“ಅಂತರ್ಯಾಮಿ” ಚಿತ್ರದ “ಹಕ್ಕಿ ನಾನು ಹಗಲಿನಲ್ಲಿ” – ಹಾಡು ಬಿಡುಗಡೆ.

ಬೆಂಗಳೂರು ಆ.17

ಗುರು ರೇಣುಕಾ ಪ್ರೊಡಕ್ಷನ್ ತುಮಕೂರ ಅವರ “ಅಂತರ್ಯಾಮಿ” ಕನ್ನಡ ಚಲನ ಚಿತ್ರದ “ಹಕ್ಕಿ ನಾನು ಹಗಲಿನಲ್ಲಿ” ಎರಡನೇ ಹಾಡನ್ನು ಜನಪ್ರಿಯ ಚಲನ ಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಗೀತ ರಚನೆ ಕಾರರಾದ ಸಿಂಪಲ್‌ಸುನಿ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದರು.ಸಿಂಪಲ್ ಸುನಿ ಅವರ ಆಫೀಸಿನಲ್ಲಿ ಲ್ಯಾಪಿಯಲ್ಲಿ ಬಟನ್ ಒತ್ತುವ ಮೂಲಕ ಬಿಡುಗಡೆ ಮಾಡಿ, ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯ ಚಿತ್ರಗಳು ನಿಮ್ಮಿಂದ ನಿರ್ಮಾಣ ಆಗಲಿ ಎಂದರು. ಈ ಮೊದಲು ಚಿತ್ರದ ಶೀರ್ಷಿಕೆಯನ್ನು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಯವರು ಅನಾವರಣ ಗೊಳಿಸಿದ್ದರು, ಚಿತ್ರದ ಫಸ್ಟ್ ಲುಕ್ ಅನ್ನು ಮಾನ್ಯ ಗೃಹಮಂತ್ರಿ ಜಿ.ಪರಮೇಶ್ವರ್‌ ರವರು ಅನಾವರಣ ಮಾಡಿದ್ದರು. ಎಂದು ನಿರ್ಮಾಪಕ ನವೀನ್ ಎನ್.ಜಿ ಸಿಂಪಲ್ ಸುನಿಗೆ ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಧನಂಜಯ್, ನಾಯಕ ಪ್ರಣವ್, ನಾಯಕಿ ಮೊಹಿರಾ ಚಾರ್ಯ ಸಾಹಿತಿ ವಿನಯ್ ಕಾವ್ಯ ಕಾಂತಿ ಮತ್ತು ಅರವಿಂದ ಶೇಕ್ ಚಿತ್ರ ತಂಡದವರು ಉಪಸ್ಥಿತರಿದ್ದರು.

ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಈ ಚಿತ್ರದಲ್ಲಿ ನಾಯಕರಾಗಿ ಪ್ರಣವ್, ನಾಯಕಿಯಾಗಿ ಮೋಹಿರ ಆಚಾರ್ಯ, ಮಂಡ್ಯ ಸಿದ್ದು, ಕಾಮಿಡಿ ಕಿಲಾಡಿ ಉದಯ್, ಕಿಟ್ಟಿ, ಮಂಜಿವಾ, ಮುಗಿಲನ್, ಬೇಬಿ ಹಾನ್ಸಿ, ಬಾಲಕೃಷ್ಣ ಬರಗೂರು, ಹೇಮಾ ಮಾಲಿನಿ, ರೇಣುಕಾಂಬ, ರುದ್ರ ಮುನಿ, ಯೋಗೇಶ ಮೊದಲಾದವರಿದ್ದಾರೆ. ಛಾಯಾಗ್ರಹಣ ಎಸ್.ಬಾಲು, ವಿನಯ್ ಕಾವ್ಯ ಕಾಂತಿಯವರ ಸಾಹಿತ್ಯ, ನಾಲ್ಕು ಹಾಡುಗಳಿದ್ದು, ಪೃಥ್ವಿ ಭಟ್, ಮೇಘನಾ ಕುಲಕರ್ಣಿ, ದೇಸಿ ಮೋಹನ್ ರವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಸಂಗೀತ ದೇಸಿ ಮೋಹನ್ ಸಂಕಲನ ಅರವಿಂದ್ ರಾಜ್, ನೃತ್ಯ ನಿರ್ದೇಶನ ಬಾಲು ಮಾಸ್ಟರ್, ತಾಂತ್ರಿಕ ಸಲಹೆ ಶ್ರೀಕಾಂತ್ ಶ್ರಾಫ್, ಡಿಆಯ್ ಚೆನೈ, ಬೆಂಗಳೂರ, ಪಿ.ಆರ್.ಓ ಎಂಜೆಎಸ್‌ಪಿಆರ್, ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ ಅವರದಿದೆ. ನಿರ್ದೇಶನ ತಂಡದಲ್ಲಿ ರವಿ ಶಂಕರ್‌ ನಾಗ್, ಶರತ್ ಘಾಟಿ, ಮಂಜುನಾಥ್ ಹೊಸ ರಂಗಾಪುರ, ಮುಕುಂದ, ರಾಣಾ, ವಸಂತ್ ಇದ್ದಾರೆ. ನವೀನ್ ಎನ್.ಜಿ ನಿರ್ಮಾಪಕರಾಗಿರುವ ಈ ಚಿತ್ರವನ್ನು ಕೆ. ಧನಂಜಯ ಕಥೆ, ಚಿತ್ರ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

*****

ಡಾ.ಪ್ರಭು ಗಂಜಿಹಾಳ

ಮೊ:೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button