ಮೋದಿ ಸರ್ಕಾರದ ಯೋಜನೆಗಳು ಪ್ರತಿ ಮನೆ ಮನೆಗೆ ತಿಳಿಸಿರಿ.

ಸಿಂದಗಿ ಏಪ್ರಿಲ್.12

ವಿಜಯಪುರ ಲೋಕಸಭೆಯ ಚುನಾವಣೆಯ ಪ್ರಚಾರ ಪ್ರಯುಕ್ತವಾಗಿ ಇಂದು ಸಿಂದಗಿ ಮಂಡಲದಲ್ಲಿ. ಶಕ್ತಿ ಕೇಂದ್ರದ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಂದಗಿ ಮಂಡಲದ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಸಂತೋಷ್ ಗೌಡ ಪಾಟೀಲ್ (ಡಂಬಲ್) ಅವರು ಬರುವ ಲೋಕಸಭೆಯ ಚುನಾವಣೆಯ ಪ್ರಯುಕ್ತ ಬೂತ್ ಅಧ್ಯಕ್ಷರು ಪೇಜ್ ಪ್ರಮುಖರು ಶಕ್ತಿಕೇಂದ್ರದ ಪ್ರಮುಖರು ಕೂಡಿ ಕೊಂಡು ನಮ್ಮ ಅಭ್ಯರ್ಥಿಯಾದ ರಮೇಶ್ ಜಿಗಜಿಣಗಿ ಅವರಿಗೆ ಸಿಂದಗಿ ಮತ ಕ್ಷೇತ್ರದಿಂದ ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಬೇಕೆಂದು ಹೇಳಿದರು. ಸಮಾರಂಭದ ನೇತೃತ್ವವನ್ನು ಮಾಜಿ ಶಾಸಕರಾದ ರಮೇಶ್ ಬಾ ಭೂಸನೂರ ಸಾಹೇಬರು ಮಾತನಾಡಿ ನರೇಂದ್ರ ಮೋದಿ ಅವರ ಯೋಜನೆಗಳನ್ನ ತಿಳಿಸಿ ಹೇಳುವುದರ ಮೂಲಕ ಕಾಂಗ್ರೆಸಿನ 5 ಗ್ಯಾರೆಂಟಿಗಳನ್ನು ಮೀರಿ ನಮ್ಮ ಮೋದಿ ಸರ್ಕಾರದ ಯೋಜನೆಗಳನ್ನು ಅತ್ಯಂತ ಪ್ರಮುಖವಾಗಿ ನಿವಾರಿಸಿದ್ದಾರೆ. ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯಾದ ರಮೇಶ್ ಜಿಗಜಿಣಗಿ ಅವರ ಗೆಲುವಿಗೆ ಎಲ್ಲಾ ಕಾರ್ಯಕರ್ತರು ಪಣ ತೊಡಬೇಕೆಂದು ಕರೆ ಕೊಟ್ಟರು. ಹಾಗೂ ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿಯಾದ ಪ್ರಕಾಶ ಅಕ್ಕಲಕೋಟ ಹಾಗೂ ಚುನಾವಣೆಯ ಪ್ರಭಾರಿಗಳಾದ ಅನಿಲ್ ಜಮಾದಾರ್ ಶಕ್ತಿ ಕೇಂದ್ರದ ಪ್ರಮುಖರಿಗೆ ಬೈಠಕ್ಕನ್ನು ತೆಗೆದು ಕೊಳ್ಳುವುದರ ಮೂಲಕ ಕೇಂದ್ರ ಸರಕಾರದ ಹಾಗೂ ಯಡಿಯೂರಪ್ಪ ನವರ ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರ ಮನೆಗೆ ಹೋಗಿ ತಿಳಿಸಿ ಹೇಳುವುದರ ಮೂಲಕ ಬಿಜೆಪಿ ಪಕ್ಷಕ್ಕೆ ಮತವನ್ನ ಹಾಕಿಸುವಂತಹ ಕೆಲಸ ಮಾಡಬೇಕೆಂದು ತಿಳಿಸಿದರು. ಸಿಂದಗಿ ಮಂಡಲದ ಪ್ರಧಾನಿ ಕಾರ್ಯದರ್ಶಿಗಳಾದ ಗುರು ತಳವಾರ್, ಸಿದ್ದರಾಮ ಆನಗೊಂಡ್, ಯುವ ಮೋರ್ಚಾ ಅಧ್ಯಕ್ಷರಾದ ಬಸವರಾಜ ಹೂಗಾರ್, ನೀಲಮ್ಮ ಯಡ್ರಾಮಿ, ಎಂ ಎಸ್ ಮಠ ಶಿವಕುಮಾರ್ ಬಿರಾದರ್, ಅನುಸಿಯಾ ಪರಗೊಂಡ, ಸಿದ್ದಲಿಂಗಯ್ಯ ಹಿರೇಮಠ, ಶರಣಗೌಡ ಬಿರಾದಾರ್ ಹಾಗೂ ಶಕ್ತಿಕೇಂದ್ರದ ಪ್ರಮುಖರು ಮಹಾಶಕ್ತಿ ಕೇಂದ್ರದ ಪ್ರಮುಖರು ಭಾಗವಹಿಸಿದ್ದರು, ಹಾಗೂ ಯಂಕಂಚಿ ಹಾಗೂ ಮೋರಟಗಿ ಜಿಲ್ಲಾ ಪಂಚಾಯತ ಮಹಾ ಶಕ್ತಿ ಕೇಂದ್ರಗಳಲ್ಲಿ ೧೩,೦೪ ೨೦೨೪ ರಂದು ೧೦,೩೦ಕ್ಕೆ ಸ್ಥಳ ಗಬಸಾವಳಗಿ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಹಾಗೂ ಚಾಂದಕೋಟೆ,ಬಳಗಾನೂರ ಜಿಲ್ಲಾ ಪಂಚಾಯತ ಮಹಾ ಶಕ್ತಿ ಕೇಂದ್ರದಲ್ಲಿ,ಸಂಜೆ ೪ ಘಂಟೆಗೆ ವಿಜಯಪುರ ಲೋಕಸಭೆಯ ಬಿಜೆಪಿ ಅಭ್ಯರ್ಥಿಯಾದ ರಮೇಶ್ ಜಿಗಜಿಣಗಿ ಯವರು ಪ್ರಚಾರ ಸಭೆ ನಡೆಯಲಿದೆ ಬೂತ್ ಅಧ್ಯಕ್ಷರು, ಪೇಜ್ ಪ್ರಮುಖರು ಪಕ್ಷದ ಎಲ್ಲಾ ಕಾರ್ಯಕರ್ತರು ,ಜಿಲ್ಲಾ ಪಂಚಾಯತ ಸದಸ್ಯರು, ತಾಲ್ಲೂಕು ಪಂಚಾಯತ ಸದಸ್ಯರು ಹಾಗೂ ಪದಾಧಿಕಾರಿಗಳು, ಪಕ್ಷದ ಮುಖಂಡರು ಈ ಪ್ರಚಾರ ಸಭೆಗೆ ಆಗಮಿಸಬೇಕು ಎಂದು ತಾಲ್ಲೂಕ ಮಂಡಳದ ಅಧ್ಯಕ್ಷರಾದ ಸಂತೋಷಗೌಡ ಪಾಟೀಲ ಡಂಬಳ ಅವರು ತಿಳಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button