ಶಿವಯೋಗ ದಿನದಂದು ಬುತ್ತಿಯಲ್ಲಿ ತಯಾರಿಸಿದ – ಶಿವನ ಮೂರ್ತಿ.
ಹುನಗುಂದ ಮಾರ್ಚ್. 9

ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿರುವ ಲಿಂಗಕ್ಕೆ ೯.ಕೆಜಿ ಅಕ್ಕಿ, ೬ ಲೀಟರ್ ಹಾಲು, ೪ ಲೀಟರ್ ಮೊಸರು, ೨೫೦ ಗ್ರಾಂ ಏಲಕ್ಕಿ ಹಾಗೂ ವಿವಿಧ ಬಣ್ಣಗಳನ್ನು ಹಾಗೂ ವಿವಿಧ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಬುತ್ತಿಯಲ್ಲಿ . ಜಮಖಂಡಿಯ ಶ್ರೀಶೈಲ ಪೂಜಾರಿ ಎಂಬುವರು ತಯಾರಿಸಿರುವ ಶಿವನ ಮೂರ್ತಿ ಭಕ್ತರನ್ನು ಆಕರ್ಷಿಸುತ್ತಿತ್ತು.ಶಿವಯೋಗದ ನಿಮಿತ್ಯ ಪಟ್ಟಣದ ವಿವಿಧ ನಗರ ಭಕ್ತರು ಬೆಳಗ್ಗಿನಿಂದಲೇ ಶ್ರದ್ದೆ ಭಕ್ತಿಯಿಂದ ಕುಟುಂಬ ಸಮೇತರಾಗಿ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಪೂಜೆ ಪುನಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಸಮರ್ಪಿಸಿ ಬುತ್ತಿಯಲ್ಲಿ ಮೂಡಿದ ಶಿವನ ಮೂರ್ತಿಯನ್ನು ನೋಡಿ ಪುಣಿತರಾದರು.ಶಿವರಾತ್ರಿ ಅಮವಾಸ್ಯೆ ಭಾರತೀಯ ಪರಂಪರೆಯಲ್ಲಿ ಎಲ್ಲ ಹಬ್ಬಗಳಿಗಿಂತಲೂ ಸರ್ವ ಶ್ರೇಷ್ಠವಾದ ಹಬ್ಬವಾಗಿದೆ.ಶಿವರಾತ್ರಿ ಅಮವಾಸ್ಯೆ ಹಿಂದಿನ ದಿನ ಶಿವಯೋಗ ಆಚರಣೆ ಮಾಡಲಾಗುತ್ತೆ ಆ ದಿನ ಬೆಳಗೀನಿಂದ ಉಪವಾಸ ವ್ರತವನ್ನು ಕೈಕೊಂಡು ಸಾಯಂಕಾಲ ಮನೆಯಲ್ಲಿ ಶಿವನ ಪೂಜೆಯನ್ನು ಮಾಡಿದ ಬಳಿಕ ಹಣ್ಣು ಹಂಪಲವನ್ನು ಸ್ವೀಕರಿಸುವ ಮೂಲಕ ಉಪವಾಸವನ್ನು ಬಿಡುವ ವಾಡಿಕೆ ಇದೆ. ನಂತರ ರಾತ್ರಿ ಪೂರ್ತಿ ಶಿವ ನಾಮಸ್ಮರಣೆ,ಭಜನೆ,ಪಾರ್ಥನೆಗಳು ಜರುಗುತ್ತವೆ. ಸಾಯಂಕಾಲ ಪಟ್ಟಣದ ವಿವಿಧ ಕಡೆಗಳಲ್ಲಿ ಉಪವಾಸ ವೃತ ಆಚರಿಸಿದ ಭಕ್ತರಿಗೆ ಹಣ್ಣು ಹಂಪಲ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ