ವೈಶಿಷ್ಟ ಹವ್ಯಾಸದ ವಿಕಲ ಚೇತನ ಧತ್ತಪ್ಪ ಚಿಲ್ಲಾಳ…..

ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಬಡವ ಎನ್ನ ಕಾಲೇ ಕಂಬ ಎನ್ನ ದೇಹವೇ ದೇಗುಲ ಎನ್ನ ಶಿರವೇ ತನ್ನ ಕಳಸವಯ್ಯ ಕೂಡಲಸಂಗಮದೇವ ಎಂಬ ಬಸವಣ್ಣನ ವಚನದಂತೆ ಇವತ್ತಿನ ಆಧುನಿಕ ಯುಗದಲ್ಲೂ ಬದುಕಿ ತೋರಿಸುತ್ತಿರುವ ಆದರ್ಶ ವ್ಯಕ್ತಿ ಧತ್ತಪ್ಪ ಚಿಲ್ಲಾಳ ಸದಾಕಾಲ ಸರ್ವ ಸಮಯದಲ್ಲೂ ಸರ್ವರಿಗೆ ಒಳಿತು ಮಾಡಬೇಕು ಎನ್ನುವ ಮಹಾದಾಸೆದೊಂದಿಗೆ ಈಸಬೇಕು ಇದ್ದು ಜೈಸಬೇಕು ಎನ್ನುವ ತತ್ವವನ್ನು ಅಳವಡಿಸಿಕೊಂಡಿರುವ ಸಾಮಾನ್ಯ ವ್ಯಕ್ತಿ ಇಳಕಲ್ ನಗರದ ದತ್ತಪ್ಪ ಚಿಲ್ಲಾಳ್ ಸದಾಕಾಲ ಸಮಾಜ ಸೇವೆ ಮಾಡಬೇಕು ಎನ್ನುವ ತುಡಿತದೊಂದಿಗೆ ಕಡುಬಡತನ ದೈಹಿಕವಾಗಿ ಅಂಗ ವೈಕಲ್ಯನಾಗಿರುವ ದತ್ತಪ್ಪ ಸಮಾಜಸೇವೆ ಮಾಡಲು ಹಗಲಿರುಳು ಶ್ರಮಿಸುವ ಇವರನ್ನು ನೋಡಿದರೆ ಆ ಭಗವಂತನು ಧರೆಯ ಸೇವೆಗಾಗಿಯೇ ದತ್ತಪ್ಪನನ್ನು ಭೂಮಿಗೆ ದಾರೆ ಎರದಂತೆ ತೋಚುತ್ತದೆ ತಾನು ದುಡಿಯುವ ಸ್ವಲ್ಪ ಆದಾಯ ಮತ್ತು ತನ್ನ ಅಂಗವಿಕಲರ ವೇತನದಿಂದ ಬರುವ ಅಲ್ಪ ಹಣದಲ್ಲಿ ಕನಿಷ್ಠ ಅರ್ಧದಷ್ಟು ಸಮಾಜ ಸೇವೆಗಾಗಿ ಖರ್ಚು ಮಾಡುವ ಅಪರೂಪದ ವ್ಯಕ್ತಿ ಈ ಧತ್ತಪ್ಪ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಇಲಕಲ್ಲ ನಗರದ ಜನರ ಸೇವೆಗಾಗಿ ಸದಾಕಾಲವು ಶ್ರಮಿಸುತ್ತಿರುತ್ತಾನೆ. ದತ್ತಪ್ಪನಿಗೆ ನಗರದಲ್ಲಿ ಸಾಮಾಜಿಕ ಕಾರ್ಯಕ್ರಮ ಇದ್ದರೆ ಸಾಕು ಕಾರ್ಯಕ್ರಮದ ಸಂಘಟಕರು ಆಹ್ವಾನ ನೀಡಿದರೂ ನೀಡದಿದ್ದರೂ ಸ್ವಯಂ ಪ್ರೇರಿತವಾಗಿ ಆ ಕಾರ್ಯಕ್ರಮದ ಯಶಸ್ವಿಗಾಗಿ ಎಲೆಮರೆಕಾಯಿಯಾಗಿ ಸೇವೆ ಸಲ್ಲಿಸುವ ಹವ್ಯಾಸ ಬೆಳೆಸಿಕೊಂಡು ಸಮಾಜ ಸೇವೆ ಹಿಂಗೂ ಮಾಡಬಹುದು ಎನ್ನುವುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾನೆ ಒಂದೇ ತರಹದ ಸೇವೆ ಅಲ್ಲದೆ ಹಲವಾರು ವಿಧ-ವಿಧ ಸಮಾಜ ಸೇವೆ ಮಾಡುವ ಮತ್ತು ಇಲಕಲ್ ದಲ್ಲಿ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಗೌರವಿಸುವ ಅವರ ಬಗ್ಗೆ ವಿಶೇಷ ಆಸಕ್ತಿ ಕಾಳಜಿ ವಹಿಸುವ ಹವ್ಯಾಸ ಕೂಡ ಬೆಳೆಸಿಕೊಂಡು ದೈಹಿಕವಾಗಿ ಅಂಗವಿಕಲ ಇದ್ದೇನೆ ಎನ್ನುವ ಮನೋಭಾವ ಎಂದು ಹೊಂದಿರದೆ ಸದಾ ಎಲ್ಲರಂತೆ ಸಮಾಜದಲ್ಲಿ ಯಾರಿಗೂ ಗೊತ್ತಾಗದಂತೆ ಹೊಂದಿಲ್ಲೊಂದು ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಸೇವೆಯು ಇನ್ನೊಬ್ಬರಿಗೆ ಗೋಚರವಾಗದಂತೆ ಎಲೆಮರೆಕಾಯಿಯಾಗಿ ಕೆಲಸ ನಿರ್ವಹಿಸುವ ಇಲಕಲ್ಲ ನಗರದ ಏಕೈಕ ವ್ಯಕ್ತಿ ಎಂದರೆ ಅದು ಧತ್ತಪ್ಪ ಚಿಲ್ಲಾಳ ಎಂದರೆ ತಪ್ಪಾಗಲಾರದು ಹೀಗೆ ಭಾರತ ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಗತಿಸುವ ಇತಿಹಾಸ ವಾಗುವ ಘಟನೆಗಳನ್ನು ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಕ್ರೂಢೀಕರಿಸಿ ಅವುವೆಲ್ಲವುಗಳನ್ನು ಕಟಿಂಗ್ ಮಾಡಿ ತನ್ನ ಸ್ವಂತ ಖರ್ಚಿನಲ್ಲಿಯೇ ಲ್ಯಾಮಿನೇಷನ್ ಮಾಡಿಸಿ ಸುಮಾರು ಇಂತಹ ವಿಶೇಷ ಇರುವ ಸುಮಾರು 5000ಕ್ಕೂ ಹೆಚ್ಚು ಹೆಚ್ಚು ಸುದ್ದಿಗಳನ್ನು ಶೇಖರಿಸಿ ಇಡುವ ವಿಶೇಷವಾದ ಹವ್ಯಾಸ ಬೆಳೆಸಿಕೊಂಡು ವಿಶಿಷ್ಟವಾದ ಸಮಾಜದ ಸೇವೆ ಮಾಡುವ ಅಪರೂಪದ ವ್ಯಕ್ತಿ ದತ್ತಪ್ಪ ಚಿಲ್ಲಾಳ ಇಷ್ಟೆಲ್ಲ ಸಾಧನೆಗೆ ಬೆನ್ನೆಲುಬಾಗಿ ನಿಂತವರೇ ಅವರ ಧರ್ಮಪತ್ನಿ ಶ್ರೀಮತಿ ಶಕುಂತಲಾ ಬಾಯಿ ಚಿಲ್ಲಾಳ ತಮಗೆ ಮಕ್ಕಳೆಲ್ಲದಿದ್ದರೂ ಇಡೀ ಸಮಾಜವನ್ನೇ ತಮ್ಮ ಕುಟುಂಬದಂತೆ ನೋಡಿಕೊಳ್ಳುವರು ತಾನು ಅಂಗವಿಕಲರಿದ್ದರೂ ಸಮಾಜಸೇವೆ ಮಾಡಬೇಕೆನ್ನುವ ಹಂಬಲದೊಂದಿಗೆ ಶ್ರಮಿಸುವ ಬಸವಣ್ಣನವರ ಕಾಯಕವೇ ಕೈಲಾಸದ ತತ್ವವನ್ನು ತನ್ನ ಜೀವನದುದ್ದಕ್ಕೂ ಅನಿಸಿಕೊಂಡು ಅದರಂತೆ ನಡೆದುಕೊಳ್ಳುವ ಅಪ್ಪಟ ಬಸವಣ್ಣನ ಅನುಯಾಯಿಯಾಗಿ ಸಮಾಜ ಸೇವೆ ಮಾಡುತ್ತಾ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. *ಪಿತಾಶ್ರೀ ಮಾತುಶ್ರೀ ಅವರ ಸ್ಮರಣಾರ್ಥ ಪ್ರತಿ ವರ್ಷ ವಿಶೇಷ ಕಾರ್ಯಕ್ರಮ*2012ರಿಂದ ಇಲ್ಲಿವರೆಗೂ ದತ್ತಪ್ಪನ ಪಿತಾಶ್ರೀ ಶ್ರೀ ಪ್ರಧಾನ ಪ್ಪ ಹಾಗೂ ಮಾತೋಶ್ರೀ ಸೀತಾಬಾಯಿ ಚುಲ್ಲಾಳ ಅವರ ಸ್ಮರಣಾರ್ಥ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜೊತೆಗೆ 2012ರಿಂದ ಇಲ್ಲಿಯವರೆಗೆ ಸುಮಾರು 14 ಕಾರ್ಯಕ್ರಮಗಳನ್ನು ನಡೆಸಿ ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ ವೃದ್ಧರಿಗೆ ಬಟ್ಟೆ ವಿತರಣೆ ಸಂಗೀತ ಸಾಧಕರಿಗೆ ಸ್ವರ ಶ್ರದ್ಧಾಂಜಲಿ ಹಾಗೂ ದೇವರ ಗುಡಿಯ ಅರ್ಚಕರಿಗೆ ಸನ್ಮಾನ ಸುಮಂಗಲರಿಗೆ ಉಡಿ ತುಂಬುವ ಕಾರ್ಯಕ್ರಮ ಸಂಗೀತ ಕಾರ್ಯಕ್ರಮ ಸಂತರಿಗೆ ಗೌರವ ಸನ್ಮಾನ ಹಿರಿಯ ಜೀವಿಗಳಿಗೆ ಊರುಗೋಲು ವಿತರಣೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ. ಮತ್ತು ವಿಕಲಚೇತನರಿಗೆ ಸಂಗೀತ ಕಲಾವಿದರಿಗೆ ವಿಶೇಷ ಸಾಧನೆಗೈದ ಮಹಿಳೆಯರಿಗೆ ಮಹನೀಯರಿಗೆ ಗೌರವ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತಾ ತಂದೆ ತಾಯಿಗಳ ಸೇವೆಯನ್ನು ಈ ಸಮಾಜದಲ್ಲಿ ವಿಶಿಷ್ಟವಾಗಿ ಆಚರಣೆ ಮಾಡುತ್ತಿದ್ದಾರೆ.

ಕಡುಬಡತನ ಲೆಕ್ಕಿಸದೆ ತಮಗೆ ಬರುವ ಅಂಗವಿಕಲರ ವೇತನದಲ್ಲಿ ಹಣ ಕೂಡಿಟ್ಟು ತಾವು ಕೂಲಿ ಮಾಡಿ ದುಡಿಯುವ ಅಲ್ಪ ಸ್ವಲ್ಪ ಹಣದಲ್ಲಿ ಸದಾಕಾಲ ಸರ್ವರಿಗೆ ಸನ್ಮಂಗಳವಾಗಲಿ ಎನ್ನುವ ಮನೋಭಾವದಿಂದ ಸಮಾಜ ಸೇವೆಗಾಗಿ ಸದಾ ಮಿಡಿಯುತ್ತಿರುವ ದತ್ತಪ್ಪ ಚಿಲ್ಲಾಳನ ನಂತಹ ವ್ಯಕ್ತಿಗಳು ಇವತ್ತಿನ ಸಮಾಜದಲ್ಲಿ ಸಿಗುವುದು ಅಪರೂಪ *ಅಂಗವಿಕಲರ ವೇತನದಲ್ಲಿ ಬರುವ ಹಣದಿಂದ ಅನಾಥಾಶ್ರಮಕ್ಕೆ ಅಲ್ಪ ಕಾಣಿಕೆ*ಪ್ರತಿ ತಿಂಗಳ ಅಂಗವಿಕಲರ ವೇತನದಲ್ಲಿ ಬರುವ ಹಣದಲ್ಲಿ ಸ್ವಲ್ಪ ಭಾಗವನ್ನು ಕೂಡಿಟ್ಟು ಮೂರು ತಿಂಗಳಿಗೊಮ್ಮೆ ವೃದ್ಧಾಶ್ರಮಗೆ ತೆರಳಿ ಅಲ್ಲಿರುವ ವೃದ್ಧರಿಗೆ ತಮ್ಮ ಅಲ್ಪ ಕಾಣಿಕೆಯ ಸೇವೆ ಸಲ್ಲಿಸಿ ಅಲ್ಲಿರುವ ವೃದ್ಧರ ಆಶೀರ್ವಾದ ಪಡೆದುಕೊಂಡು ನಮ್ಮ ತಂದೆ ತಾಯಿಗಳು ಇವತ್ತು ಜೀವಂತವಾಗಿಲ್ಲ ತಂದೆ ತಾಯಿಗಳ ಪ್ರೀತಿಯನ್ನು ನಿಮ್ಮಲ್ಲಿಯೇ ಕಾಣುತ್ತೇನೆ ಎಂದು ನಂಬಿದ್ದಾರೆತಾನು ದುಡಿಯುವ ಸ್ವಲ್ಪ ಆದಾಯದಲ್ಲಿಯೇ ಸಮಾಜಕ್ಕೆ ವಿನಿಯೋಗಿಸಬೇಕು ಎನ್ನುವ ದೂರ ದೃಷ್ಟಿಯಿಂದ ತನ್ನ ವೇತನದಲ್ಲಿ ಬರುವ ಸ್ವಲ್ಪ ಹಣ ಮತ್ತು ದುಡಿಕೆಯಿಂದ ಬರುವ ಸ್ವಲ್ಪ ಹಣವನ್ನು ಕೂಡಿಟ್ಟು ಪ್ರತಿ ಮೂರು ತಿಂಗಳಿಗೊಮ್ಮೆ ಅನಾಥಾಶ್ರಮಗಳಿಗೆ ಹೋಗಿ ಅಲ್ಲಿರುವ ಅನಾಥರಿಗೆ ತನ್ನ ಅಲ್ಪ ಕಾಣಿಕೆಯನ್ನು ಸಲ್ಲಿಸುವ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾನೆ ತಾನು ಅಂಗವಿಕಲನಾಗಿದ್ದರು ಭೂಮಿಗೆ ಬಂದ ಮೇಲೆ ಏನನ್ನಾದರೂ ಕಾಣಿಕೆ ರೂಪದಲ್ಲಿ ನೀಡಬೇಕು ಎನ್ನುವ ಅಚಲವಾದ ನಂಬಿಕೆ ವಿಶ್ವಾಸದಿಂದ ತಾನು ಬಡತನದಲ್ಲಿ ಇದ್ದರೂ ತನ್ನಕ್ಕಿಂತ ಬಡತನದಿಂದ ಬೆಂದು ನೊಂದಿರುವ ಜನಗಳು ಸುಖವಾಗಿ ಇರಬೇಕು ಎನ್ನುವ ಮಹಾದಾಶೆ ಹೊಂದಿದ ದತ್ತಪ್ಪ ಇಂತಹ ಕಾಯಕಗಳನ್ನು ಮಾಡುವುದರ ಮೂಲಕ ನಾನು ನೆಮ್ಮದಿ ಕಾಣುತ್ತೇನೆ ಎಂದು ಹೇಳುತ್ತಾನೆಬಡತನ ಕುಟುಂಬದಿಂದ ಬಂದರು, ಬಡತನವನ್ನು ಮೆಟ್ಟಿ ನಿಂತು ದುಡಿದು ನನಗಂತೂ ಮಕ್ಕಳು ಇಲ್ಲ ಸಮಾಜವೇ ನನ್ನ ಕುಟುಂಬ ಎಂದು ನಂಬಿರುವ ನನಗೆ ಸಮಾಜಕ್ಕೆ ನಾನೇನಾದರೂ ಅಲ್ಪ ಕೊಡುಗೆ ಕೊಡಬೇಕೆಂಬ ಹಂಬಲದೊಂದಿಗೆ ಗುಮಾಸ್ತ ಕೆಲಸದಿಂದ ಹಿಡಿದು ಎಲ್ಲಾ ಕೆಲಸ ಮಾಡಿದರು ನನಗೆ ಕೈ ತುಂಬಾ ಸಂಬಳ ಅಥವಾ ಹಣ ಸಿಗಲೇ ಇಲ್ಲ ನಾನು ಮೊದಲೇ ಅಂಗವಿಕಲನಾಗಿರುವುದರಿಂದ ನನಗೆ ಸಂಪೂರ್ಣವಾದ ಎಲ್ಲಾ ಕೆಲಸ ಮಾಡಲು ಸಾಧ್ಯವಾಗದಿದ್ದರಿಂದ ನಾನು ಬರುವ ಅಲ್ಪ ಹಣದಲ್ಲಿಯೇ ಸಮಾಜ ಸೇವೆ ಮಾಡಿ ಸಮಾಜದ ಹಂಬಲಕ್ಕಾಗಿ ದುಡಿಯಬೇಕು ಎನ್ನುವ ಛಲ ಹೊಂದಿದ್ದಾರೆ *ವಿಚಿತ್ರ ಮತ್ತು ವಿಶೇಷ ಗತಿಸಿಹೋದ ಇತಿಹಾಸ ಸಂಗ್ರಹ.*ಪ್ರಳಯ ಭೂಕಂಪ ಸುನಾಮಿ ಕೊಳವೆಬಾವಿ ದುರ್ಘಟನೆಗಳ ಅಂಗವಿಕಲರ ,ಕ್ರೀಡೆಗಳ ,ಗದುಗಿನ ಗವಾಯಿಗಳ, ಇಳಕಲ್ಲ ವಿಜಯ ಮಾಂತೇಶ್ವರ ಮಠ ಹಾಗೂ ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳ, ದೇವಸ್ಥಾನಗಳ ಸಿದ್ದೇಶ್ವರ ಶ್ರೀಗಳ ಇತಿಹಾಸ ಸ್ಥಳೀಯ ಅಭಿವೃದ್ಧಿ ಡಾ/ರಾಜಕುಮಾರ್ ವಿಶ್ವ ,ದೇಶ, ವಿದೇಶ, ಸಿದ್ದೇಶ್ವರ ಶ್ರೀಗಳ ಪ್ರವಚನಗಳು ಮತ್ತು ವಿದೇಶಿ ಕರೆನ್ಸಿಗಳು ಇಳಕಲ್ ಸೀರೆಗಳು ಹೀಗೆ ಇಂತಹ ಅನೇಕ ವಿಶೇಷ ಮಾಹಿತಿ ಇರುವ ಸುದ್ದಿಗಳನ್ನು ಸುಮಾರು ಎರಡು ನೂರು ವರ್ಷಗಳ ಹಿಂದಿನ ಇತಿಹಾಸ ಇವರಲ್ಲಿ ಸಿಗುತ್ತದೆ ಇಷ್ಟೆಲ್ಲ ಮಾಹಿತಿ ಪತ್ರಿಕೆಯಲ್ಲಿ ಸಂಗ್ರಹಿಸಿ ಅವುಗಳನ್ನು ಲ್ಯಾಮಿನೇಷನ್ ಮಾಡಿಸಿ ಸಂಗ್ರಹಿಸಿಡುವಂತ ವಿಶೇಷ ಹವ್ಯಾಸವನ್ನು ಮೈಗೂಡಿಸಿಕೊಂಡು ಅವುಗಳನ್ನು ಸಂಗ್ರಹಿಸಿಟ್ಟಿರುತ್ತಾರೆ ಸುಮಾರು 5000ಕ್ಕೂ ಹೆಚ್ಚು ಇಂತಹ ವಿಶೇಷ ಮತ್ತು ಪ್ರಮುಖ ಸುದ್ದಿಗಳನ್ನು ಸಂಗ್ರಹಿಸಿ ಇಟ್ಟಿರುವುದು ಮುಂದಿನ ಇತಿಹಾಸಕಾರರಿಗೆ ಸಹಾಯಕವಾಗಲಿದೆರಾಜ್ಯದ ಉತ್ತರ ಕರ್ನಾಟಕ ಹಾಗೂ ಬಾಗಲಕೋಟೆ ಜಿಲ್ಲೆಯ ಪ್ರಮುಖ ಸ್ವತಂತ್ರ ಹೋರಾಟಗಾರರ ಹಾಗೂ ರಾಜಕೀಯ ನಾಯಕರುಗಳ ಇತಿಹಾಸವನ್ನು ಸಂಗ್ರಹಿಸಿಟ್ಟಿರುವ ದತ್ತಪ್ಪನವರು ಯಾವುದಾದರೂ ಇತಿಹಾಸ ತಿಳಿಯಬೇಕಾದರೆ ಜಿಲ್ಲೆಯಲ್ಲಿ ಎಲ್ಲರೂ ದತ್ತಪ್ಪನ ಹತ್ತಿರ ಓಡೋಡಿ ಬರುತ್ತಾರೆ ಇಂಥಹ ವಿಭಿನ್ನ ಮತ್ತು ವಿಶೇಷವಾದ ಹವ್ಯಾಸದ ಮೂಲಕ ಇತಿಹಾಸ ಸಂಗ್ರಹಿಸುವ ದತ್ತಪ್ಪ ಎಂದು ಖ್ಯಾತಿ ಪಡೆದುಕೊಂಡಿದ್ದಾರೆ1980 ರಿಂದ ಈ ರೀತಿ ದಿನಪತ್ರಿಕೆಗಳಲ್ಲಿ ಬರುವ ಇತಿಹಾಸ ಸಂಗ್ರಹಿಸಿ ಇಟ್ಟು ತನ್ನ ಇಡೀ ಮನೆಯನ್ನೇ ಇತಿಹಾಸದ ಕೋಣೆಯಾಗಿ ಹಾಗೂ ಗ್ರಂಥಾಲಯವನ್ನಾಗಿ ನಿರ್ಮಿಸಿದ್ದಾರೆ.ಮೂಲತಃ ನೈಕಾರಿಕೆ ಕುಟುಂಬದಿಂದ ಬಂದರು ಅದು ಯಾಕೋ ಏನೋ ನೇಕಾರಿಕೆ ಯಲ್ಲಿ ದತ್ತಪ್ಪನಿಗೆ ಆಸಕ್ತಿ ಬರಲೇ ಇಲ್ಲ ಇಗಂತ ಉಂಡು ತಿರುಗಾಡುವುದನ್ನು ರೂಢಿಸಿಕೊಳ್ಳಲಿಲ್ಲ ಬಿಡಿ ಅಂಗಡಿ ಇಟ್ಟರು ಸೀರೆ ಅಂಗಡಿಗಳಲ್ಲಿ 8 ವರ್ಷ ಗುಮಾಸ್ತನಾಗಿ ದುಡಿದರು ಗ್ರನೆಟ್ ಕಂಪನಿ ಹೊಂದರಲ್ಲಿ ಕೆಲಸಕ್ಕೆ ಸೇರಿದ್ದರು ಕಂಪನಿ ಬಂದಾಗಿದ್ದರಿಂದ ಅಲ್ಲಿಯೂ ಸೂಕ್ತವಾದ ಉದ್ಯೋಗ ಸಿಗದೇ ಇದ್ದಾಗ ನಿರಾಶೆಯಾದರೂ ತಮ್ಮ ಉತ್ಸಾಹವನ್ನು ಕಡಿಮೆ ಮಾಡಿಕೊಳ್ಳಲಿಲ್ಲ ಹುಟ್ಟಿನಿಂದ ಅಂಗವಿಕಲತೆ ದತ್ತಪ್ಪನವರಿಗೆ ವಿಧಿ ಆಟ ಎನ್ನುವಂತೆ ಅಪಘಾತವಾಗಿ ಬಲಗಾಲಿಗೆ ಪೆಟ್ಟಾಯಿತು ಇದರಿಂದ ಆಘಾತಗೊಳ್ಳದೆ ಚೇತರಿಸಿಕೊಂಡು ಮತ್ತೆ ಸಮಾಜ ಸೇವೆ ಸನ್ನದ್ಧರಾದರು ಇಳಕಲ್ ನಗರದಲ್ಲಿ 2003 ರಲ್ಲಿ ಆಶಾದೀಪ ಎಂಬ ಅಂಗವಿಕಲರ ಸರ್ವಾಭಿವೃದ್ಧಿ ಸೇವಾ ಸಂಸ್ಥೆ ಸ್ಥಾಪಿಸಿ ಬಡ ಅಂಗವಿಕಲರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಪರಿಹಾರ ಪಂಡಿನಲ್ಲಿ ಸಂಗ್ರಹಗೊಂಡ ಹಣ ಮತ್ತು ವ್ಯಾಪಾರದಿಂದ ಬಂದ ಲಾಭದಲ್ಲಿ ಅರ್ಧ ಹಣ ತೆಗೆದಿಟ್ಟು ಬಡವರ ಸಹಾಯಕ್ಕೆ ಉಪಯೋಗಿಸುತ್ತಾರೆ ತಾನು ಬಡತನದಲ್ಲಿ ಇದ್ದರೂ ಸಮಾಜದಲ್ಲಿ ನೊಂದಿರುವವರಿಗೆ ರಕ್ಷಣೆಯಾಗಿ ನಿಲ್ಲುವ ದತ್ತಪ್ಪನವರು ಇಲಕಲ್ಲ ನಗರದ ಆಪತ್ಬಾಂಧವರಾಗಿ ಕೆಲಸ ಮಾಡುತ್ತಾರೆ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡು ಮನೆ ಸುಟ್ಟು ಕರುಕಲಾದಾಗ ಗುರುಪಾದಪ್ಪ ಬಡಿಗೇರ ಅವರ ಕುಟುಂಬಕ್ಕೆ ಕೈಲಾದಷ್ಟು ಹಣದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರೂ ಪ್ರಕೃತಿಯು ಕೋಪದಿಂದ ಅಗತ್ಯಕ್ಕೆ ಒಳಗಾಗುವ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೂ ತಮ್ಮ ಕೈಲಾದಷ್ಟು ಸಹಾಯ ಮಾಡುವ ಹವ್ಯಾಸ ರೂಡಿಸಿಕೊಂಡಿದ್ದಾರೆ ಇಂತಹ ವಿಶಿಷ್ಟ ಸೇವೆಗಳಿಂದಲೇದತ್ತಪ್ಪನವರ ಹವ್ಯಾಸವು ಅಷ್ಟೇ ಮಾದರಿಯದ್ದಾಗಿದ್ದು ಕನ್ನಡ ದಿನಪತ್ರಿಕೆ ವಾರಪತ್ರಿಕೆಗಳಲ್ಲಿ ಪ್ರಕಟಗೊಂಡ ವಿಶೇಷ ಸುದ್ದಿ ಚಿತ್ರಲೇಖನ ಮಾಹಿತಿಗಳನ್ನು ಸಂಗ್ರಹಿಸಿ ಪುಸ್ತಕಗಳಲ್ಲಿ ಅಂಟಿಸಿ ಜೋಪಾನವಾಗಿ ಇಟ್ಟಿದ್ದಾರೆ ಮನೆ ಒಳಗೆ ಪುಟ್ಟ ಅಂಗಡಿ ಇಟ್ಟಿರುವ ದತ್ತಪ್ಪ ಅದನ್ನೊಂದು ಚಿಕ್ಕ ಗ್ರಂಥಾಲಯವನ್ನಾಗಿಯೂ ಮಾರ್ಪಡಿಸಿದ್ದಾರೆಅಂಗವಿಕಲರ ದಿನಾಚರಣೆ ಸಂದರ್ಭ ದತ್ತಪ ದಂಪತಿಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನವು ನಡೆದಿದೆ ತಾವಾಯಿತು ತಮ್ಮ ಸಂಸಾರವಾಯಿತು ಎಂದಿರುವ ಹಿಂದಿನ ದಿನಗಳಲ್ಲಿ ಅಂಗವಿಕಲತೆ ಇದ್ದರೂ ಇನ್ನೊಬ್ಬರ ನೆರೆ ನೆರವನ್ನು ನಿರೀಕ್ಷಿಸದೆ ತಮ್ಮ ಕೈಲಾದ ಮಟ್ಟಿಗೆ ನೋಂದವರಿಗೆ ಸಹಾಯ ಮಾಡುವ ದತ್ತಪ್ಪನವರ ಕಾರ್ಯ ಶ್ಲಾಘನೀಯವೇ ಸರಿಇಷ್ಟೆಲ್ಲ ಸಮಾಜಕ್ಕಾಗಿ ಸದಾ ಮಿಡಿಯುತ್ತಾ ಸಮಾಜ ಸೇವೆಯೇ ನನ್ನ ಸೇವೆ ಎಂದು ನಂಬಿರುವ ದತ್ತಪ್ಪನಿಗೆ ಸಂಘ ಸಂಸ್ಥೆಗಳಾಗಲಿ ಸರ್ಕಾರವಾಗಲಿ ಅಲ್ಪ ಸಹಾಯ ಮಾಡಿದರೆ ಸಮಾಜ ಸೇವೆ ಇನ್ನಷ್ಟು ಗುರುತರವಾಗಿ ಮಾಡುತ್ತೇನೆ ಎನ್ನುವ ಆಶಾಭಾವದ ನಿರೀಕ್ಷೆಯಲ್ಲಿದ್ದಾರೆ.

*****

ಜಗದೀಶ.ಎಸ್.ಗಿರಡ್ಡಿ.

ಲೇಖಕರು. ಗೊರಬಾಳ

9902470856.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button