ಕೋಗಳಿಯಲ್ಲಿ ಸಂಭ್ರಮದ ರಥೋತ್ಸವ.
ಕೋಗಳಿ ಮಾರ್ಚ್.10
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಸಕಲ ಮಂಗಳ ವಾದ್ಯಗಳೊಂದಿಗೆ ಚಿಮ್ಮನಹಳ್ಳಿಯ ದುರ್ಗಂಬಿಕಾ ದೇವಿಯ ತೇಜಯ ವೈಭವದ ಮೆರವಣಿಗೆ ಮೂಲಕ ಬಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ದೇವಸ್ಥಾನಕ್ಕೆ ತೆರಳಿತು, ನಂತರ ನಂದೀಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆಯೊಂದಿಗೆ ಬಂದು ರಥವೇರಿತು. ಹರಿಜನ ಕೆರಿಯಿಂದ ಕಳಸದೊಂದಿಗೆ ಬಂದು ಸುಮಂಗಲಿಯರು, ಪೂಜೆ ಸಲ್ಲಿಸಿ ಆರತಿ ಬೆಳಗಿದರು, ನಂತರ ನಂದೀಶ್ವರ ಸ್ವಾಮಿಯ ಮೂರ್ತಿಯನ್ನು ರಥದಲ್ಲಿಟ್ಟು ಪಾದಗಟ್ಟಿವರೆಗೂ ರಥವು ಸಾಗಿಬಂತು, ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮಾರ್ಪಿಸಿದರು. ನಾಳೆ ಬೆಳಿಗ್ಗೆ ಸಾಮೂಹಿಕ ಮದುವೆಗಳು ಜರುಗುವವು ಎಂದು ನಂದೀಶ್ವರ ಸೇವಾ ಸಮಿತಿಯವರು ಹೇಳಿದರು ಮತ್ತು ಈ ಸಂದರ್ಭದಲ್ಲಿ ಊರಿನ ಮುಖಂಡರು ಸಾರ್ವಜನಿಕರು ಸೇರಿಕೊಂಡಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು