ಜಲಕ್ಷಾಮ ಎದುರಿಸಲು ಪೂರ್ವ ಸಿದ್ಧರಾಗಿರಿ…..

ರಾಜ್ಯಾದ್ಯಂತ ಪ್ರತಿ ಮನೆಗೊಂದು ಮಳೆ ನೀರು ಇಂಗಿಸುವ ಇಂಗು ಗುಂಡಿಗಳು ಇರಬೇಕು ಎನ್ನುವ ಕಾನೂನು ಜಾರಿಗೆ ತಂದರೆ ಬರಗಾಲದಂತ ಸಂದಿಗ್ಧ ಪರಿಸ್ಥಿತಿ ಎದುರಾದಾಗ ನೀರನ್ನು ಹಿಂಗು ಗುಂಡಿಗಳ ಮೂಲಕ ಭೂಮಿಯ ಒಳಗಡೆ ನೀರು ಶೇಖರಣೆ ಯಾಗಿರುವಂತೆ ನೋಡಿ ಕೊಂಡರೆ ಬಾವಿ ಮತ್ತು ಬೋರ್ವೆಲ್ ಗಳು ಬತ್ತದಂತೆ ಕಾಯ್ದು ಕೊಳ್ಳುವುದರಿಂದ ಕುಡಿಯುವ ನೀರಿಗೆ ತೊಂದರೆ ಆಗದೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿಂದ ದೂರಾಗಬಹುದು ಮತ್ತು ನೀರು ಉಪಯೋಗಿಸಲು ಅನುಕೂಲವಾಗುವುದು ಹೀಗಾಗಿ ಸರ್ಕಾರಗಳು ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ಪಟ್ಟಣ ಪಂಚಾಯಿತಿ ಪುರಸಭೆ ನಗರಸಭೆ ಮಹಾನಗರ ಪಾಲಿಕೆಗಳಲ್ಲಿ ಮನೆ ಕಟ್ಟಲು ಅನುಮತಿ ನಿಡುವಾಗ ಪ್ರತಿ ಮನೆಗೊಂದು ಹಿಂಗು ಗುಂಡಿಗಳು ಇರಬೇಕು ಎನ್ನುವ ಕಾನೂನನ್ನು ಜಾರಿಗೆ ತರುವಂತೆ ಕಟ್ಟು ನಿಟ್ಟಿನ ಆದೇಶ ಮಾಡಿ ಹೊಸ ಮನೆ ಕಟ್ಟುವಾಗ ಅನುಸರಿಸ ಬೇಕಾದ ಮಾರ್ಗದರ್ಶನ ಮಾಡಿ ಹಿಂಗು ಗುಂಡಿ ಕಟ್ಟುವ ಮಾರ್ಗಸೂಚಿ ರಚಿಸಿ ಅನುಮತಿ ನೀಡಿದಾಗ ಮಾತ್ರ ಬರಗಾಲದಂತ ಸಂದಿಗ್ಧ ಪರಿಸ್ಥಿತಿಯಲ್ಲೂ ಕುಡಿಯಲು ನೀರು ಸುಲಭವಾಗಿ ಸಿಗಬಹುದು ಇಲ್ಲದಿದ್ದರೆ ಈಗಿರುವ ಪರಿಸ್ಥಿತಿ ಮುಂದುವರೆದರೆ ಮುಂದಿನ ಪೀಳಿಗೆಗೆ ಬರಗಾಲ ಪರಿಸ್ಥಿತಿ ಬಂದಾಗ ನೀರು ಇಲ್ಲದೆ ಮನುಷ್ಯರು ಮತ್ತು ಪ್ರಾಣಿ ಪಕ್ಷಿಗಳು,ಜೀವ ಬಿಡಬೇಕಾದಂತ ಪರಿಸ್ಥಿತಿಗಳು ಬಂದರು ಅಚ್ಚರಿ ಪಡಬೇಕಿಲ್ಲ ಹಾಗಾಗಿ ಈ ವರ್ಷವೇ ಬರಗಾಲದ ಪರಿಸ್ಥಿತಿ ಎಂತಹ ವಿಷಮ ಸ್ಥಿತಿ ತಂದೊಡ್ಡಿದೆ ಎನ್ನುವುದಕ್ಕೆ ಸಾಕ್ಷಾತ್ ಸಾಕ್ಷಿಯಾಗಿ ಈ ವರ್ಷದ ಮಳೆಯ ಅಭಾವದಿಂದ ನೀರಿನ ಪರಿಸ್ಥಿತಿ ಗಂಭೀರವಾಗಿದ್ದು ಈ ವರ್ಷ ಮಳೆಯು ಸಂಪೂರ್ಣವಾಗಿ ಕೈ ಕೊಟ್ಟಿದ್ದರಿಂದ ಕುಡಿಯುವ ನೀರಿನ ಭವಣೆ ಎದುರಾಗುವದಂತು ಕಟ್ಟಿಟ್ಟ ಬುತ್ತಿ ಪ್ರತಿ ವರ್ಷ ಕೇವಲ ಬಾವಿ ಬೋರ ನೀರನ್ನು ಅವಲಂಬಿಸಿದ ಜನರಿಗೆ ಮಾತ್ರ ಅಲ್ಪಸ್ವಲ್ಪ ನೀರಿನ ತೊಂದರೆಯಾಗುತ್ತಿತ್ತು ಆದರೆ ಈ ವರ್ಷ ಸಂಪೂರ್ಣವಾಗಿ ಮಳೆ ಆಗದೆ ಇರುವುದರಿಂದ ಕೆರೆ ಕಟ್ಟೆ ಭಾವಿ ಬೋರ್ವೆಲ್ ನದಿ ಹಾಗೂ ಜಲಾಶಯಗಳ ಒಡಲಗಳಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿರುವುದರಿಂದ ಈ ವರ್ಷ ನೀರಿನ ಭವಣೆ ಪ್ರತಿಯೊಬ್ಬರಿಗೂ ತಪ್ಪಿದ್ದಲ್ಲ ಹಾಗಾಗಿ ಇದರ ಬಗ್ಗೆ ನಾವು ಜಾಗೃತರಾದರೆ ಮಾತ್ರ ಈ ಎರಡು ಮೂರು ತಿಂಗಳ ಬೇಸಿಗೆಯಲ್ಲಿ ಬದುಕು ಸಾಗಿಸಬಹುದು ಇಲ್ಲದಿದ್ದರೆ ಬಿಸಿಲಿನ ಬೇಗೆಯ ಶಾಖ ಒಂದೆಡೆಯಾದರೆ ನೀರು ಸಿಗದೇ ವಿಲವಿಲ ಒದ್ದಾಡುವ ಪರಿಸ್ಥಿತಿ ಇನ್ನೊಂದು ಕಡೆ ಈ ವರ್ಷ ಬರಗಾಲದಿಂದ ರಾಜ್ಯದ ನೀರಿನ ಸ್ಥಿತಿ ತುಂಬಾ ಗಂಭೀರವಾಗುತ್ತಿದ್ದು ಇದರಿಂದ ಉಪಾಯ ಕಂಡುಕೊಳ್ಳುವುದು ಹೇಗೆ ಎನ್ನುವ ಚಿಂತೆ ಸರ್ಕಾರಕ್ಕೆ ಮತ್ತು ಜನರಿಗೆ ಬಂದಿದ್ದು ಇದರಿಂದ ಪಾರಾಗುವ ಮುಂದಿನ ಮಳೆಗಾಲ ಬರುವರೆಗೂ ಮನುಷ್ಯರು ಮತ್ತು ಪ್ರಾಣಿ ಪಕ್ಷಿಗಳು ಜಲ ಕ್ಷಾಮದಿಂದ ಬದುಕುವುದೇಗೆ ಎನ್ನುವ ಚಿಂತೆ ಎಲ್ಲರ ಮನದಲ್ಲೂ ಕಾಡುತ್ತಿದೆಎಲ್ಲ ನದಿ ಜಲಾಶಯಗಳಲ್ಲಿ ಬೇಸಿಗೆ ಪ್ರಾರಂಭದಲ್ಲಿಯೇ ನೀರು ಖಾಲಿಯಾಗಿದ್ದು ಕಾವೇರಿ ಜಲಾಶಯ ನೀರನ್ನೇ ಅವಲಂಬಿಸಿದ್ದ ಬೆಂಗಳೂರಿನಂತ ಮಹಾನಗರದಲ್ಲಿಯೂ ನೀರಿನ ಸಮಸ್ಯೆ ಈ ಬಾರಿ ಎದುರಾಗಲಿದೆ ಎನ್ನುವುದು ಈಗಾಗಲೇ ಮುನ್ಸೂಚನೆ ನೀಡಿದೆ ಸರ್ಕಾರಿ ಆಫೀಸಗಳಿಂದ ಹಿಡಿದು ದೊಡ್ಡ ದೊಡ್ಡ ಅಪಾರ್ಟ್ಮೆಂಟುಗಳಲ್ಲಿ ನೀರಿನ ಭವಣೆ ಪ್ರಾರಂಭವಾಗಿದ್ದು ಮುಂದಿನ ದಿನಮಾಸದಲ್ಲಿ ನೀರನ್ನು ಸಂಗ್ರಹಿಟ್ಟುಕೊಳ್ಳುವುದು ಹೇಗೆ ಎನ್ನುವ ಭಯದ ವಾತಾವರಣ ನಿರ್ಮಾಣವಾಗಿದ್ದು ಇದರಿಂದ ಪಾರಾಗುವುದು ಹೇಗೆ ಎನ್ನುವ ಚಿಂತೆ ಬೆಂಗಳೂರಿಗರಿಗೆ ಈಗಿನಿಂದಲೇ ಪ್ರಾರಂಭವಾಗಿದೆ ಇದು ಬೆಂಗಳೂರಿನವರ ಬದುಕು ಆದರೆ ಇನ್ನೂ ಮಳೆಗಾಲ ಸಂಪೂರ್ಣ ಕೈಕೋಟ್ಟಿದ್ದರಿಂದ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಅಲ್ಲಲ್ಲಿ ನೀರಿನ ತೊಂದರೆಯಾಗುತ್ತಿದ್ದು ಸರ್ವೇಸಾಮಾನ್ಯವಾಗಿತ್ತು ಆದರೆ ಈ ವರ್ಷ ಸಂಪೂರ್ಣವಾದ ಬರಿಗಾಲ ಆವರಿಸಿದ್ದರಿಂದ ನೀರಿನ ಅಭಾವ ಮತ್ತು ಜಲಕ್ಷಾಮತೆ ತುಂಬಾ ವಿಕೋಪಕ್ಕೆ ಹೋಗುವ ಸಾಧ್ಯತೆ ಇದ್ದು ಸರಕಾರಕ್ಕೂ ಮತ್ತು ಜನರಿಗೂ ದೊಡ್ಡ ಸಮಸ್ಯೆಯಾಗಿ ತಲೆದೂರುವಂತೆ ಕಾಣುತ್ತಿದೆ ಟ್ಯಾಂಕರ್ ಗಳ ಮೂಲಕ ನೀರು ಸಾಗಿಸಿ ಜನರ ಭವಣೆ ನೀಗಿಸಬೇಕೆಂದರು ಈ ವರ್ಷ ನೀರಿನ ಟ್ಯಾಂಕರ್ ತುಂಬಲಿಕ್ಕು ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದ್ದು ನೀರಿಗಾಗಿ ಪ್ರತಿ ಹಳ್ಳಿಯಲ್ಲೂ ಎರಡು ಮೂರು ಕಿಲೋಮೀಟರ್ ಸಂಚರಿಸಿ ನೀರು ತರಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೂ ಅಡ್ಡಿ ಉಂಟು ಮಾಡುತ್ತಿದೆ ಗ್ರಾಮೀಣ ಪ್ರದೇಶಗಳ ಜನರು ಮಕ್ಕಳನ್ನು ನೀರು ತರಲಿಕ್ಕೆ ಕಳಿಸುತ್ತಿರುವುದರಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತಿದ್ದು ನೀರು ತರುವ ನೆಪದಿಂದ ಶಾಲೆಗಳಿಗೆ ಹೋಗದಂತ ಪರಿಸ್ಥಿತಿ ಹಳ್ಳಿಗಳಲ್ಲಿ ತಾಸುಗಟ್ಟಲೆ ಕೊಡ ಹಿಡಿದು ಸುಮಾರು ಮೂರು ನಾಲ್ಕು ಕಿಲೋಮೀಟರ್ ಅಲೆದಾಡಿದರು ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ ಸುಮಾರು ಎರಡು ಮೂರು ದಶಕಗಳ ಹಿಂದೆ ಇಂಥ ಬರಗಾಲ ಬಂದಾಗಲೆಲ್ಲ ಗ್ರಾಮೀಣ ಪ್ರದೇಶದ ಜನರು ಬರಿ ನಲ್ಲಿಗಳನ್ನು ನಂಬದೇ ಬಾವಿಕೆರೆ ಕಟ್ಟಿಗಳಿಗೆ ಹೋಗಿ ನೀರು ತರುತ್ತಿದ್ದರು ಆದರೆ ಇವತ್ತಿನ ಆಧುನಿಕತೆ ಹೆಸರಿನಲ್ಲಿ ನಾವೆಲ್ಲ ನೀರು ಇಂಗುವ ಗುಂಡಿಗಳಿಂದ ದೂರಾಗಿದ್ದು ಯಾವ ಹಳ್ಳಿಯಲ್ಲೂ ನೀರು ಇಂಗುವ ಗುಂಡಿಗಳೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಈ ವರ್ಷ ಬೋರ್ವೆಲ್ ಗಳಲ್ಲಿ ಬಾವಿಗಳಲ್ಲಿ ನೀರಿನ ಶಲೆಗಳು ಸಂಪೂರ್ಣವಾಗಿ ನಿಂತು ಹೋಗಿರುವುದರಿಂದ ಬಾವಿಗಳಲ್ಲೂ ಬೋರ್ವೆಲ್ ಗಳಲ್ಲೂ ನೀರು ಸಿಗುತ್ತಿಲ್ಲ ಮುಖ್ಯವಾಗಿ ಕರ್ನಾಟಕ ಅನೇಕ ಕೆರೆಗಳ ಮೂಲಕ ದೊಡ್ಡ ದೊಡ್ಡ ನಗರಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ನೀರು ಸರಬರಾಜು ಮಾಡುತ್ತಿದ್ದ ದೊಡ್ಡ ಪ್ರಮಾಣದ ಕೆರೆಕಟ್ಟೆಗಳೆಲ್ಲ ಈ ವರ್ಷ ನೀರಿಲ್ಲದೆ ಬತ್ತಿರುವುದರಿಂದ ಕೆರೆಗಳನ್ನೇ ನಂಬಿ ಕೂತಿದ್ದ ನಗರ ಹಾಗು ಗ್ರಾಮೀಣ ಪ್ರದೇಶಗಳಿಗೂ ನೀರಿನ ತೊಂದರೆ ಉಂಟಾಗುತ್ತಿದೆ ಕೆಲವೊಂದು ನಗರಗಳಲ್ಲಿ ಕೆಲವು ಜಲಾಶಯ ಕೆರೆಗಳಿಂದ 24*7 ನೀರು ಸರಬರಾಜು ಆಗುತ್ತಿದ್ದು ಇಂತಹ ಪ್ರದೇಶಗಳಲ್ಲೂ ವಾರ ಹತ್ತು ದಿವಸಕೊಮ್ಮೆ ನೀರು ಸರಬರಾಜು ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಇದಕ್ಕೆ ನಮ್ಮ ಆಧುನಿಕತೆಯ ಕಾರಣ ಎನ್ನುವಂತಾಗಿದೆ ಅಭಿವೃದ್ಧಿಯ ಹೆಸರಿನಲ್ಲಿ ಸಿಟಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಿ ಭೂಮಿ ಒಳಗಡೆ ಒಂದು ಸ್ವಲ್ಪ ನೀರು ಇಂಗದಂತೆ ಮಾಡಿ ನಮಗೆ ನಾವೇ ಕುತ್ತು ತಂದುಕೊಂಡಂತ ಪರಿಸ್ಥಿತಿ ನಿರ್ಮಾಣವಾಗಿದೆ ಮೊದಲೆಲ್ಲ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಭೂಮಿಯ ನೆಲದ ಮೇಲೆ ನೀರು ಹರಿಯುತ್ತಿರುವದರಿಂದ ಹಾಗೂ ಇಂಗುವ ಗುಂಡಿಗಳು ಇದ್ದಿದ್ದರಿಂದ ಇಲ್ಲಿ ಶೇಖರಣೆಯಾಗುವ ನೀರನ್ನು ಭೂಮಿ ಹೀರಿಕೊಂಡು ಬಾವಿ ಬೋರಗಳಲ್ಲಿ ಜಲವನ್ನು ನಮಗೆ ಒದಗಿಸುತ್ತಿತ್ತು ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಮಗೆ ನಾವು ಎಡವಟ್ಟು ಮಾಡಿಕೊಂಡಿದ್ದರಿಂದ ಹನಿ ನೀರಿನ ಇಂಥಹ ಪರಿಸ್ಥಿತಿ ನಿರ್ಮಾಣವಾಗಿದ್ದು ಇದಕ್ಕೆ ಯಾರು ಹೊಣೆ ಎನ್ನುವ ಉತ್ತರ ಹುಡುಕುವುದು ಕಷ್ಟ ಸರ್ಕಾರಗಳು ಕೇವಲ ಅಭಿವೃದ್ಧಿ ಹೆಸರಿನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವುದಷ್ಟೇ ಅಲ್ಲದೆ ಪ್ರತಿ ಮನೆಯ ಮಾಳಿಗೆ ಮೇಲಿಂದ ಬರುವ ನೀರುನ್ನು ಇಂಗು ಗುಂಡಿಗಳ ಮೂಲಕ ಭೂಮಿಯಲ್ಲಿ ಹಿರುವಂತೆ ಮಾಡಿದರೆ ಬಾವಿ ಬೋರ್ವೆಲ್ ಗಳ ನೀರಿನ ಸೆಲೆಯನ್ನು ಹೆಚ್ಚಿಸಬಹುದುಜಲಾಶಯಗಳಿಂದ ದೊಡ್ಡ ದೊಡ್ಡ ಮಹಾನಗರ ಪಾಲಿಕೆಗಳಿಗೆ ನಗರ ಸಭೆಗಳಿಗೆ ಪುರಸಭೆಗಳಿಗೆ ಹಾಗೂ ಪಟ್ಟಣ ಪಂಚಾಯಿತಿ ಗ್ರಾಮ ಪಂಚಾಯಿತಿಗಳಿಗೆ ಸರಕಾರದಿಂದ ಸಾಕಷ್ಟು ಹಣವನ್ನು ಖರ್ಚು ಮಾಡಿ ಕುಡಿಯುವ ನೀರನ್ನು ಜನರಿಗೆ ಸಮರ್ಪಕವಾಗಿ ತಲುಪಿಸಬೇಕು ಎನ್ನುವ ಉದ್ದೇಶದಿಂದ ಸರ್ಕಾರದ ಸಾಕಷ್ಟು ಹಣ ಖರ್ಚು ಮಾಡಿ ಪೈಪ್ಲೈನ್ ಮೂಲಕ ನೀರನ್ನು ಸರಬರಾಜು ಮಾಡುತ್ತಿರುತ್ತದೆ ಆದರೆ ಬಹಳ ದೂರ ದೂರ ಹೋಗಿರುವ ಪೈಪ್ಲೈನ್ ಗಳಲ್ಲಿ ಅಲಲ್ಲಿ ಡ್ಯಾಮೇಜ್ಗಳಾಗಿ ನೀರು ಸರಬರಾಜು ಮಾಡುವಾಗ ಸಾಕಷ್ಟು ನೀರು ಪೋಲಾಗುತ್ತಿರುವುದು ಕಂಡುಬಂದಿದ್ದರೂ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದೆ ಇರುವುದರಿಂದ ಸಾಕಷ್ಟು ನೀರು ಪೋಲಾಗಿ ಇವತ್ತಿನ ದಿನ ಮಾನಕ್ಕೆ ಕುಡಿಯುವ ನೀರಿಗೆ ಸಂಕಷ್ಟ ಬಂದ ಒದಗಿದೆಮಳೆಗಾಲಗಳು ಸಂಪೂರ್ಣವಾಗಿ ಇದ್ದಾಗಲೇ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ನೀರಿನ ಸಮಸ್ಯೆಗಳು ಎದುರಾಗುತ್ತಿದ್ದವು ಆದರೆ ಈ ವರ್ಷ ಈ ಸಮಸ್ಯೆ ಜೊತೆಗೆ ನಗರ ಪ್ರದೇಶಗಳಲ್ಲಿ ನೀರನ್ನು ಒದಗಿಸಬೇಕಾದ ಕಠಿಣ ಸವಾಲುಗಳು ಸರಕಾರದ ಮುಂದೆ ಇವೆ. ಆದರೆ ಈ ಬರಗಾಲದ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರವಾದರೂ ಕೂಡ ನೀರನ್ನು ಎಲ್ಲಿಂದ ತರುತ್ತದೆ ಎನ್ನುವ ಚಿಂತೆ ಸಾರ್ವಜನಿಕರ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗುತ್ತಿದೆ ಎಲ್ಲಿಯೂ ನೀರು ಸಿಗದೇ ಇದ್ದಾಗ ಸರ್ಕಾರವಾದರೂ ನೀರನ್ನು ಎಲ್ಲಿಂದ ಸರಬರಾಜು ಮಾಡಬೇಕು ಎನ್ನುವ ಸಂದಿಗ್ಧ ಪರಿಸ್ಥಿತಿಯಲ್ಲಿ ಉಸಿರಾಟವಿಲ್ಲದೆ ಉಸಿರುಗಟ್ಟಿ ನಿಂತಂತಹ ವಾತಾವರಣದಲ್ಲಿ ಸರ್ಕಾರ ಮತ್ತು ಜನರ ಮಧ್ಯೆ ನೀರು ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿದೆಸರ್ಕಾರಗಳು ಅಭಿವೃದ್ಧಿಯ ನೆಪ ಇಟ್ಟುಕೊಂಡು ಪ್ರತಿ ಜಲಾಶಯದಿಂದ ಇಂತಿಷ್ಟು ನೀರನ್ನು ಕೈಗಾರಿಕೋದ್ಯಮಗಳಿಗೆ ನೀಡಬೇಕು ಎನ್ನುವ ಕಾನೂನಿನಿಂದಾಗಿ ಜಲಾಶಯಗಳಲ್ಲಿ ಇದ್ದ ಅಲ್ಪಸಲ್ಪ ನೀರನ್ನೆಲ್ಲಾ ಕೈಗಾರಿಕದ್ಯೋಮಗಳು ತಮ್ಮ ಉಪಯೋಗಕ್ಕೆ ಸರಬರಾಜು ಮಾಡಿಕೊಂಡಿದ್ದು ಈ ವರ್ಷ ಬೇಸಿಗೆಯಲ್ಲಿ ಜನರಿಗೆ ಕುಡಿಯಲಿಕ್ಕೆ ನೀರು ಇರದಂತಹ ಸಂದಿಗ್ಧ ಪರಿಸ್ಥಿತಿಯನ್ನು ತಂದಿಟ್ಟಿವೆ ಹಾಗಾಗಿ ಸರ್ಕಾರಗಳು ಹೆಚ್ಚು ಪ್ರಮಾಣದಲ್ಲಿ ನೀರು ಶೇಖರಣೆಯಾದಾಗ ಮಾತ್ರ ಕಾರ್ಖಾನೆಗಳಿಗೆ ನೀರು ಕೊಡಬಹುದು ಎನ್ನುವ ಕಾನೂನು ಜಾರಿಗೆ ತರಬೇಕು ಇಲ್ಲದಿದ್ದರೆ ಇಂಥ ಸಮಸ್ಯೆಗಳು ಪದೇ ಪದೇ ಸಂಭವಿಸಲು ಪ್ರಾರಂಭವಾಗುತ್ತವೆ ರಾಜ್ಯದ ಪ್ರತಿಷ್ಠಿತ ಜಲಾಶಯ ನದಿ ಕೆರೆ ಕಟ್ಟೆಗಳೆಲ್ಲ ಬ್ರಿಜ್ ಕಂಬ್ಯಾರೇಜ್ ಸಂಪೂರ್ಣವಾಗಿ ಖಾಲಿ ಆಗಿರುವುದರಿಂದ ಮನುಷ್ಯರು ತಾವು ಬದುಕಿ ತಮ್ಮನ್ನು ನಂಬಿರುವ ಧನಕರು ಮತ್ತು ಪ್ರಾಣಿಗಳನ್ನು ಬದುಕಿಸುವುದು ಹೇಗೆ ಎನ್ನುವ ಚಿಂತೆ ಕಾಡ ತೊಡಗುತ್ತಿದೆ.ಈ ವರ್ಷ ಉಂಟಾಗಿರುವ ಜಲಕ್ಷಾಮದಿಂದ ರೈತರ ಜೀವನದಲ್ಲೂ ಏರುಪೇರು ಆಗುವ ಸಾಧ್ಯತೆಗಳಿದ್ದು ತಮ್ಮನ್ನೇ ನಂಬಿರುವ ಎತ್ತು ಹೆಮ್ಮೆ ಆಕಳುಗಳನ್ನು ಇಂಥಹ ಜಲಕ್ಷಾಮದ ವಿಷಮ ಪರಿಸ್ಥಿತಿ ಇರುವಾಗ ಬದುಕಿಸುವ ಹೇಗೆ ಎನ್ನುವ ಚಿಂತೆ ಪ್ರತಿಯೊಬ್ಬ ರೈತನಲ್ಲಿ ಕಾಡುತ್ತಿದೆ ಇಷ್ಟಕ್ಕೆಲ್ಲ ಮೂಲ ಕಾರಣವೆಂದರೆ ನಾವು ಮಾಡುವ ತಪ್ಪುಗಳೆ ನಮಗೆ ಮುಂದೊಂದು ದಿನ ಕುತ್ತು ಆಪತ್ತುಗಳನ್ನು ತರುತ್ತವೆ ಎನ್ನುವುದಕ್ಕೆ ಈ ವರ್ಷದ ಬರಗಾಲದ ಚಿತ್ರಣವೆ ಸಾಕ್ಷಾತ್ ಕಣ್ಮುಂದೆ ನಿಂತಿದೆ ಏಕೆಂದರೆ ನಾವು ಮರಗಳ ಬೆಳೆಸುವುದನ್ನು ಕಡಿಮೆ ಮಾಡಿರುವುದರಿಂದ ಮತ್ತು ಸರಕಾರ ಒಂದು ಮರವನ್ನು ಕಡೆದರೆ ಅದಕ್ಕೆ ಪರ್ಯಾಯವಾಗಿ ಎರಡು ಮರಗಳನ್ನು ಬೆಳೆಸಬೇಕು ಮತ್ತು ಪ್ರಕೃತಿಯಲ್ಲಿ ಬೆಳೆದ ಗಿಡ ಗಂಟೆಗಳನ್ನು ನಾವು ಕಡಿಯಬಾರದು ಎನ್ನುವ ಪರಿಜ್ಞಾನ ಪ್ರತಿಯೊಬ್ಬರಲ್ಲಿ ಮೂಡಿ ಬಂದಾಗ ಮಾತ್ರ ಇಂತಹ ಸಮಸ್ಯೆ ತೊಂದರೆಗಳಿಂದ ಬರುವ ಆಪತ್ತುನ್ನು ಕಡಿಮೆಗೊಳಿಸಬಹುದು ಬರಿ ಗಿಡಗಳನ್ನು ಕಡಿಯಬಾರದು ಎನ್ನುವ ಕಾನೂನು ಪಾಲಿಸದೆ ಗಿಡಗಳನ್ನು ಹೆಚ್ಚೆಚ್ಚು ಬೆಳೆಸಿದಾಗ ಪರಿಸರ ವೃದ್ಧಿಯಾಗಿ ಸಕಾಲಕ್ಕೆ ಅನುಗುಣವಾಗಿ ಪ್ರಕೃತಿಯನ್ನು ನಾವು ಶ್ರೀಮಂತ ಗೊಳಿಸಿದಾಗ ಸಂಪೂರ್ಣ ಮಳೆಯಾಗಿ ಬರಗಾಲ ಎನ್ನುವ ಆಪತ್ತನ್ನು ತಡೆದು ಬೇಸಿಗೆ ಕಾಲದಲ್ಲಿ ಬೇಕಾದಷ್ಟು ನೀರನ್ನು ಉಪಯೋಗಿಸಿಕೊಳ್ಳುವಂತೆ ವಾತಾವರಣವನ್ನು ನಾವೇ ಸೃಷ್ಟಿ ಮಾಡಿಕೊಳ್ಳಬೇಕುಈ ವರ್ಷ ಅವಮಾನ ಇಲಾಖೆ ಬಿಸಿಲಿನ ಶಾಖ ಶೇಕಡ ಮೂರರಷ್ಟು ಹೆಚ್ಚಾಗಲಿದೆ ಎನ್ನುವ ಮುನ್ಸೂಚನೆ ನೀಡಿದ್ದು ನೀರು ಸಂಗ್ರಹದ ಜೊತೆಗೆ ಮನೆಯಲ್ಲಿರುವ ಮುಂದಿನ ಮೂರು ತಿಂಗಳವರೆಗೆ ವೃದ್ಧರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿಯು ಮನೆಯವರ ಮೇಲಿದೆ ಅಸ್ತಮಾ-ದಮ್-ಕೆಮ್ಮು ಗಳಂತ ಕಾಯಿಲೆ ಇರುವ ವೃದ್ಧರಿಗೆ ಉಸಿರಾಟದ ಸಮಸ್ಯೆ ಆಗಿ ಶಾಖದ ಪ್ರಖರತೆ ಹೆಚ್ಚಾಗುವುದರಿಂದ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಗಳಿದ್ದು ವಾತಾವರಣದ ಶಾಖ ಗಾಳಿಯ ಹೊಡೆತದಿಂದ ವೃದ್ಧರಿಗೆ ತೊಂದರೆಯಾಗುತ್ತಿದ್ದು ನೀರಿನ ಅಭಾವದಿಂದ ಎಲ್ಲೆಂದರಲ್ಲಿ ತರುವ ನೀರನ್ನು ಮನೆಯಲ್ಲಿರುವ ವೃದ್ಧರಿಗೆ ಕಾಯಿಸಿ ಕುಡಿಸಬೇಕಾದ ಜವಾಬ್ದಾರಿ ಮನೆಯ ಸದಸ್ಯರ ಮೇಲಿದೆ ಜಲಕ್ಷಾಮದಿಂದ ಹೀಗೆ ಹತ್ತಾರು ಸಮಸ್ಯೆಗಳು ಉದ್ಭವವಾಗಿದ್ದು ನೀರಿನಿಂದ ಬರುವ ತೊಂದರೆಗಳನ್ನು ಜಾಗರೂಕತೆಯಿಂದ ಎದುರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎನ್ನುವುದು ನಾವು ಮರೆಯಬಾರದು.ವರುಣದೇವನ ಮುನಿಸಿನಿಂದ ಈ ವರ್ಷ ಸಜ್ಜಿ-ಬರ ಜೋಳದ ಬರ ಕಡಲೆ ಬರ ತೊಗರಿ ಬರ ಹೀಗೆ ರೈತರು ಬೆಳೆಯುತ್ತಿದ್ದ ಕಾಳು ಕಡಿಗಳಿಗೆ ಬರದ ಜೊತೆಗೆ ನೀರಿನ ಬರವು ಜನರಿಗೆ ಕಾಡುತ್ತಿರುವುದರಿಂದ ಮುಂದಿನ ಮೂರು ತಿಂಗಳದ ಬದುಕು ದುಸ್ತರವಾಗಿದೆ ಎಂದು ಹೇಳಲಾಗುತ್ತಿದ್ದು ಇದರಿಂದ ಪ್ರಕೃತಿಯ ವಾತಾವರಣದಲ್ಲಿ ಎಲ್ಲಾ ಕಡೆ ಬತ್ತಿದ ಇಲ್ಲದ ನೀರನ್ನು ತರುವುದಾದರೂ ಹೇಗೆ ಕುಡಿಯುವದಾದರೂ ಹೇಗೆ ಬದುಕುವುದಾದರೂ ಹೇಗೆ ಎನ್ನುವ ಚಿಂತೆಯಲ್ಲಿ ಕರುನಾಡಿನ ಜನ ಕೊರಗುವಂತ ಪರಿಸ್ಥಿತಿ ಉದ್ಭವವಾಗಿದ್ದು ಈ ಸಾರಿ ಬಂದಿರುವ ಜಲಕ್ಷಾಮ ಯಾವ ರೀತಿ ಮುಂದಿನ ಮೂರು ತಿಂಗಳ ಜನರಿಗೆ ತೊಂದರೆ ಉಂಟು ಮಾಡಲಿದೆ ಎನ್ನುವುದು ಗೋಚರಿಸದಂತಾಗಿದೆ ಹೀಗಾಗಿ ಬರುವ ಬೇಸಿಗೆ ಜಲ ಕ್ಷಾಮದ ಒಡೆತದಿಂದ ತಲ್ಲಣ ಗೊಳ್ಳದಂತೆ ಪ್ರಕೃತಿ ದೇವ ಕರುಣೆ ತೋರಲಿ ಎನ್ನುವುದೇ ಜನರ ಆಸೆಯಾಗಿದೆ.

*****

ಜಗದೀಶ.ಎಸ್.ಗಿರಡ್ಡಿ.

ಲೇಖಕರು. ಗೊರಬಾಳ

9902470856.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button