ಕೂಲಿ ಕಾರ್ಮಿಕರ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ – ಪಿ.ಡಿ.ಒ ನಾಯ್ಕ್.
ಚಿಕ್ಕಯರನಕೇರಿ ಮಾರ್ಚ್.16

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಯರನಕೇರಿ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಪಿಕೆಪಿಎಸ್ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಸಿಗೆ ನೀರುಣಿಸಿದರ ಮೂಲಕ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಬಳಿಕ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೋಭಾ ನಾಯಕ್, ಕೂಲಿ ಕಾರ್ಮಿಕರು ಶ್ರಮ ಜೀವಿಗಳು, ನೀವು ಹೆಚ್ಚು ಆರೋಗ್ಯದ ಕಡೆ ಗಮನ ಹರಿಸಿ, ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಿಮ್ಮಗಾಗಿಯೇ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೆಲಸ ಮಾಡುವ ಸ್ಥಳಗಳಲ್ಲಿ ಆಗಮಿಸಿ, ಆರೋಗ್ಯ ತಪಾಸಣೆ ಮಾಡುತ್ತಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಬಳಿಕ ಮಾತನಾಡಿದ ಪಿಕೆಪಿಎಸ್ ಅಧ್ಯಕ್ಷ ಸೋಮಶೇಖರ್ ಬಲಕುಂದಿ, ಆರೋಗ್ಯವೇ ಮಹಾಭಾಗ್ಯ, ಕೂಲಿ ಕಾರ್ಮಿಕರು ಆರೋಗ್ಯ ಅಧಿಕಾರಿಗಳು ನೀಡುವ ಸಲಹೆಯನ್ನು ಪ್ರತಿಯೊಬ್ಬರು ಪಾಲಿಸಿ ಆರೋಗ್ಯವಾಗಿರಿ ಎಂದು ತಿಳಿಸಿದರು.ಇನ್ನು ಐಸಿಟಿಸಿ ಕೌನ್ಸಿಲರ್ ಪ್ರವೀಣ ಚೂರಿ ಮಾತನಾಡಿ, ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ, ನೀವು ಇರೋ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಜೊತೆಗೆ ನಿಯಮಿತ ತಪಾಸಣೆ ಮಾಡಿಸಿಕೊಳ್ಳವುದನ್ನು ಮರಿಯಬೇಡಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಸೋಮಶೇಖರ್ ಬಲಕುಂದಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾ ನಾಯಕ್, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಆರೋಗ್ಯ ಅಧಿಕಾರಿ ಭಾಷಾ ಹವಲ್ದಾರ್, ಐಸಿಟಿಸಿ ಕೌನ್ಸಿಲರ್ ಪ್ರವೀಣ ಚೂರಿ, ಸದಸ್ಯ ಯರಗೋದಪ್ಪ ಗರೇಬಾಳ, ಎಸ್ ಡಿ ಎಂ ಸಿ ಅಧ್ಯಕ್ಷ ಯಮನೂರ ನರಸಪ್ಪನವರ, ಶಾಲಾ ಮುಖ್ಯ ಗುರುಗಳು ಕಿರಣ್ ವಜ್ರಮಟ್ಟಿ, ಬಿಲ್ ಕಲೆಕ್ಟರ್ ರಾಜು ಬೇವೂರ, ವಾಟರ್ ಮನ್ ಸಂತೋಷ್ ತಳವಾರ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಕಾಯಕ ಬಂಧುಗಳು ಉಪಸ್ಥಿತರಿದ್ದರು.