“ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ”…..

• ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿರಿ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿರಿ.

• ಓದಿರುವ ವಿಷಯವನ್ನು ಗುಂಪಲ್ಲಿ ಚರ್ಚೆ

ಮಾಡಿರಿ

• ನೀವು ಓದಿರುವ ವಿಷಯವನ್ನು ಮತ್ತೊಬ್ಬರ ಮುಂದೆ ವ್ಯಕ್ತಪಡಿಸಿರಿ ಅಂದಾಗ ನಿಮಗೆ ಬಹಳ ದಿನಗಳ ಮಟ್ಟಿಗೆ ನೆನಪಿರುತ್ತದೆ.

• ಪ್ರತಿನಿತ್ಯ ತರಗತಿಗಳಲ್ಲಿ ಹೇಳುವ ವಿಷಯ ನಾಳೆ ಪರೀಕ್ಷೆಗಳಲ್ಲಿ ಬಂದೇ ಬರುತ್ತದೆ ಎಂದು ಗಮನ ಕೊಟ್ಟು ಕೇಳಿರಿ.

• ಗಣಿತ ಹಾಗೂ ವಿಜ್ಞಾನ ಚಿತ್ರಗಳನ್ನು ನಿದ್ದೆ ಬರುವ ಸಮಯದಲ್ಲಿ ಹಾಗೂ ಊಟವಾದ ಮೇಲೆ ಪ್ರಾಕ್ಟೀಸ್ ಮಾಡಿರಿ.

• ಪರೀಕ್ಷೆಯ ದಿನ ಓದಬೇಡಿ, ಓದಿ ಗೊಂದಲ ಮಾಡಿಕೊಳ್ಳಬೇಡಿ. ಪರೀಕ್ಷೆಯ ಹಿಂದಿನ ದಿನ ರಾತ್ರಿ 10 ಗಂಟೆಯವರೆಗೆ ಮಾತ್ರ ಓದಿ ನಂತರ ಚೆನ್ನಾಗಿ ನಿದ್ದೆ ಮಾಡಿ.

• ಪ್ರತಿನಿತ್ಯ ನೀವು ಓದುವಾಗ ನಾಳೆಯೇ ಪರೀಕ್ಷೆ ಇದೆ ಎಂದು ಓದಿರಿ.

• ಎಲ್ಲಾ ರೀತಿಯ ಗಣಿತ ಸೂತ್ರಗಳನ್ನು ಒಂದು ಕಡೆ ಲಿಸ್ಟ್ ಮಾಡಿ ಬರೆದು ಇಟ್ಟುಕೊಳ್ಳಿ.

• ಈ ರೀತಿಯ ಪರೀಕ್ಷೆ ನಿಮ್ಮ ಬದುಕಲ್ಲಿ ಒಮ್ಮೆ ಮಾತ್ರ ಬರುತ್ತದೆ ಹಾಗಾಗಿ ಚೆನ್ನಾಗಿ ಓದಿರಿ.

• ನಿಮ್ಮ ಪರೀಕ್ಷೆಯ ಫಲಿತಾಂಶ ಪತ್ರಿಕೆಗಳಲ್ಲಿ ಪ್ರಕಟವಾಗುವಂತಿರಬೇಕು ಆ ನಿಟ್ಟಿನಲ್ಲಿ ಓದಿರಿ.

• ನಿಮ್ಮ ಪರೀಕ್ಷೆಯ ಫಲಿತಾಂಶ ವೇದಿಕೆ ಮೇಲೆ ಸನ್ಮಾನ ಸ್ವೀಕರಿಸುವಂತಾಗಿರಬೇಕು.

• ನಿತ್ಯ ತೋರುಬೆರಳನ್ನು ಅಕ್ಷರದ ಮೇಲಿಟ್ಟೆ ಓದಿರಿ.

• ಸಾಧ್ಯವಾದರೆ ನೀವು ಏನನ್ನು ಓದಿರುತ್ತೀರೋ ಅದನ್ನೆಲ್ಲವನ್ನು ಬರೆದು ತೆಗೆಯಿರಿ, ನೋಡಿಕೊಳ್ಳದೆ.

• ಪರೀಕ್ಷೆಗಳಲ್ಲಿ ಯಾವುದನ್ನು ಖಾಲಿ ಬಿಡಬೇಡಿ ಗೊತ್ತಿರದಿದ್ದರೂ ಏನಾದರೂ ಅದಕ್ಕೆ ಸಂಬಂಧಿಸಿದ ಮಾಹಿತಿ ಬರೆಯಿರಿ.

• ಒಂದೇ ರೀತಿಯ ಪೆನ್ ಅನ್ನು ಉಪಯೋಗಿಸಿರಿ.

• ಪರೀಕ್ಷೆಯ ಕೋಣೆಯಲ್ಲಿ ಅಕ್ಕಪಕ್ಕದವರನ್ನು ನೋಡಿ ಭಯಪಡಬೇಡಿ. ನಿಮ್ಮ ಆತ್ಮವಿಶ್ವಾಸದ ಮೇಲೆ ನಂಬಿಕೆ ಇಡಿ.

• ಪರೀಕ್ಷೆ ಸಮಯದಲ್ಲಿ ಭಯವಾದಾಗ ನಿಮ್ಮ ಎರಡು ಹೆಬ್ಬೆರಳುಗಳನ್ನು ಜೋರಾಗಿ ಊದಿಕೊಳ್ಳಿ

• ಓದುವ ಸಮಯದಲ್ಲಿ ಮತ್ತು ಬರೆಯುವ ಸಮಯದಲ್ಲಿ ಅತೀ ಹೆಚ್ಚು ನೀರನ್ನು ಕುಡಿಯಿರಿ.

• ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಮೆದುಳನ್ನು ಕ್ರಿಯಾಶೀಲ ಗೊಳಿಸಲು ಒಂದು ಲೋಟ ಬಿಸಿ ನೀರನ್ನು ಕುಡಿಯಿರಿ.

• ಪ್ರತಿನಿತ್ಯ ಮಲಗುವಾಗ ತಪ್ಪದೇ ಬಾಳೆಹಣ್ಣು ತಿನ್ನಿರಿ ಇದರಿಂದ ನಿಮ್ಮ ಮೆದುಳು ಕ್ರಿಯಾಶೀಲವಾಗುವುದು.

• ನಿತ್ಯ ಮೂರು ಬಾರಿಯಾದರೂ ಕಿವಿ ಹಿಡಿದು ಬಸ್ಕಿ ಹೊಡೆಯಿರಿ. ಇದು ಮೆದುಳನ್ನ ಚುರುಕುಗೊಳಿಸುವುದು.

• ಸಾಧ್ಯವಾದರೆ ಎರಡು ಬಾರಿ ಬ್ರಮರಿ ಪ್ರಾಣಾಯಾಮ ಮಾಡಿರಿ.

• ಒಂದು ದಿನಕ್ಕೆ ಮೂರು ಬಾರಿ ಅನುಲೋಮ ವಿಲೋಮ ಪ್ರಾಣಾಯಾಮ ಮಾಡಿರಿ.

• ಪ್ರತಿ ವಿಷಯಕ್ಕೆ ಸಮನಾದ ಸಮಯವನ್ನು ನೀಡಿ ಅಭ್ಯಾಸ ಮಾಡಿರಿ.ನಿಮ್ಮ ಪರೀಕ್ಷೆಗಳಿಗೆ

ಶುಭವಾಗಲಿ……

ಶ್ರೀ ಮುತ್ತು.ಯ.ವಡ್ಡರ

ಶಿಕ್ಷಕರು ಬಾಗಲಕೋಟ

9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button