ್ತು ಆದರೆ ಈ ಹತ್ತು ವರ್ಷದಲ್ಲಿ ಈ ಭವನವು ತುಂಬಾ ದುರಸ್ತಿ ಗೊಂಡಿದೆ ಇದಕ್ಕೆ ಯಾವ ಒಂದು ಅಧಿಕಾರಿಯು ತಿರುಗಿ ನೋಡಿದ್ದಿಲ್ಲ ಆದರೆ ಈಗ ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸುವುದರ ಮೂಲಕ ಈಗ ಇದರ ದುರಸ್ಥಿ ಮತ್ತು ಬಣ್ಣ ಹಚ್ಚಲು 1,999,000 ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಆದರೆ ಇಲ್ಲಿ ಕೇವಲ ಬಣ್ಣ ಹಚ್ಚುವ ಕೆಲಸ ಮಾಡುತ್ತಾರೆ ಇಲ್ಲಿನ ಕಿಟಕಿ ಬಾಗಿಲು ಮತ್ತು ಸೀಳು ಬಿಟ್ಟಿರುವ ಗೋಡೆ ಒಡೆದು ಹೋಗಿರುವ ಕಡಪ ಆಗುವ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತವಾಗಿದೆ ಇದ್ಯಾವುದೂ ಮಾಡದೆ ಕೇವಲ ಬಣ್ಣವನ್ನು ಹಚ್ಚಿ ಬಿಲ್ಲು ಪಡೆದು ಹೊಂಟಿದ್ದಾರೆ ಇಲ್ಲಿನ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇದರ ಬಗ್ಗೆ ಗಮನ ಹರಿಸಿ ಸಾರ್ವಜನಿಕರ ಹಣ ದುರುಪಯೋಗ ಆಗದಂತೆ ನೋಡಿ ಕೊಳ್ಳಬೇಕು ಇಲ್ಲಿ ಶಿವಕೋಟ್ಯಾಚಾರ್ಯರ ಸವಿನೆನಪಿಗಾಗಿ ಸಾಮೂಹಿಕ ಮದುವೆ ಇತರೆ ಯಾವುದೇ ಮದುವೆ ಕಾರ್ಯಕ್ರಮ ಆದರೆ ಇಲ್ಲೇ ನಡೆಸುತ್ತೇವೆ.

ಆದ ಕಾರಣ ಶ್ರೀ ಶಿವಕೋಟ್ಯಾಚಾರ್ಯರ ಸಭಾಭವನಕ್ಕೆ ಸುತ್ತ ಮುತ್ತಲು ದನಗಳು ಕಟ್ಟುವುದು ಕಟ್ಟಿಗೆ ಹಾಕುವುದು ಹಾಗೂ ಇಲ್ಲಿನ ನೀರಿನ ತೊಟ್ಟಿ ಇದ್ದು ಅದರ ಮುಚ್ಚಳ ದುರಸ್ಥಿಯಲ್ಲಿದೆ ಇಂತಹ ಸಮಸ್ಯೆಗಳು ತುಂಬಾನೇ ಇವೆ ಆದ ಕಾರಣ ಇಲ್ಲಿನ ಅಧಿಕಾರಿಗಳು ಎಚ್ಚರ ವಹಿಸಿ ಕಾಮಗಾರಿ ಮಾಡಿ ಕೊಳ್ಳಬೇಕೆಂದು ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಮತ್ತು ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಸುದ್ದಿಯೊಂದಿಗೆ ಸಮುದಾಯ ಭವನದ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.15. ನೇ ಹಣಕಾಸಿನಲ್ಲಿ 1,999,000 ವೆಚ್ಚದ ಕಾಮಗಾರಿಯನ್ನು ಕೇವಲ ಕಳಪೆ ಬಣ್ಣ ಹಚ್ಚಿ ಬಿಲ್ಲು ಎತ್ತಲು ಹೊರಟಿದ್ದಾರೆ ಇದರ ಬಗ್ಗೆ ಪಿಡಿಒ ಅಧಿಕಾರಿಗಳನ್ನು ಕೇಳಿದರೆ ಒಂದು ಸಲ ಬಣ್ಣ ಹಚ್ಚಲು ಹೇಳಿದ್ದಾರೆ ಎನ್ನುತ್ತಾರೆ ಮತ್ತೊಂದು ಸಲ ದುರಸ್ತಿ ಮತ್ತು ಬಣ್ಣ ಎರಡು ಮಾಡಬೇಕು ಎಂದು ವಾಟ್ಸಾಪ್ನಲ್ಲಿ ಕಳಿಸಿದ್ದಾರೆ ಎಂದು ಹೇಳುತ್ತಾರೆ ಈ ಕಾಮಗಾರಿ ಬಗ್ಗೆ ಪ್ರಶ್ನೆ ಮಾಡಿದರೆ ಗುತ್ತಿಗೆದಾರರು ಹಾಗೂ ಅವರ ಬೆಂಬಲಿಗರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ ಹಾಗೂ ಇಲ್ಲಿ ತುಂಬಾ ಕಳಪೆ ಕಾಮಗಾರಿಯಾಗಿದೆ ಬಣ್ಣದ ಕ್ವಾಲಿಟಿ ಕಮ್ಮಿ ಇದೆ ಎಂದು ಆರ್ ಟಿ ಐ ಕಾರ್ಯಕರ್ತರಾದ ಬಸವರಾಜ್ ಕೋಗಳಿ ಹೇಳಿದರು.ಈ ಸಂದರ್ಭದಲ್ಲಿ ಎನ್ ವಿಶ್ವನಾಥ್ ಗೌಡ, ಎಂ ಮಹೇಶಪ್ಪ ,ರವಿ ವಿ , ಎಮ್ ಚನ್ನಬಸಪ್ಪ , ಜಿ ಸಂಗನಗೌಡ ,ಪಂಪಣ್ಣ, ಮರಳು ಸಿದ್ದಯ್ಯ, ಅಶೋಕಯ್ಯ ಮತ್ತಿತರರು ಊರಿನ ಮುಖಂಡರು ಸಾರ್ವಜನಿಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು