ಕಾರ್ಮಿಕ ಸಚಿವರಾದ ಸಂತೋಷ್.ಎಸ್.ಲಾಡ್ ಅವರಿಗೆ – ದ್ವಿಚಕ್ರ ವಾಹನ ಕಾರ್ಮಿಕ ರಿಂದ ಮನವಿ ಪತ್ರ ಸಲ್ಲಿಕೆ.
ಹೊಸಪೇಟೆ ಫೆಬ್ರುವರಿ.25

ದಿನಾಂಕ:25/2/24 ರಂದು ವಿಜಯನಗರ ಜಿಲ್ಲೆಗೆ ಆಗಮಿಸಿದ ಸಂತೋಷ್ ಲಾಡ್ ಅವರಿಗೆ ದ್ವಿಚಕ್ರ ವಾಹನ ಮುಖಂಡರಾದ ಅಕ್ಬರ್ ಬೇಗ್ ಅವರು ಮನವಿ ಪತ್ರವನ್ನು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ನೀಡಿದರು.ದ್ವಿಚಕ್ರ ವಾಹನಗಳ ಕಾರ್ಮಿಕರಾದ ನಮಗೆ ಸರ್ಕಾರದಿಂದ ಸಿಗುವಂತಹ ಯಾವುದೇ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ ನಮ್ಮ ಸಮಸ್ಯೆಗಳಾದ ಲೇಬರ್ ಕಾರ್ಡ್ ಆಗಲಿ ಕಾರ್ಮಿಕರಿಗೆ ಸರ್ಕಾರದಿಂದ ನಿವೇಶನ ರಹಿತರಿಗೆ ನಿವೇಶನ ಗಳಾಗಲಿ, ಆಕಸ್ಮಿಕವಾಗಿ ಅಪಘಾತ ಆದ ಪಕ್ಷದಲ್ಲಿ ಸರ್ಕಾರದಿಂದ ಯಾವುದೇ ಸೌಲಭ್ಯ ಗಳಾಗಲಿ ನಮಗೆ ನೀಡಿರುವುದಿಲ್ಲ.ಹಾಗೂ ನಮ್ಮ ಕಾರ್ಮಿಕರ ಯಾವ ಕ್ಯಾಟಗರಿಗೆ ಬರುತ್ತೆ ಅನ್ನುವ ವಿಷಯಗಳನ್ನು ತಿಳಿದಿರುವುದಿಲ್ಲ ತಾವುಗಳು ಈ ನಮ್ಮ ಮನವಿಯನ್ನು ಪರಿಶೀಲಿಸಿ ನಮ್ಮ ಬೇಡಿಕೆಯನ್ನು ಈಡೇರಿಸ ಬೇಕೆಂದು ಮನವಿ ಮಾಡಿಕೊಂಡರು. ಆದನಂತರ ಸಂತೋಷ್ ಲಾಡ್ ಮಾತನಾಡಿದರು ಮೊದಲು ನಿಮ್ಮ ಬಳಿ ಇಶ್ರಮ್ ಕಾರ್ಡನ್ನು ರಿಜಿಸ್ಟರ್ ಮಾಡಿಸಿದ್ದೀರಾ ? ಇಲ್ಲವಾದಲ್ಲಿ ನೀವು ಇಶ್ರಮ್ ಕಾರ್ಡನ್ನು ಮಾಡಿಸಿಕೊಳ್ಳಿ, ನಾವು ಅದನ್ನು ವೆರಿಫಿಕೇಷನ್ ಮಾಡಿ ನಿಮಗೆ ಲೇಬರ್ ಕಾರ್ಡ್ ಕೊಡುವಂತೆ ಕೆಲಸ ಮಾಡುತ್ತೇವೆ.ಇದಕ್ಕಾಗಿಯೇ ಒಬ್ಬ ಅಧಿಕಾರಿಯನ್ನು ನೇಮಕ ಮಾಡಿ ನೀವು ಇದ್ದ ಜಾಗಕ್ಕೆ ಬಂದು ಮಾಹಿತಿ ತೆಗೆದುಕೊಂಡು ನಿಮಗೆ ಲೇಬರ್ ಕಾರ್ಡನ್ನು ವಿತರಣೆ ಮಾಡುವಂತೆ ಮಾಡುತ್ತೇನೆ.ಈಗಾಗಲೇ ಯಾರು ಇಶ್ರಮ್ ಕಾರ್ಡನ್ನು ಮಾಡಿಸಿದರೂ ಅಂತವರಿಗೆ 3,4, ತಿಂಗಳಲ್ಲಿ ಕಾರ್ಡನ್ನು ತಲುಪಿಸುವ ಕೆಲಸ ಮಾಡುತ್ತೇವೆ ದ್ವಿಚಕ್ರ ವಾಹನ ಮೆಕ್ಯಾನಿಕ್, ಡ್ರೈವರ್, ಕ್ಲೀನರ್ , ಹೆವೀ ಡ್ರೈವರ್, ಆಟೋ ಡ್ರೈವರ್, ಪಂಚರ್ ಶಾಪ್, ಟ್ರಾನ್ಸ್ಪೋರ್ಟ್ ವರ್ಗದಲ್ಲಿ ಬರುತ್ತೀರಾ ಎಂದು ಇಂಚ್ ಇಂಚು ವಿವರಣೆ ನೀಡಿದರು.ಇವತ್ತಿನಿಂದಲೇ ನೀವು ಇಶ್ರಮ್ ಕಾರ್ಡ್ ಮಾಡಿಸಿಕೊಳ್ಳಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿದರು.ದ್ವಿಚಕ್ರ ವಾಹನ ಕಾರ್ಮಿಕರ ಬೇಡಿಕೆಗಳನ್ನು 6 ತಿಂಗಳಲ್ಲಿ ಈಡೇರಿಸುತ್ತೇನೆಂದು ಹೇಳಿದರು , ಈ ಸಂದರ್ಭದಲ್ಲಿ ಮುಖಂಡರುಗಳಾದಅಕ್ಬರ್ ಬೇಗ್ ,ಗೌಸ್ ಭಾಯ್,ಭಾಷಭಾಯ್,ಲೋಕೇಶ್ ,ಐಯೂಬ್ ,ಇಸ್ಮಾಲ್ ,ಸುಭಾನ್ ರಫೀಕ್ ,ಸಂತೋಷ ,ಅಲ್ಲಾಬಕ್ಷಿ ಇತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಾಲತೇಶ್.ಶೆಟ್ಟರ್.ಹೊಸಪೇಟೆ