ಚಿನ್ನೂಲಾದ್ರಿ ಸಾಹಿತ್ಯ ವೇದಿಕೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ.

ಚಿತ್ರದುರ್ಗ ಮಾರ್ಚ್.17

ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಪತ್ರಿಕಾ ಭವನದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಹಾಗೂ ಶ್ರೀ ಗಾನಯೋಗಿ ಸಂಗೀತ ಬಳಗ ಚಿತ್ರದುರ್ಗ ಇವರ ಸಹಯೋಗ ದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಉಪನ್ಯಾಸ,ತಿಂಗಳ ವಿಶೇಷ ವ್ಯಕ್ತಿ ಪರಿಚಯ ಮತ್ತು ಕವನ ವಾಚನ ಹಾಗೂ ಗೀತಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಶ್ರೀಮತಿ ಸವಿತಾ ಸಂಪತ್ ರವರು ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಚಿತ್ರದುರ್ಗ ಜಿಲ್ಲೆಯ ಖ್ಯಾತ ವಕೀಲರು ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರು ಆದ ಶ್ರೀಯುತ ಬಿ.ಕೆ ರಹಮತ್ ಉಲ್ಲಾ ರವರು ಹಾಗೂ ಇನ್ನಿತರೆ ವೇದಿಕೆ ಮೇಲಿರುವ ಎಲ್ಲ ಗಣ್ಯ ಮಾನ್ಯರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಾಹಿತ್ಯ ವೇದಿಕೆಯ ಅಧ್ಯಕ್ಷರು ಆದ ಶ್ರೀಯುತ ಡಾ. ಶಫಿಉಲ್ಲಾ ಎಸ್.ಏಚ್ ಇವರು ಪ್ರಾಸ್ತಾವಿಕ ನುಡಿಯಲ್ಲಿ ಸಂಸ್ಥೆಯ ನಡೆದು ಬಂದು ಹಾದಿ ಮತ್ತು ಬೆಳೆವಣಿಗೆ ಸಾಧನೆಯ ಬಗ್ಗೆ ತಿಳಿಸಿದರು ಮತ್ತು ನಮ್ಮ ಸಾಹಿತ್ಯ ವೇದಿಕೆಯು ಅನೇಕ ರೀತಿಯ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ಬರಹಗಾರರಿಗೆ,ಕವಿಗಳಿಗೆ, ಸಾಹಿತಿಗಳಿಗೆ, ಚಿಂತಕರಿಗೆ, ಸ್ಫೂರ್ತಿಯ ಸೆಲೆಯಾಗಿ ಪ್ರಾಮಾಣಿಕವಾಗಿ ಪ್ರೋತ್ಸಾಹಿಸಿ ಅವರಿಗೆ ಬೆನ್ನೆಲುಬಾಗಿ ನಿಂತು ಅವರನ್ನು ಸಮಾಜದ ಹಾಗೂ ರಾಜ್ಯದ ಜನರಿಗೆ ಪರಿಚಯಿಸಿ ಮುಖ್ಯವಾಹಿನಿಗೆ ತರಲು ನಮ್ಮ ಸಾಹಿತ್ಯ ವೇದಿಕೆಯು ಶ್ರಮಿಸುತ್ತಿದೆ, ಅಲ್ಲದೆ ಈ ಕನ್ನಡ ನಾಡಿನ ಕಲೆ ಮತ್ತು ಸಂಸ್ಕೃತಿ, ಕನ್ನಡ, ನಾಡು ನುಡಿ ನೆಲ, ಜಲ, ಸಂರಕ್ಷಣೆ ಮತ್ತು ಶ್ರೇಯೋಭಿೃದ್ಧಿಗಾಗಿ ನಮ್ಮ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಗಾನಯೋಗಿ ಸಂಗೀತ ಬಳಗದ ಉಪ ಸಮಿತಿ ಅಧ್ಯಕ್ಷರು ಆದ ಶ್ರೀಮತಿ ಸುಮಾ ರಾಜಶೇಖರ್ ಮಾತನಾಡಿ ಇತ್ತೀಚಿನ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಸಾಧನೆಯನ್ನು ಮಾಡಿ ” ಹೆಣ್ಣು ಅಬಲೆಯಲ್ಲ ಸಬಲೆ” ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಈ ಸಮಾಜದಲ್ಲಿ ತನ್ನದೇ ಆದ ಎಲ್ಲ ರಂಗಗಳಲ್ಲಿ ಸಾಧಿಸಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ಈ ಸಮಾಜದಲ್ಲಿ ಮಾದರಿಯಾಗಿ ಜೀವಿಸುತ್ತಿದ್ದಾಳೆ ಎಂದು ತಿಳಿಸಿದರು.

ನಂತರ ಉದ್ಘಾಟಕರಾಗಿ ಆಗಮಿಸಿದ ಶ್ರೀಯುತ ಬಿ.ಕೆ ರಹಮತ್ ಉಲ್ಲಾರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ಅನೇಕ ರೀತಿಯ ವಿಶೇಷ ಕಾನುಗಳನ್ನು ರೂಪಿಸಿ ವಿಶೇಷ ಸ್ಥಾನಮಾನ ನೀಡಿದರೂ ಈ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರ ಪೋಕ್ಸೋ ಕೇಸುಗಳು, ದೌರ್ಜನ್ಯಗಳು, ಅತ್ಯಾಚಾರಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಹಾಗೂ ಕಠಿಣ ಕಾನೂನುಗಳನ್ನು ತಿದ್ದುಪಡಿ ತರುವ ಮೂಲಕ ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂದು ಕಳವಳ ವ್ಯಕ್ತಪಡಿಸಿದರು.ನಂತರ ತಿಂಗಳ ವಿಶೇಷ ವ್ಯಕ್ತಿಯಾಗಿ ಆಗಮಿಸಿದ ಶ್ರೀಮತಿ ಮಂಜುಳಾ.ಎಸ್ ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಸಮಾಜ ಸೇವಕಿ ಇವರ ಪರಿಚಯವನ್ನು ಶ್ರೀಮತಿ ಶೋಭಾ ಮಲ್ಲಿಕಾರ್ಜುನ್ ರವರು ಎಲ್ಲ ಗಣ್ಯ ಮಾನ್ಯರಿಗೆ ಹಾಗೂ ಕಾರ್ಯಕ್ರಮಕ್ಕೆ ಪರಿಚಯಿಸಿದರು.ನಂತರ ಮಂಜುಳಾ.ಎಸ್ ರವರು ಮಾತನಾಡಿ ಹೆಣ್ಣು ಒಂದು ಉನ್ನತ ಸ್ಥಾನದಲ್ಲಿ ಇರಬೇಕಾದರೆ ಅನೇಕ ರೀತಿಯ ಕಷ್ಟಗಳು, ಸಮಸ್ಯೆಗಳು ಎದುರಾಗುತ್ತವೆ ಅವುಗಳಿಗೆ ಜಗ್ಗದೆ,ಕುಗ್ಗದೆ,ಹೆದರದೆ ನಾವು ನಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ನಮ್ಮ ಗುರಿಯನ್ನು ಸಾಧಿಸುವ ಛಲ ನಮ್ಮದಾಗಬೇಕು ಎಂದು ಕಿವಿ ಮಾತು ಹೇಳಿದರು.ನಂತರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸವನ್ನು ಶ್ರೀಮತಿ ಡಿ. ಶಬ್ರಿನಾ ಮಹಮದ್ ಅಲಿ, ಶಿಕ್ಷಕಿ ಹಾಗೂ ಕವಯತ್ರಿ ಇವರು ಮಾತನಾಡಿ ಮಹಿಳೆಯರು ಈ ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಮಾದರಿಯಾಗಿ ಜೀವನ ಸಾಗಿಸುತ್ತಿದ್ದಾಳೆ.

ಅಲ್ಲದೆ ಈ ಸೃಷ್ಟಿಯು ಒಂದು ಹೆಣ್ಣಿನಿಂದ ಹೆಣ್ಣು ಈ ಜಗದ ಕಣ್ಣು ಎಲ್ಲವನ್ನೂ ತನ್ನ ಮಡಿಲಿಗೆ ಹಾಕಿಕೊಳ್ಳುವ ಸಹಿಷ್ಣುತಾ ದಯಾಮಯಿ ಈ ಹೆಣ್ಣು ಎಂದರೆ ತಪ್ಪಾಗಲಾರದು, ಹಾಗಾಗಿ ಎಲ್ಲಿ ಹೆಣ್ಣನ್ನು ಪೂಜಿಸಿ ಗೌರವಿಸುತ್ತಾರೆ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬುದು ಅಷ್ಟೇ ಸತ್ಯ ಎಂದು ತಿಳಿಸಿದರು.ಶ್ರೀ ಗಾನಯೋಗಿ ಸಂಗೀತ ಬಳಗದ ಉಪ ಸಮಿತಿ ಉಪಾಧ್ಯಕ್ಷರು ಆದ ಶ್ರೀಮತಿ ಶಾಂತಮ್ಮ.ಕೆ.ಟಿ ಮಾತನಾಡಿ ಮಹಿಳೆಯರು ಹಿಂದಿನ ಕಾಲದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಅಷ್ಟೇ ಸೀಮಿತವಾಗಿದ್ದ ರು, ಜ್ಯೋತಿ ಬಾಪೂಲೆ, ಅಕ್ಕ ಮಹಾದೇವಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ವನಕೆ ಓಬವ್ವ ಬುದ್ಧ, ಬಸವ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್ ಅಂತಹ ಮಹಾನ್ ವ್ಯಕ್ತಿಗಳ ಮಾರ್ಗದರ್ಶನ ಮತ್ತು ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಹೆಣ್ಣು ಈ ಸಮಾಜದ ಕಣ್ಣು ಎಂದು ತಿಳಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿನ್ನೂಲಾದ್ರಿ ಸಾಹಿತ್ಯ ವೇದಿಕೆಯ ಗೌರವ ಸಲಹೆಗಾರರು ,ಪತ್ರಕರ್ತರು ಹಾಗೂ ಸಾಹಿತಿಗಳು ಆದ ಶ್ರೀಯುತ ಕೋರ್ಲಕುಂಟೆ ತಿಪ್ಪೇಸ್ವಾಮಿ ರವರು ಈ ದಿನ ಕವನ ವಾಚನ ಮಾಡಿದ ಎಲ್ಲ ಕವಿಗಳಿಗೆ ಮತ್ತು ಗಾಯನ ನೀಡಿದ ಎಲ್ಲ ಕಲಾವಿದರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿ ಇಂತಹ ನಿಮ್ಮ ಸಾಧನೆಗಳು ಮತ್ತು ಸೇವೆಗಳು ನಮ್ಮ ಕನ್ನಡ ನಾಡು ನುಡಿ,ಜಲ ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿ ಬೆಳೆಸುವ ಮತ್ತು ಉಳಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.ಈ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ದಯಾ ಪೂತೂರ್ಕರ್ ಮಾತನಾಡಿ ಈ ಸಾಹಿತ್ಯ ವೇದಿಕೆಯು ಸದಾ ಬರಹಗಾರರಿಗೆ ,ಯುವ ಕವಿಗಳಿಗೆ, ಸಾಹಿತಿಗಳಿಗೆ ಸ್ಪೂರ್ತಿಯನ್ನು ನೀಡುತ್ತಾ ಎಲೆ ಮರೆ ಕಾಯಿಯಂತೆ ಇರುವ ಬಹುಮುಖ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಸಿಸಿದರು, ಅಲ್ಲದೆ ಈ ಕಾರ್ಯಕ್ರಮದಲ್ಲಿ ಕೆಂಚಮಲ್ಲನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಕು.ಅಂಬುಜಾಕ್ಷಿ ಮತ್ತು ವಿದ್ಯಾಶ್ರೀ ಇವರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಭಾಷಣವಂತೂ ಎಲ್ಲ ಕೇಳುಗರ ಮನಸ್ಸನ್ನು ಕೇಂದ್ರೀಕರಿಸಿ ದಿಗ್ಭ್ರಮೆ ಮೂಡಿಸಿತು. ಈ ಕಾರ್ಯಕ್ರಮದಲ್ಲಿ ಸತೀಶ್ ಕುಮಾರ್,ಶಿವರುದ್ರಪ್ಪ ಪಂಡ್ರ ಹಳ್ಳಿ,ರೇಣುಕಾ ಪ್ರಕಾಶ್,ಮಹಮದ್ ಸಾದತ್,ಶಿವಕುಮಾರ್.ಆರ್, ವಿನಾಯಕ್ ಆರ್.ಜೆ, ಮುದ್ದುರಾಜ್ ಹುಲಿತೊಟ್ಲು, ಮೀರಾ ನಾಡಿಗ್,ಕೆ.ಎಸ್ ತಿಪ್ಪಮ್ಮ, ಪ್ರವೀಣ್ ಕುಮಾರ್ ನಿರ್ಮಲಾ, ಮುರಳಿ ಬೆಳಕು ಪ್ರಿಯ, ತಿಪ್ಪಿರಮ್ಮ,ಮಹಮದ್ ರಫಿ,ಸವಿತಾ ಮುದ್ಗಲ್,ಮೆಹಬೂಬ್,ಜಯದೇವ ಮೂರ್ತಿ, ಡಾ.ಬಸವರಾಜ್ ಹರ್ತಿ,ಕೆ.ಎನ್ ದೇವರಾಜ್,ನಿರ್ಮಲ ಭಾರಧ್ವಾಜ್ ಉಪಸ್ಥಿತರಿದ್ದರು, ಮೂವತ್ತಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು,ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಗಾಯನ ನೀಡಿದರು ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ಪ್ರಧಾನ ಕಾರ್ಯದರ್ಶಿಗಳು ಆದ ಶ್ರೀಯುತಶಿವಾನಂದ.ಎನ್ ಬಂಡೆಹಳ್ಳಿ ಕಾರ್ಯಕ್ರಮ ನಿರೂಪಿಸಿದರುವಿಶೇಷ ಪತ್ರಿಕಾ ಪ್ರತಿನಿಧಿಯಾದ ಶ್ರೀಯುತಶಿವಮೂರ್ತಿ.ಟಿ ಕೋಡಿಹಳ್ಳಿ ಸ್ವಾಗತಿಸಿದರು, ಶ್ರೀಮತಿ ಸುಜಾತ ಪ್ರಾಣೇಶ್ ವಂದಿಸಿದರು.

ವರದಿ : ಕೋಡಿಹಳ್ಳಿ ಶಿವಮೂರ್ತಿ.ಟಿ ಚಳ್ಳಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button